ರಿಪೇರಿಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದಕ್ಕಾಗಿ ಒಂದು ಹೋರಾಟವೇ ನಡೆಯುತ್ತಿದೆ. ಅಮೆರಿಕದಲ್ಲಿ ಇದಕ್ಕೆ ಸಂಬಂಧಿಸಿದ ಕಾನೂನನ್ನೂ ತರಲಾಗಿದೆ. ಈ ರಿಪೇರಿ ಹೋರಾಟದ ಮುಂಚೂಣಿಯಲ್ಲಿ ಪರಿಸರಪ್ರೇಮಿ ಸಂಸ್ಥೆಗಳೇ ಇವೆ. ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ರಿಪೇರಿ ಮಾಡದೇ ಇರುವುದರಿಂದ ಅವುಗಳ ಬಾಳಿಕೆ ಅವಧಿ ಕಡಿಮೆಯಾಗಿ, ಬೇಗ ಇ–ತ್ಯಾಜ್ಯವಾಗುತ್ತದೆ.

ಮನೆಯಲ್ಲಿರುವ ಎಲೆಕ್ಟ್ರಾನಿಕ್ ಸಾಮಗ್ರಿಗಳ ‘ರಿಪೇರಿ’ ಎಂಬ ಶಬ್ದವನ್ನೇ ನಾವು ಬಹುತೇಕ ಮರೆತಿದ್ದೇವೆ. ಮೊಬೈಲ್ ಹಾಳಾದರೆ ರಿಪೇರಿ ಮಾಡಿಸುವುದಿಲ್ಲ. ಬದಲಿಗೆ ಅದನ್ನು ಎಸೆದು ಹೊಸ ಮೊಬೈಲ್ ತರುತ್ತೇವೆ. ಸ್ಮಾರ್ಟ್ವಾಚ್ನಂತಹ ಸಣ್ಣ ಗ್ಯಾಜೆಟ್ಗಳಿಂದ ಲ್ಯಾಪ್ಟಾಪ್, ಟಿವಿಯಂತಹ ದೊಡ್ಡ ಗ್ಯಾಜೆಟ್ಗಳೂ ಈಗ ರಿಪೇರಿಗೆ ಆದ್ಯತೆ ನೀಡುತ್ತಿಲ್ಲ. ಬದಲಿಗೆ, ಅವು ಹಾಳಾದ ಮೇಲೆ ಎಸೆದು ಹೊಸ ಗ್ಯಾಜೆಟ್ಗಳನ್ನು ತರುವುದಕ್ಕೇ ಆದ್ಯತೆ ನೀಡುತ್ತೇವೆ.

ಇದಕ್ಕೆ ಪೂರಕವಾಗಿ ಇಂಥ ಗ್ಯಾಜೆಟ್ಗಳನ್ನು ಬಳಸುವ ತಮ್ಮ ಗ್ರಾಹಕರನ್ನು ಗ್ಯಾಜೆಟ್ಗಳ ಮಾಲೀಕರು ಎಂದು ಪರಿಗಣಿಸುವುದಿಲ್ಲ; ಅವರನ್ನು ಬಳಕೆದಾರರು ಎಂದು ಪರಿಗಣಿಸುತ್ತದೆ. ಅಂದರೆ, ಆ ಗ್ಯಾಜೆಟ್ ಅನ್ನು ಅವರು ಬಳಸುತ್ತಿದ್ದಾರೆ ಅಷ್ಟೇ! ಆ ಸಾಧನದಲ್ಲಿ ಯಾವುದೇ ಬದಲಾವಣೆ ಮಾಡುವುದಿದ್ದರೂ ಅದನ್ನು ನಮ್ಮ ಸರ್ವೀಸ್ ಸೆಂಟರ್ಗೇ ತೆಗೆದುಕೊಂಡು ಬರಬೇಕು ಮತ್ತು ಸರ್ವೀಸ್ ಸೆಂಟರ್ನಲ್ಲಿ ಯಾವ ರಿಪೇರಿ ಸಾಧ್ಯವಿದೆಯೋ ಅದಷ್ಟನ್ನೇ ಮಾಡಿಸಬೇಕು ಎಂಬಂಥ ಮನೋಭಾವ ಎಲೆಕ್ಟ್ರಾನಿಕ್ ಗ್ಯಾಜೆಟ್ ಕಂಪನಿಗಳಲ್ಲಿ ಬೆಳೆದಿದೆ.

ಇದನ್ನು ಹೋಗಲಾಡಿಸಿ, ರಿಪೇರಿಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದಕ್ಕಾಗಿ ಒಂದು ಹೋರಾಟವೇ ನಡೆಯುತ್ತಿದೆ. ಅಮೆರಿಕದಲ್ಲಿ ಇದಕ್ಕೆ ಸಂಬಂಧಿಸಿದ ಕಾನೂನನ್ನೂ ತರಲಾಗಿದೆ. ಈ ರಿಪೇರಿ ಹೋರಾಟದ ಮುಂಚೂಣಿಯಲ್ಲಿ ಪರಿಸರಪ್ರೇಮಿ ಸಂಸ್ಥೆಗಳೇ ಇವೆ. ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ರಿಪೇರಿ ಮಾಡದೇ ಇರುವುದರಿಂದ ಅವುಗಳ ಬಾಳಿಕೆ ಅವಧಿ ಕಡಿಮೆಯಾಗಿ, ಬೇಗ ಇ–ತ್ಯಾಜ್ಯವಾಗುತ್ತದೆ. ಅದರಿಂದ, ಇ–ತ್ಯಾಜ್ಯದ ಪ್ರಮಾಣ ಹೆಚ್ಚಳವಾಗುತ್ತದೆ. ಹೀಗಾಗಿ, ಗ್ರಾಹಕರಿಗೆ ಹೊಸದನ್ನು ಕೊಳ್ಳುವಂತೆ ಪ್ರೇರೇಪಿಸುವ ವ್ಯವಸ್ಥೆಗಿಂತ ರಿಪೇರಿ ಮಾಡಿಸಿಕೊಳ್ಳುವುದಕ್ಕೇ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂಬುದು ಈ ಸಂಸ್ಥೆಗಳ ಬೇಡಿಕೆ.

ಇದಕ್ಕೆ ಹೆಚ್ಚಿನ ಪ್ರತಿರೋಧ ಬಂದಿದ್ದು ಕೂಡ ದೊಡ್ಡ ದೊಡ್ಡ ಸಂಸ್ಥೆಗಳಿಂದಲೇ. ಆದರೆ, ಈಗ ಅಂತಹ ಸಂಸ್ಥೆಗಳೇ ಪ್ರತಿರೋಧಕ್ಕೆ ತಲೆಬಾಗಲು ಶುರು ಮಾಡಿವೆ. ಇತ್ತೀಚೆಗಷ್ಟೇ ಗೂಗಲ್ ತನ್ನ ಪಿಕ್ಸೆಲ್ ಫೋನ್ಗಳನ್ನು ಗ್ರಾಹಕರೇ ರಿಪೇರಿ ಮಾಡಿಕೊಳ್ಳಲು ಅನುವಾಗುವ ಹಾಗೆ ಇನ್ನಷ್ಟು ಆಯ್ಕೆಗಳನ್ನು ನೀಡಲಾಗುತ್ತದೆ ಎಂದು ಹೇಳಿದೆ. ಕಳೆದ ಮಾರ್ಚ್ನಲ್ಲಿ ಸ್ಯಾಮ್ಸಂಗ್ ತನ್ನ ಗ್ಯಾಲಾಕ್ಸಿ ಸರಣಿಯ ಫೋನ್ಗಳಿಗೆ ಸ್ವಯಂ ರಿಪೇರಿ ಪ್ರೋಗ್ರಾಮ್ ಅನ್ನು ಆರಂಭಿಸಿದೆ. ಇನ್ನು ಕಳೆದ ವರ್ಷ ಆ್ಯಪಲ್ ಕೂಡ ಆ್ಯಪಲ್ ಫೋನ್ಗಳಿಗೆ ಸ್ವಯಂ ರಿಪೇರಿ ಸೌಲಭ್ಯವನ್ನು ಒದಗಿಸಿದೆ. ಇದರಲ್ಲಿ 200ಕ್ಕೂ ಹೆಚ್ಚು ಅಸಲಿ ಬಿಡಿಭಾಗಗಳನ್ನು ಇದು ಒದಗಿಸುತ್ತಿದೆ.

ರಿಪೇರಿಗೆ ಒತ್ತು ನೀಡದೇ ಹೊಸದನ್ನೇ ಖರೀದಿಸಲು ಪ್ರೋತ್ಸಾಹಿಸುವುದರ ಹಿಂದೆ ಹಲವು ಕಾರಣಗಳಿವೆ. ಬಹುಮುಖ್ಯವಾಗಿ ಹೊಸ ಹೊಸ ಫೀಚರ್ಗಳು ಕಾಲಕಾಲಕ್ಕೆ ಅಪ್ಡೇಟ್ ಆಗುವುದರಿಂದ, ಅವುಗಳ ಹೆಸರಿನಲ್ಲಿ ಹೊಸ ಗ್ರಾಹಕರನ್ನು ಕಂಡುಕೊಳ್ಳುವುದಕ್ಕಾಗಿ ಕಂಪನಿಗಳು ಹೊಸ ಹೊಸ ಮಾಡೆಲ್ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತವೆ. ಇದರಿಂದ ಗ್ರಾಹಕರು ಅಗತ್ಯವಿದ್ದೋ ಇಲ್ಲದೆಯೋ ಹಳೆಯ ಮಾಡೆಲ್ಗಳ ಬದಲಿಗೆ ಹೊಸ ಹೊಸ ಮಾಡೆಲ್ಗಳನ್ನು ಖರೀದಿಸುತ್ತಿರುತ್ತಾರೆ. ಇದರ ಜೊತೆಗೆ, ಈಗಾಗಲೇ ಕಂಪನಿಗಳು ತಮ್ಮದೇ ಸರ್ವೀಸ್ ಸೆಂಟರ್ಗಳನ್ನು ಹೊಂದಿದ್ದರೂ, ಅಲ್ಲಿ ಕೆಲವು ಪ್ರಮುಖ ಬಿಡಿಭಾಗಗಳಿಗೆ ವಿಪರೀತ ದರವಿರುತ್ತದೆ. ಉದಾಹರಣೆಗೆ, ಸ್ಮಾರ್ಟ್ಫೋನ್ ಡಿಸ್ಪ್ಲೇ ಒಡೆದುಹೋದರೆ, ಅದನ್ನು ಬದಲಿಸುವುದಕ್ಕೆ ಇರುವ ದರ ಹೊಸ ಸ್ಮಾರ್ಟ್ಫೋನ್ ಖರೀದಿಗೆ ಸಮೀಪದಲ್ಲೇ ಇರುತ್ತದೆ. ಅದೂ ಅಲ್ಲದೆ, ಡಿಸ್ಪ್ಲೇ ಸುಲಭದಲ್ಲಿ ಸಿಗುವಂತೆಯೂ ಇರುವುದಿಲ್ಲ. ಗ್ರಾಹಕರು ಸರ್ವೀಸ್ ಸೆಂಟರ್ಗೆ ತಮ್ಮ ಸ್ಮಾರ್ಟ್ಪೋನ್ ತೆಗೆದುಕೊಂಡು ಹೋಗಿ ನೀಡಿದ ನಂತರ ವಾರಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ. ಇನ್ನು ಕೆಲವು ಸುಲಭ ಬದಲಾವಣೆಗಳನ್ನು ಮಾಡಿಕೊಳ್ಳಲು ಕಾಲಾನಂತರದಲ್ಲಿ ಕಂಪನಿಗಳೇ ತಡೆ ಒಡ್ಡುತ್ತವೆ. ಈ ಹಿಂದೆ, ಸ್ಮಾರ್ಟ್ಫೋನ್ನ ಹಿಂಬದಿ ಕವರ್ ತೆಗೆದರೆ ಅದರ ಬ್ಯಾಟರಿಯನ್ನು ಹೊರತೆಗೆಯಬಹುದಾಗಿತ್ತು. ಒಂದು ವೇಳೆ ಬ್ಯಾಟರಿ ಹಾಳಾದರೆ ಅದನ್ನಷ್ಟನ್ನೇ ತೆಗೆದು ಹೊಸದನ್ನು ಸೇರಿಸಿಕೊಳ್ಳುವ ಅವಕಾಶವಿತ್ತು. ಆದರೆ, ಕಾಲಾನಂತರದಲ್ಲಿ ಬ್ಯಾಟರಿಯನ್ನು ತೆಗೆಯಲು ಸಾಧ್ಯವಾಗದ ಹಾಗೆ ಕಂಪನಿಗಳೇ ಅದನ್ನು ಪ್ಯಾಕ್ ಮಾಡಿರುತ್ತವೆ. ಈ ಹಿಂದೆ, ಸ್ಮಾರ್ಟ್ಫೋನ್ನ ಒಂದು ಮಾಡೆಲ್ ಒಂದೇ ರೀತಿ ಇರುತ್ತಿದ್ದವು. ನಮ್ಮ ಸ್ಟೋರೇಜ್ ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಮೆಮೊರಿ ಕಾರ್ಡ್ ಅನ್ನು ಸೇರಿಸುವ ಅವಕಾಶವಿತ್ತು. ಆದರೆ, ಕಾಲಾನಂತರದಲ್ಲಿ ಬೇರೆ ಬೇರೆ ಮೆಮೊರಿ ಆಯ್ಕೆ ಇರುವ ಸ್ಮಾರ್ಟ್ಪೋನ್ಗಳನ್ನು ಕಂಪನಿಗಳು ಬಿಡುಗಡೆ ಮಾಡಲು ಶುರು ಮಾಡಿದವು. ಇದರಿಂದಾಗಿ, ಮೆಮೊರಿ ಅಗತ್ಯ ಹೆಚ್ಚಿದರೆ ಹೊಸ ಸ್ಮಾರ್ಟ್ಫೋನ್ನನ್ನೇ ಖರೀದಿ ಮಾಡುವ ಅನಿವಾರ್ಯ ಗ್ರಾಹಕರಿಗೆ ಉಂಟಾಯಿತು.

ಇದಲ್ಲದೆ, ಈಗ ಕಂಪನಿಗಳು ತಮ್ಮ ಸ್ಮಾರ್ಟ್ಫೋನ್, ಗ್ಯಾಜೆಟ್ನ ವಿನ್ಯಾಸವನ್ನೇ ಪೇಟೆಂಟ್ ಮಾಡಿರುತ್ತವೆ. ಹೀಗಾಗಿ ರಿಪೇರಿಯ ಮೂಲಕ ಯಾವುದೇ ಬದಲಾವಣೆ ಮಾಡಲು ಪೇಟೆಂಟ್ನಿಂದಾಗಿ ಅಡ್ಡಿಯಾಗುತ್ತದೆ.

ಈ ರಿಪೇರಿ ಹಕ್ಕು ಅಭಿಯಾನ ಯುರೋಪ್ ದೇಶಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಭಾರತದಲ್ಲಿ ಈ ವಿಚಾರ ಅಷ್ಟೇನೂ ಹೆಚ್ಚು ಪ್ರಮುಖವಾಗಿ ಕೇಳಿಬರುತ್ತಿಲ್ಲ. ಆದಾಗ್ಯೂ, ಭಾರತದಲ್ಲಿ ರಿಪೇರಿಗೆ ಇನ್ನೂ ಜನರು ಒಲವು ತೋರುತ್ತಿದ್ದಾರೆ. ಸರ್ವೀಸ್ ಸೆಂಟರ್ ಬಳಕೆಯೂ ಭಾರತದಲ್ಲಿ ಒಂದು ಹಂತದ ಮಟ್ಟಿಗೆ ನಡೆಯುತ್ತಿದೆ. ಆದರೆ, ಈಗಲೇ ಎಚ್ಚೆತ್ತು ಇದಕ್ಕೆ ಸಂಬಂಧಿಸಿದ ನೀತಿ ನಿಯಮಗಳನ್ನು ರೂಪಿಸಬೇಕಿದೆ. ಎಲೆಕ್ಟ್ರಾನಿಕ್ ಸಾಮಗ್ರಿಗಳ ರಿಪೇರಿಗೆ ಹೆಚ್ಚು ಒತ್ತು ನೀಡಿದರೆ ಆಗುವ ಪ್ರಮುಖ ಅನುಕೂಲ ಎಂದರೆ ಇ-ತ್ಯಾಜ್ಯದ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಆದರೆ, ಇದರ ಪ್ರಮುಖ ಅನಾನುಕೂಲ ಎಂದರೆ, ಹೊಸ ತಂತ್ರಜ್ಞಾನ ಬೇಗ ಜನರ ಕೈಗೆ ಸಿಗುವುದಿಲ್ಲ. ತಂತ್ರಜ್ಞಾನ ಕಂಪನಿಗಳು ತಮ್ಮ ಉತ್ಪನ್ನಗಳಿಗೆ ಹೊಸ ಗ್ರಾಹಕರನ್ನು ಹುಡುಕಿಕೊಳ್ಳಬೇಕೇ ಹೊರತು, ಈಗಾಗಲೇ ಹಳೆಯ ಮಾದರಿಯನ್ನು ಬಳಸುತ್ತಿರುವ ಗ್ರಾಹಕರಿಗೆ ಹೊಸದನ್ನು ಖರೀದಿಸುವಂತೆ ಮನವೊಲಿಸುವುದು ಕಷ್ಟವಾಗಲಿದೆ. ಇದರಿಂದ, ಎಲೆಕ್ಟ್ರಾನಿಕ್ ಸಾಧನ ಉತ್ಪಾದನೆಯನ್ನು ಮಾಡುವ ಕಂಪನಿಗಳ ಆದಾಯದ ಮೇಲೆ ಹೊಡೆತ ಬೀಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.