ಬೆಂಗಳೂರು: ಸ್ಯಾಮ್‌ಸಂಗ್ ಕಂಪನಿಯ ಹೊಸ 5ಜಿ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಮೂರು ಕ್ಯಾಮೆರಾ ಹೊಂದಿರುವ 'ಗ್ಯಾಲಕ್ಸಿ ಎಂ52' ಮಾದರಿಯ 5ಜಿ ಫೋನ್ ಅನಾವರಣಗೊಂಡಿದೆ.

ತೆಳುವಾದ ವಿನ್ಯಾಸ (7.4ಮಿಮೀ), ಕಡಿಮೆ ತೂಕ (173 ಗ್ರಾಂ), 6.7 ಇಂಚು ಎಫ್ಎಚ್‌ಡಿ+ಎಸ್‌ಅಮೊಲೆಡ್ ಡಿಸ್‌ಪ್ಲೇ (120ಹರ್ಟ್ಸ್), ಗೊರಿಲ್ಲಾ ಗ್ಲಾಸ್ 5, ಸ್ನ್ಯಾಪ್‌ಡ್ರ್ಯಾಗನ್ 778ಜಿ ಪ್ರೊಸೆಸರ್ ಅಳವಡಿಸಿರುವುದರಿಂದ ಕಾರ್ಯಾಚರಣೆ ವೇಗ ಹೆಚ್ಚಿದೆ ಮತ್ತು ಕಡಿಮೆ ಚಾರ್ಜ್ ಬಳಕೆಯಾಗಲಿದೆ ಹಾಗೂ ಎಐ ಕಾರ್ಯ ಸಾಮರ್ಥ್ಯದಲ್ಲಿ ಹೆಚ್ಚಳವಾಗಿದೆ ಎಂದು ಕಂಪನಿ ಪ್ರಕಟಿಸಿದೆ.

ಮೂರು ಕ್ಯಾಮೆರಾ: ಫೋನ್ ಹಿಂಬದಿಯಲ್ಲಿ ಮೂರು ಕ್ಯಾಮೆರಾ ಅಳವಡಿಸಲಾಗಿದೆ. 64ಎಂಪಿ ಮುಖ್ಯ ಕ್ಯಾಮೆರಾ, 12ಎಂಪಿ ಅಲ್ಟ್ರಾ–ವೈಡ್ ಹಾಗೂ 5ಎಂಪಿ ಮ್ಯಾಕ್ರೊ ಲೆನ್ಸ್ ಇದೆ. ಮುಂಬದಿಯಲ್ಲಿ ಸೆಲ್ಫಿಗಾಗಿ 32ಎಂಪಿ ಕ್ಯಾಮೆರಾ ಇದೆ.

ಫೋನ್‌ನಲ್ಲಿ 5000ಎಂಎಎಚ್ ಬ್ಯಾಟರಿ ಇದೆ. 6ಜಿಬಿ ರ್‍ಯಾಮ್ ಮತ್ತು 128ಜಿಬಿ ಸಂಗ್ರಹ ಸಾಮರ್ಥ್ಯದ ಫೋನ್‌ಗೆ ಆರಂಭಿಕ ಕೊಡುಗೆಯಾಗಿ₹26,999 ಬೆಲೆ ನಿಗದಿಯಾಗಿದೆ. 8ಜಿಬಿ ರ್‍ಯಾಮ್ ಹಾಗೂ 128ಜಿಬಿ ಸಂಗ್ರಹ ಸಾಮರ್ಥ್ಯದ ಫೋನ್‌ಗೆ 28,999 ನಿಗದಿ ಪಡಿಸಿರುವುದಾಗಿ ಸ್ಯಾಮ್‌ಸಂಗ್ ಪ್ರಕಟಿಸಿದೆ. ಐಸಿ ಬ್ಲ್ಯೂ ಮತ್ತು ಬ್ಲೇಜಿಂಗ್ ಬ್ಲ್ಯಾಕ್ ಬಣ್ಣಗಳಲ್ಲಿ ಫೋನ್ ಲಭ್ಯವಿದೆ.

ಗ್ಯಾಲಕ್ಸಿ ಎಂ52 ಫೋನ್ ಹನ್ನೊಂದು 5ಜಿ ಬ್ಯಾಂಡ್‌ಗಳಿಗೆ ಸಹಕಾರಿಯಾಗಿದೆ. 5ಜಿ ಸಂಪರ್ಕ ಸಾಧ್ಯವಾಗುತ್ತಿದ್ದಂತೆ, ಬಳಕೆದಾರರು ಕಾಯುವಿಕೆ ಇಲ್ಲದ ಲೈವ್ ಸ್ಟ್ರೀಮಿಂಗ್ ಹಾಗೂ ಆನ್‌ಲೈನ್ ಗೇಮಿಂಗ್ ಸಾಧ್ಯವಾಗಲಿದೆ. ಆ್ಯಂಡ್ರಾಯ್ಡ್ 11 ಒಸ್ ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.