ಬೆಂಗಳೂರು: ಐಕ್ಯೂ ಕಂಪನಿ ಚೀನಾದ ಮಾರುಕಟ್ಟೆಗೆ ನೂತನ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ.

ವಿವೊ ಕಂಪನಿಯ ಸಬ್ ಬ್ರ್ಯಾಂಡ್ ಆಗಿರುವ ಐಕ್ಯೂ, ಹೊಸ ಫ್ಲ್ಯಾಗ್ಶಿಪ್ ಸ್ಮಾರ್ಟ್ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ಹೊಸ ಐಕ್ಯೂ 11 ಪ್ರೊ ಸ್ಮಾರ್ಟ್ಫೋನ್ನಲ್ಲಿ ಆ್ಯಂಡ್ರಾಯ್ಡ್ 13 ಆಧಾರಿತ ಒರಿಜಿನ್ ಓಎಸ್ 3 ಇದ್ದು, 6.78 ಇಂಚಿನ ಡಿಸ್ಪ್ಲೇ ಇದೆ.

ಸ್ನ್ಯಾಪ್ಡ್ರ್ಯಾಗನ್ 8 ಜೆನ್. 2 ಒಕ್ಟಾ ಕೋರ್ ಪ್ರೊಸೆಸರ್ ಇದ್ದು, 16GB of LPDDR5 RAM, 512 GB ಸ್ಟೋರೇಜ್ ಮತ್ತು Adreno 740 ಗ್ರಾಫಿಕ್ಸ್ ಬೆಂಬಲ ಹೊಂದಿದೆ ಎಂದು ಕಂಪನಿ ಹೇಳಿದೆ.

ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ಇದ್ದು, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲೆನ್ಸ್ ಜತೆಗೆ 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಹಾಗೂ 13 ಮೆಗಾಪಿಕ್ಸೆಲ್ ಪೋಟ್ರೇಟ್ ಲೆನ್ಸ್ ಇದೆ. ಉಳಿದಂತೆ, 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.

4,700mAh ಬ್ಯಾಟರಿ ಜತೆಗೆ 200W ಫಾಸ್ಟ್ ಚಾರ್ಜಿಂಗ್, 50W ವೈರ್ಲೆಸ್ ಚಾರ್ಜಿಂಗ್ ಬೆಂಬಲ ಹೊಂದಿದೆ.

Vivo Y02: ಹೊಸ ಸ್ಮಾರ್ಟ್ಫೋನ್ ಪರಿಚಯಿಸಿದ ವಿವೊ

ಭಾರತದಲ್ಲಿ ಬಿಡುಗಡೆ ಮತ್ತು ಬೆಲೆ ವಿವರವನ್ನು ಕಂಪನಿ ಬಹಿರಂಗಪಡಿಸಿಲ್ಲ.

ಭಾರತದಲ್ಲಿ ಸ್ಮಾರ್ಟ್ಫೋನ್ಗಳಿಗೆ ಏಕರೂಪದ ಚಾರ್ಜರ್: ಶೀಘ್ರದಲ್ಲಿ ಜಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.