ನವದೆಹಲಿ: ಜಿಯೋ ಹಾಗೂ ಗೂಗಲ್ ಸಹಯೋಗದಲ್ಲಿ ನಿರ್ಮಿಸಲಾಗಿರುವ ಹೊಚ್ಚ ಹೊಸ ಜಿಯೋಫೋನ್ ನೆಕ್ಸ್ಟ್ ದೀಪಾವಳಿ ಹಬ್ಬದ ವೇಳೆಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಜಿಯೋಫೋನ್ ನೆಕ್ಸ್ಟ್ ವಿಶೇಷ ಫೈನಾನ್ಸ್ ಯೋಜನೆಯೊಂದಿಗೆ ಗ್ರಾಹಕರಿಗೆ ಸುಲಭವಾಗಿ ಕೈಗೆಟುಕಲಿದೆ. ಅಂದರೆ ₹1,999 ಮಾತ್ರ ಪಾವತಿಸಿ ಈ ಫೋನ್ ಖರೀದಿಸಬಹುದು. ಇನ್ನುಳಿದ ಮೊತ್ತವನ್ನು 18 ತಿಂಗಳು ಅಥವಾ 24 ತಿಂಗಳ ಕಂತುಗಳ ಮೂಲಕ ಪಾವತಿಸಬಹುದು ಎಂದು ಕಂಪನಿ ಹೇಳಿದೆ. ಈ ಕಂತುಗಳ ಮೊತ್ತವು ಗ್ರಾಹಕರು ಪ್ರತಿ ತಿಂಗಳು ತಮ್ಮ ಮೊಬೈಲ್ ರಿಚಾರ್ಜ್ ಮಾಡಿಸಿಕೊಳ್ಳಲು ಪಾವತಿಸಬೇಕಿರುವ ಮೊತ್ತವನ್ನೂ ಒಳಗೊಂಡಿರುತ್ತದೆ.

₹1999 ಜೊತೆಗೆ ಬಾಕಿ ಉಳಿದ ಮೊತ್ತಕ್ಕೆಸುಲಭ ಇಎಂಐ ಯೋಜನೆ ಇಂತಿದೆ:

(ಆಲ್‌ವೇಸ್ ಆನ್ ಪ್ಲ್ಯಾನ್):
24 ತಿಂಗಳು: ₹300/ಮಾಸಿಕ
18 ತಿಂಗಳು: ₹350/ಮಾಸಿಕ
ತಿಂಗಳಿಗೆ 5 ಜಿಬಿ ಡೇಟಾ, 100 ನಿಮಿಷಗಳ ಕರೆ

(ಲಾರ್ಜ್ ಪ್ಲ್ಯಾನ್):
24 ತಿಂಗಳು: ₹450/ಮಾಸಿಕ
18 ತಿಂಗಳು: ₹500/ಮಾಸಿಕ
ಪ‍್ರತಿದಿನ 1.5 ಜಿಬಿ ಡೇಟಾ, ಅನಿಯಮಿತ ಕರೆ ಸೌಲಭ್ಯ

(ಎಕ್ಸ್‌ಎಲ್ ಪ್ಲ್ಯಾನ್)
24 ತಿಂಗಳು: ₹500/ಮಾಸಿಕ
18 ತಿಂಗಳು: ₹550/ಮಾಸಿಕ
ಪ‍್ರತಿದಿನ 2.5 ಜಿಬಿ ಡೇಟಾ, ಅನಿಯಮಿತ ಕರೆ ಸೌಲಭ್ಯ

(ಎಕ್ಸ್‌ಎಕ್ಸ್‌ಎಲ್ ಪ್ಲ್ಯಾನ್)
24 ತಿಂಗಳು: ₹550/ಮಾಸಿಕ
18 ತಿಂಗಳು: ₹600/ಮಾಸಿಕ

ಇದಲ್ಲದೆ ಯಾವುದೇ ಫೈನಾನ್ಸ್ ಯೋಜನೆ ಇಲ್ಲದೆ ₹6499ಗೆ ಜಿಯೋಫೋನ್ ನೆಕ್ಸ್ಟ್ ಖರೀದಿಸಬಹುದಾಗಿದೆ.

ಜಿಯೊಫೋನ್ ನೆಕ್ಸ್ಟ್ ಖರೀದಿಸಲು ಆಸಕ್ತಿ ಇರುವವರು ತಮ್ಮ ಹತ್ತಿರದ ಜಿಯೊ ಮಾರ್ಟ್ ಡಿಜಿಟಲ್ ರಿಟೇಲರ್ ಅಥವಾ jio.com/next ವೆಬ್‌ಸೈಟ್‌ಗೆ ಭೇಟಿ ನೀಡಿ ಹಸರು ನೋಂದಾಯಿಸಬಹುದು. ಅಥವಾ, ವಾಟ್ಸ್‌ಆ್ಯಪ್ ಮೂಲಕ70182-70182 ಸಂಖ್ಯೆಗೆ HI ಎಂದು ಸಂದೇಶ ಕಳುಹಿಸಬಹುದು.

ಜಿಯೊ ಕಡೆಯಿಂದ ಪ್ರತಿಕ್ರಿಯೆ ಲಭ್ಯವಾದ ನಂತರದಲ್ಲಿ ಹತ್ತಿರದ ಜಿಯೊಮಾರ್ಟ್ ರಿಟೇಲರ್ ಬಳಿ ಹೋಗಿ ಫೋನ್ ಪಡೆದುಕೊಳ್ಳಬಹುದು ಎಂದು ಕಂಪನಿ ತಿಳಿಸಿದೆ.

‘ಇಂಗ್ಲಿಷ್ ಓದಲು ಆಗದವರು, ಇಂಗ್ಲಿಷ್‌ನಲ್ಲಿನ ಹೂರಣವನ್ನು ಅನುವಾದಿಸಿಕೊಳ್ಳುವ ಸೌಲಭ್ಯ ಇದರಲ್ಲಿದೆ. ತಮ್ಮ ಭಾಷೆಯಲ್ಲೇ ಇರುವ ಹೂರಣವನ್ನೂ ಈ ಫೋನ್ ಬಳಕೆದಾರರಿಗೆ ಓದಿ ಹೇಳಬಲ್ಲದು. ನಾವು ಇಂಡಿಯಾ ಮತ್ತು ಭಾರತದ ನಡುವಿನ ಅಂತರವನ್ನು ಕಡಿಮೆ ಮಾಡುತ್ತಿದ್ದೇವೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ’ ಎಂದು ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಜಿಯೋ ಹಾಗೂ ಗೂಗಲ್ ಜಂಟಿಯಾಗಿ ಜಿಯೋಫೋನ್ ನೆಕ್ಸ್ಟ್ ಅನ್ನು ವಿನ್ಯಾಸಗೊಳಿಸಿದೆ. ಯುವಜನತೆ ಮತ್ತು ಡಿಜಿಟಲ್ ಸಂಪರ್ಕ ಕ್ರಾಂತಿ, ಉದ್ಯೋಗ, ಶಿಕ್ಷಣ, ಉದ್ಯಮ, ಮನರಂಜನೆ ಸಹಿತ ವಿವಿಧ ಕ್ಷೇತ್ರಗಳನ್ನು ಗಮನದಲ್ಲಿರಿಸಿಕೊಂಡು ಜಿಯೋಫೋನ್ ನೆಕ್ಸ್ಟ್ ತಯಾರಿಸಲಾಗಿದೆ ಎಂದು ಕಂಪನಿ ಹೇಳಿದೆ. ಅಲ್ಲದೆ, ಜಿಯೋಫೋನ್ ನೆಕ್ಸ್ಟ್ ಭಾರತದಲ್ಲಿ, ಭಾರತಕ್ಕಾಗಿ ಹಾಗೂ ಭಾರತೀಯರಿಂದ ನಿರ್ಮಿಸಲಾಗಿದೆ.

ಆಂಡ್ರಾಯ್ಡ್ ಬೆಂಬಲಿತ ದೇಶಿಯ ಪ್ರಗತಿ ಓಎಸ್
ಭಾರತವನ್ನು ಕೇಂದ್ರವಾಗಿಟ್ಟುಕೊಂಡು ಈ ಹೊಸ ಫೋನ್ ಅನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಸರಳ ವಿನ್ಯಾಸ ಇದ್ದು, ಗೂಗಲ್‌ನ ಆಂಡ್ರಾಯ್ಡ್ ಬೆಂಬಲಿತ ದೇಶಿಯ ಪ್ರಗತಿ ಓಎಸ್ ಮೂಲಕ ಕಾರ್ಯನಿರ್ವಹಿಸಲಿದೆ.

ಕ್ವಾಲ್ಕಂ ಪ್ರೊಸೆಸರ್
ರಿಲಯನ್ಸ್ ಜಿಯೋ ಪರಿಚಯಿಸುತ್ತಿರುವ ಜಿಯೋಫೋನ್ ನೆಕ್ಸ್ಟ್, ಕ್ವಾಲ್ಕಂ ಪ್ರೊಸೆಸರ್ ಹೊಂದಿದೆ. ಇದರಿಂದಾಗಿ ಹೊಸ ಜಿಯೋಫೋನ್‌ನಲ್ಲಿ ಕಾರ್ಯಕ್ಷಮತೆ, ಆಡಿಯೋ ಮತ್ತು ಬ್ಯಾಟರಿಯಲ್ಲಿ ಆಪ್ಟಿಮೈಸೇಶನ್ ಜೊತೆಗೆ ಆಪ್ಟಿಮೈಸ್ಡ್ ಕನೆಕ್ಟಿವಿಟಿ ಮತ್ತು ಲೊಕೇಶನ್ ತಂತ್ರಜ್ಞಾನದ ಪ್ರಯೋಜನ ಪಡೆಯಬಹುದು.

ಗೂಗಲ್ ವಾಯ್ಸ್ ಅಸಿಸ್ಟನ್ಸ್, ರೀಡ್ ಅಲೌಡ್, ಅನುವಾದ, ಸರಳ ಮತ್ತು ಸ್ಮಾರ್ಟ್ ಕ್ಯಾಮೆರಾ, ಜಿಯೋ ಮತ್ತು ಗೂಗಲ್ ಆ್ಯಪ್, ಸಾಫ್ಟ್‌ವೇರ್ ಅಪ್‌ಗ್ರೇಡ್, ಬ್ಯಾಟರಿ ಬಾಳಿಕೆ ವಿಶಿಷ್ಟತೆಗಳನ್ನುಒಳಗೊಂಡಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.