ನವದೆಹಲಿ: ಬೇಸಿಕ್ ಫೀಚರ್ ಫೋನ್, ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಹೆಸರು ಗಳಿಸಿರುವ ನೋಕಿಯಾ, ಇದೀಗ ಆಕರ್ಷಕ ವಿನ್ಯಾಸದ ಟ್ಯಾಬ್ಲೆಟ್ (Nokia T20) ಅನ್ನು ದೇಶದಲ್ಲಿ ಬಿಡುಗಡೆ ಮಾಡಿದೆ.

ನೋಕಿಯಾ T20 ಟ್ಯಾಬ್ಲೆಟ್ ಅನ್ನು ಎಚ್‌ಎಂಡಿ ಗ್ಲೋಬಲ್ ಪರಿಚಯಿಸಿದ್ದು, ಇದು 2K ಡಿಸ್‌ಪ್ಲೇ, 8 ಮೆಗಾಪಿಕ್ಸೆಲ್ ಕ್ಯಾಮೆರಾ, 8,200mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ ಡ್ಯುಯಲ್ ಮೈಕ್ರೊಫೋನ್ ಮತ್ತು ಸ್ಟೀರಿಯೋ ಸ್ಪೀಕರ್‌ಗಳನ್ನು ಒಳಗೊಂಡಿದೆ.

ದೇಶದಲ್ಲಿ ಇದರ ಆರಂಭಿಕ ಬೆಲೆ 3GB RAM ಮತ್ತು 32GB ಸ್ಟೋರೇಜ್ ಆಯ್ಕೆಯ ವೈ–ಫೈ ಮಾದರಿ ₹15,499 ಆಗಿದೆ. ಈ ಟ್ಯಾಬ್ಲೆಟ್‌ನ ವೈ-ಫೈ ಮಾದರಿಯ 4GB RAM ಮತ್ತು 32GB ಕಾನ್ಫಿಗರೇಶನ್ ಮಾದರಿಗೆ ₹16,499 ಹಾಗೂ ವೈ-ಫೈ + 4G ಮಾದರಿಗೆ ₹18,499 ದರ ನಿಗದಿ ಮಾಡಲಾಗಿದೆ.

ಈ ಟ್ಯಾಬ್ಲೆಟ್ ದೇಶದಲ್ಲಿನ ನೋಕಿಯಾದ ಅಧಿಕೃತ ಮಳಿಗೆಗಳು ಮತ್ತು ಆಫ್‌ಲೈನ್ ರಿಟೇಲ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

Nokia T20 ವಿಶೇಷತೆಗಳು:

* ನೋಕಿಯಾ T20 ಟ್ಯಾಬ್ಲೆಟ್ 2,000×1,200 ಪಿಕ್ಸೆಲ್ ಸ್ಕ್ರೀನ್ ರೆಸೊಲ್ಯುಶನ್ ಸಾಮರ್ಥ್ಯದ 10.4 ಇಂಚಿನ 2K ಡಿಸ್‌ಪ್ಲೇಯನ್ನು ಹೊಂದಿದೆ.

* ಆ್ಯಂಡ್ರಾಯ್ಡ್ 11 ಓಎಸ್ ಹೊಂದಿದ್ದು, ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 512 GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

* 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಹಿಂಬದಿ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಈ ಟ್ಯಾಬ್ಲೆಟ್ ಒಳಗೊಂಡಿದೆ.

* OZO ಪ್ಲೇಬ್ಯಾಕ್ ಮತ್ತು ಸ್ಟಿರಿಯೊ ಸ್ಪೀಕರ್‌ಗಳನ್ನು ಈ ಟ್ಯಾಬ್ಲೆಟ್ ಹೊಂದಿದೆ.

* ಈ ಟ್ಯಾಬ್ಲೆಟ್ 8,200mAh ಬ್ಯಾಟರಿ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, ವೈಫೈ, ಬ್ಲೂಟೂತ್ v5.0, USB Type-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.