ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಒನ್‌ಪ್ಲಸ್ ಕಂಪನಿಯು ತನ್ನ ಹ್ಯಾಂಡ್‌ಸೆಟ್‌ಗಳ ಗುಣಮಟ್ಟ ಮತ್ತು ವೈಶಿಷ್ಟ್ಯದಲ್ಲಿ ಸಾಕಷ್ಟು ಬದಲಾವಣೆ ಮಾಡುತ್ತಾ ಬಂದಿದೆ. ತಂತ್ರಜ್ಞಾನದಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಹೊಸ ವೈಶಿಷ್ಟ್ಯಗಳನ್ನು ನೀಡುತ್ತಿದೆ. ಈಚೆಗೆ ಬಿಡುಗಡೆ ಆಗಿರುವ ಒನ್‌ಪ್ಲಸ್ 9 ಪ್ರೊ ಕ್ಯಾಮೆರಾದ ಗುಣಮಟ್ಟದಲ್ಲಿ ಉತ್ತಮವಾಗಿದೆ. ಒನ್‌ಪ್ಲಸ್ 9 ಸರಣಿಯಲ್ಲಿ ಕ್ಯಾಮೆರಾದ ಗುಣಮಟ್ಟ ಸುಧಾರಣೆಗಾಗಿ ವೃತ್ತಿಪರ ಕ್ಯಾಮೆರಾ ತಯಾರಿಸುವ ಹ್ಯಾಸೆಲ್‌ಬ್ಲಾಡ್ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದರಿಂದಾಗಿ ಸಹಜ ಬೆಳಕಿನಲ್ಲಿ ಅಷ್ಟೇ ಅಲ್ಲದೆ, ಮಂದ ಬೆಳಕಿನಲ್ಲಿ, ದೀಪದ ಬೆಳಕಿನಲ್ಲಿಯೂ ಚಿತ್ರದ ಗುಣಮಟ್ಟದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ. ಒನ್‌ಪ್ಲಸ್ 9 ಹ್ಯಾಂಡ್‌ಸೆಟ್‌ಗಿಂತಲೂ 9 ಪ್ರೊದಲ್ಲಿ ಚಿತ್ರಗಳ ಬಣ್ಣ, ಸಹಜತೆ ಮತ್ತು ಬೆಳಕಿನ ಸಂಯೋಜನೆ ಅತ್ಯುತ್ತಮವಾಗಿದೆ.

ವಿನ್ಯಾಸದಲ್ಲಿ ಒನ್‌ಪ್ಲಸ್ 9 ಪ್ರೊ, ಅಲ್ಯುಮಿನಿಯಂ ಮತ್ತು ಗ್ಲಾಸ್ ಬಾಡಿಯನ್ನು ಹೊಂದಿದ್ದು ಗಟ್ಟಿಮುಟ್ಟಾಗಿದೆ. ಹಿಂಬದಿಯಲ್ಲಿ ಕ್ಯಾಮೆರಾ ವಿನ್ಯಾಸವು ಉಬ್ಬಾಗಿರುವುದರಿಂದ ಬ್ಯಾಕ್ ಕವರ್ ಬಳಸದೇ ಇದ್ದರೆ ಸ್ಕ್ರ್ಯಾಚ್ ಆಗುತ್ತದೆ. ಆದರೆ ಬ್ಯಾಕ್‌ಕವರ್ ಬಳಸದೇ ಇದ್ದರೆನೇ ಫೊನ್ ಹೆಚ್ಚು ಅಂದವಾಗಿ ಕಾಣುತ್ತದೆ.

ಫೋನ್‌ನ ಕಾರ್ಯಾಚರಣೆಯ ಬಗ್ಗೆ ಹೇಳುವುದಾದರೆ, ಆಂಡ್ರಾಯ್ಡ್ 11 ಬೆಂಬಲಿತ ಆಕ್ಸಿಜನ್ ಒಎಸ್ ಇದ್ದು, ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 888 ಪ್ರೊಸೆಸರ್ ಒಳಗೊಂಡಿದೆ. ಹೈ ಡೆಫನೀಷನ್ ವಿಡಿಯೊ ನೋಡುವಾಗ ಮತ್ತು ಹೆಚ್ಚಿನ ಸಾಮರ್ಥ್ಯ ಬೇಡುವ ಗೇಮ್‌ಗಳನ್ನು ಆಡುವಾಗ ಯಾವುದೇ ತೊಡಕು ಉಂಟಾಗದು.

ಫೋನ್ ಪರದೆಯ ಮೇಲ್ಭಾಗದ ಎಡ ತುದಿಯಲ್ಲಿ ಹೋಲ್ ಪಂಚ್ ಡಿಸ್ ಪ್ಲೇ ಅಳವಡಿಸಲಾಗಿದೆ. 6.7 ಇಂಚಿನ ಪರದೆಯು 125 ಗಿಗಾಹರ್ಟ್ಸ್ ರಿಫ್ರೆಷ್ ರೇಟ್ ಹೊಂದಿದೆ. ಬ್ರೈಟ್ ನೆಸ್ ಉತ್ತಮವಾಗಿದೆ. ಮಂದ ಬೆಳಕಿದ್ದರೂ, ಬಿರು ಬಿಸಿಲಿನಲ್ಲಿಯೂ ಪರದೆಯು ಸ್ಪಷ್ಟವಾಗಿ ಕಾಣಿಸುತ್ತದೆ. ಇದರ ಫಿಂಗರ್ ಪ್ರಿಂಟ್ ಸೆನ್ಸರ್ ಉತ್ತಮವಾಗಿದೆ. ಕ್ಷಣದಲ್ಲೇ ಸ್ಕ್ರೀನ್ ಅನ್ ಲಾಕ್ ಆಗುತ್ತದೆ.

4,500 ಎಂಎಎಚ್ ಬ್ಯಾಟರಿ ಇದೆ. ಇದು ತುಸು ಕಡಿಮೆಯೇ ಅನ್ನಿಸಿದರೂ ವೇಗದ ಚಾರ್ಜಿಂಗ್ ವ್ಯವಸ್ಥೆ ಇರುವುದರಿಂದ ಹೆಚ್ಚಿನ ಸಮಸ್ಯೆ ಆಗದು. ಚಾರ್ಜ್ ಆಗುವಾಗ ವಯರ್ ಅಥವಾ ವಯರ್ ಲೆಸ್ ಆಗಲಿ, ಮೊಬೈಲ್ ಬಿಸಿಯಾಗುತ್ತದೆ. ಕಂಪನಿಯ ಈ ಹಿಂದಿನ ಫೋನ್ ಗಳಿಗೆ ಹೋಲಿಸಿದರೆ ಇದು ತುಸು ಹೆಚ್ಚೇ ಬಿಸಿ ಆಗುತ್ತಿದೆ. ಫೋನ್ ರಿವ್ಯುಗೆ ಬಂದ ಮೊದಲ ದಿನ ವಯರ್ ಲೆಸ್ ಚಾರ್ಜ್ ಆಗಲು ಸುಮಾರು 2 ಗಂಟೆ 30 ನಿಮಿಷ ಬೇಕಾಯಿತು. ಆ ಬಳಿಕ ಒಂದು ಬಾರಿ ಸಾಫ್ಟ್‌ವೇರ್ ಅಪ್ ಡೇಟ್ ಆದ ಬಳಿಕ ಬ್ಯಾಟರಿ ಪೂರ್ತಿ ಚಾರ್ಜ್ ಆಗಲು 45 ನಿಮಿಷ ತೆಗೆದುಕೊಳ್ಳಲು ಆರಂಭಿಸಿತು. ವಯರ್ ಚಾರ್ಜಿಂಗ್‌ನಲ್ಲಿ 30 ನಿಮಿಷ ಬೇಕಾಗುತ್ತದೆ.

ವೈಶಿಷ್ಟ್ಯ

ಪರದೆ: 6.7 ಇಂಚು, 120 ಹರ್ಟ್ ಫ್ಯುಯೆಡ್ ಡಿಸ್ ಪ್ಲೇ

ಒಎಸ್: ಆಂಡ್ರಾಯ್ಡ್ 11 ಬೆಂಬಲಿತ ಆಕ್ಸಿಜನ್ ಒಎಸ್

ಪ್ರೊಸೆಸರ್: ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 888, 5G

ಕ್ಯಾಮೆರಾ: 48+50+8+2 ಎಂಪಿ

ಸೆಲ್ಫಿ: 16 ಎಂಪಿ

ಬ್ಯಾಟರಿ: 4,500 ಎಂಎಎಚ್

ಬೆಲೆ: 8 GB RAM + 128 GB- ₹64,999. 12 GB RAM + 256 GB ₹69,999

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.