ಬೆಂಗಳೂರು: ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಒಪ್ಪೊ ಎರಡು ನೂತನ ಸ್ಮಾರ್ಟ್ಫೋನ್ ಪರಿಚಯಿಸಿದೆ. ಒಪ್ಪೊ ರೆನೊ ಸರಣಿಯಲ್ಲಿ ಮಾರುಕಟ್ಟೆ ಪ್ರವೇಶಿಸಿರುವ ಫೋನ್ಗಳು 5G ಬೆಂಬಲ ಹೊಂದಿವೆ.

ಒಪ್ಪೊ ರೆನೊ 6 5G ಮತ್ತು ಒಪ್ಪೊ ರೆನೊ 6 ಪ್ರೊ 5G ದೇಶದಲ್ಲಿ ಬಿಡುಗಡೆಯಾಗಿದ್ದು, 65W ಫಾಸ್ಟ್ ಚಾರ್ಜಿಂಗ್ ವಿಶೇಷತೆಯಾಗಿದೆ.

ಎರಡೂ ಸ್ಮಾರ್ಟ್ಫೋನ್ ಮಾದರಿಗಳಲ್ಲಿ ಒಂದೇ ಆವೃತ್ತಿ ಮಾತ್ರ ಲಭ್ಯವಿದ್ದು, ಫ್ಲಿಪ್ಕಾರ್ಟ್, ರಿಲಯನ್ಸ್, ಒಪ್ಪೊ ಆನ್ಲೈನ್, ಕ್ರೋಮಾ ಮೂಲಕ ಖರೀದಿಸಬಹುದಾಗಿದೆ.

ಬೆಲೆ ವಿವರ

ಒಪ್ಪೊ ರೆನೊ 6 5G ಸ್ಮಾರ್ಟ್ಫೋನ್ 8 GB + 128 GB ಮಾದರಿಗೆ ₹29,990 ದರ ಹೊಂದಿದೆ. ಜುಲೈ 29ರಿಂದ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಮತ್ತು ಒಪ್ಪೊ ರೆನೊ 6 ಪ್ರೊ 5G ಸ್ಮಾರ್ಟ್ಫೋನ್ 12 GB + 256 GB ಆವೃತ್ತಿಗೆ ₹39,990 ದರವಿದ್ದು, ಜುಲೈ 20 ರಿಂದ ದೊರೆಯಲಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ‘ಎಂ’ ಸರಣಿ ಸ್ಮಾರ್ಟ್ಫೋನ್ ಬೆಲೆ ಏರಿಕೆ

ಒಪ್ಪೊ ರೆನೊ 6 5G, 6.43 ಇಂಚಿನ ಫುಲ್ ಎಚ್ಡಿ+ ಡಿಸ್ಪ್ಲೇ, ಮೀಡಿಯಾಟೆಕ್ ಡೈಮೆನ್ಸಿಟಿ 900 ಪ್ರೊಸೆಸರ್ ಹೊಂದಿದೆ. 64+8+2 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಇದರಲ್ಲಿದೆ.

ವಿವೊ ವೈ ಸರಣಿ ಸ್ಮಾರ್ಟ್ಫೋನ್ ದರ ಏರಿಕೆ

ಒಪ್ಪೊ ರೆನೊ 6 ಪ್ರೊ 5G ಫೋನ್, 6.55 ಇಂಚಿನ ಫುಲ್ ಎಚ್ಡಿ+ ಡಿಸ್ಪ್ಲೇ, ಮೀಡಿಯಾಟೆಕ್ ಡೈಮೆನ್ಸಿಟಿ 1200 ಪ್ರೊಸೆಸರ್ ಇರಲಿದೆ. 64+8+2+2 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ ಜತೆಗೆ 32 ಮೆಗಾಪಿಕ್ಸೆಲ್ ಸೆಲ್ಫಿ ಇದರಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.