ಮುಂಬೈ: ಕಡಿಮೆ ದರದಲ್ಲಿ ಹೆಚ್ಚು ಫೀಚರ್ಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಸ್ಮಾರ್ಟ್ಫೋನ್ ‘ಟೆಕ್ನೊ’, ಇದೀಗ ಮೊಟ್ಟ ಮೊದಲ ಬಾರಿಗೆ ಪೋರ್ಟೆಬಲ್ ಸ್ಮಾರ್ಟ್ಪೋನ್ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.

TECNO PHANTOM V Fold 5G ಎಂಬ ಹೊಸ ಮೊಬೈಲ್ ಇದಾಗಿದ್ದು, ಏಪ್ರಿಲ್ 22ರಿಂದ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಆರಂಭಿಕವಾಗಿ ಇಂದು (ಏ.12) ಅಮೆಜಾನ್ನಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಸೌಲಭ್ಯ ಒದಗಿಸಲಾಗಿತ್ತು. ಉತ್ತಮ ಸ್ಪಂದನೆ ದೊರೆತಿದೆ ಎಂದು ಕಂಪನಿ ತಿಳಿಸಿದೆ.

ಮುಂಬೈನಲ್ಲಿ ಈಚೆಗೆ ಬಾಲಿವುಡ್ ನಟ ಹಾಗೂ ಟೆಕ್ನೊ ಪ್ರಚಾರ ರಾಯಭಾರಿ ಆಯುಷ್ಮಾನ್ ಖುರಾನಾ ಅವರು ಈ ಆಕರ್ಷಕ ಮೊಬೈಲ್ ಅನ್ನು ಅನಾವರಣಗೊಳಿಸಿದ್ದಾರೆ.

TECNO PHANTOM V Fold ಬಗ್ಗೆ ಮುಖ್ಯವಾಗಿ ಹೇಳಬೇಕಾದರೆ ಈ ಫೋನ್ ಎರಡು ಬದಿಯಲ್ಲಿ ಸ್ಕ್ರೀನ್ ಹೊಂದಿರುತ್ತದೆ. ಬಳಸುವಾಗ ಪರದೆ ದೊಡ್ಡದಾಗಿದ್ದು, ಬೇಡವೆಂದಾಗ ಮಡಚಿ ಸಾಮಾನ್ಯ ಮೊಬೈಲ್ ರೀತಿ ಜೇಬಿನಲ್ಲಿಟ್ಟುಕೊಳ್ಳಬಹುದಾಗಿದೆ.

ಇದೊಂದು 5ಜಿ ಸ್ಮಾರ್ಟ್ಪೋನ್ ಆಗಿದ್ದು ಡ್ಯೂಯಲ್ ಎಲ್ಟಿಪಿಒ ಅಮೋಲ್ಡ್ 7.85 ಇಂಚ್ನ ಬೃಹತ್ ಸ್ಕ್ರೀನ್ ಹೊಂದಿದೆ. 10–120Hz ಸ್ಕ್ರೀನ್ ರಿಪ್ರೆಶ್ ರೇಟ್ ಹೊಂದಿದೆ. ಮುಖ್ಯ ಕ್ಯಾಮೆರಾ 50ಎಂಪಿ, ಸೆಕೆಂಡೆರಿ ಕ್ಯಾಮೆರಾ 32 ಎಂಪಿ ಇದ್ದು ಫ್ರಂಟ್ ಕ್ಯಾಮೆರಾ 16 ಎಂಪಿ ಹೊಂದಿದೆ.

MediaTek Dimensity 9000+ SoC ಎಂಬ ಪ್ರೊಸೇಸರ್ ಅನ್ನು ಈ ಮೊಬೈಲ್ ಹೊಂದಿದ್ದು ಉತ್ತಮ ಪ್ರದರ್ಶನ ನೀಡಲಿದೆ ಎಂದು ಕಂಪನಿ ತಿಳಿಸಿದೆ.

ಈ ಮೊಬೈಲ್ 5000mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, 45ವೋಲ್ಟ್ನ ಚಾರ್ಜ್ರ್ ಸಪೋರ್ಟ್ ಮಾಡಲಿದೆ. ಇನ್ನೊಂದು ವಿಶೇಷವೆಂದರೆ ಫ್ಯಾಂಥಮ್ ವಿ ಫೋಲ್ಡ್ ಇದೊಂದು 12ಜಿಬಿ ರಾಮ್ನೊಂದಿಗೆ 256/512 ಮೆಮೋರಿಗಳಲ್ಲಿ ಸಿಗಲಿದೆ ಎಂದು ಟೆಕ್ನೊ ವಕ್ತಾರರು ತಿಳಿಸಿದ್ದಾರೆ.

ಇನ್ನು ಈ ಮೊಬೈಲ್ ಬೆಲೆ ₹88,888 ಇದೆ. ಆರಂಭಿಕ ಕೊಡುಗೆಯಾಗಿ ಟೆಕ್ನೊ ಹಲವು ಆಫರ್ಗಳನ್ನು ಘೋಷಣೆ ಮಾಡಿದೆ. ಅಮೆಜಾನ್ನಲ್ಲಿ ಆರಂಭಿಕ ಕೊಡುಗೆಯಾಗಿ ₹77,777 ಕ್ಕೆ ಖರೀದಿಗೆ ಸದ್ಯ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

ಸೋನಿ ಹೊಸ ವೈರ್ಲೆಸ್ ಹೆಡ್ಫೋನ್ WH-CH520: ಏನಿದರ ವೈಶಿಷ್ಟ್ಯತೆಗಳು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.