ಟಾಟಾ ಒಡೆತನದ ಕ್ರೋಮಾ ಕಂಪನಿಯು ಕಡಿಮೆ ಬೆಲೆಗೆ ಉತ್ತಮ ಇಯರ್ಬಡ್ಸ್ ಬಿಡುಗಡೆ ಮಾಡಿದೆ. ‘ಕ್ರೋಮಾ ಟ್ರೂಲಿ ವಯರ್ಲೆಸ್ ಇಯರ್ಬಡ್ಸ್’ ಹಗುರಾಗಿದ್ದು, ಸುಲಭವಾಗಿ ಜೇಬಿನಲ್ಲಿ ಇಟ್ಟುಕೊಳ್ಳಬಹುದು.ಬ್ಲುಟೂತ್ ವರ್ಷನ್ 5.1 ಇದ್ದು, ಮೊಬೈಲ್ ಜೊತೆ ಸಂಪರ್ಕ ಸಾಧಿಸುವುದು ಸುಲಭವಾಗಿದೆ. ಮನರಂಜನೆಯ ಉದ್ದೇಶಕ್ಕೆ ಇದು ಹೆಚ್ಚು ಸೂಕ್ತ. ಬೆಲೆ ₹ 1,200.

ಹೊರಗಿನ ಶಬ್ದ ಕೇಳದಂತೆ ತಡೆಯುವ ವ್ಯವಸ್ಥೆ (ನಾಯ್ಸ್ ಕ್ಯಾನ್ಸಲೇಷನ್) ಇಲ್ಲದೇ ಇರುವುದರಿಂದ ಮನೆಯಲ್ಲಿ ಇದ್ದಾಗ ಕಾಲ್ ಮಾಡಲು ಮತ್ತು ಸ್ವೀಕರಿಸಲು ಇದನ್ನು ಬಳಸಬಹುದು. ಮನೆಯಿಂದ ಹೊರಗಡೆ ಇದ್ದಾಗ ವಾಹನದ ಸದ್ದು ಇರುವೆಡೆ ನಮ್ಮೊಟ್ಟಿಗೆ ಫೋನ್ನಲ್ಲಿ ಮಾತನಾಡುವವರಿಗೆ ನಮ್ಮ ಧ್ವನಿ ಸ್ಪಷ್ಟವಾಗಿ ಕೇಳಿಸುವುದಿಲ್ಲ. ಆದರೆ, ಹಾಡು ಕೇಳಲು, ವಿಡಯೊ ನೋಡು, ಗೇಮ್ ಆಡಲು ಯಾವುದೇ ಸಮಸ್ಯೆ ಆಗುವುದಿಲ್ಲ.

ಟಚ್ ಕಂಟ್ರೋಲ್ ಮೂಲಕ ಪ್ಲೇಲಿಸ್ಟ್ ಅನ್ನು ಸುಲಭವಾಗಿ ನಿಯಂತ್ರಿಸಬಹುದು. ಸ್ಟೀರಿಯೊ ಡ್ಯುಯಲ್ ಮೈಕ್ ಇದ್ದು, ಆಡಿಯೊ ಗುಣಮಟ್ಟ ಚೆನ್ನಾಗಿದೆ. ಬಡ್ಸ್ ಹಗುರವಾಗಿ ಇರುವುದರಿಂದ ಕಿವಿಯಲ್ಲಿ ಬಡ್ಸ್ ಇದೆ ಎಂದೇ ಅನ್ನಿಸುವುದಿಲ್ಲ. ಬೆವರಿನಿಂದ ಇಯರ್ ಬಡ್ಗೆ ರಕ್ಷಣೆ ಒದಗಿಸುವ ವ್ಯವಸ್ಥೆ ಇದರಲ್ಲಿದೆ.

ಇದರ ಒಟ್ಟು ತೂಕ 42 ಗ್ರಾಂ. ಒಮ್ಮೆ ಚಾರ್ಜ್ ಮಾಡಿದರೆ 5 ಗಂಟೆಗಳವರೆಗೆ ನಿರಂತರವಾಗಿ ಹಾಡು ಕೇಳಬಹುದು. ಮೊಬೈಲ್ ಅನ್ನು ಒಂದು ಕಡೆ ಇಟ್ಟಿದ್ದರೂ 10 ಮೀಟರ್ ವ್ಯಾಪ್ತಿಯಲ್ಲಿ ಇಯರ್ಬಡ್ಸ್ ಬಳಸಬಹುದು.400 ಎಂಎಎಚ್ ಬ್ಯಾಟರಿ ಹೊಂದಿದೆ. ಚಾರ್ಜಿಂಗ್ ಕೇಸ್ ಟೈಪ್–ಸಿ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಹೊಂದಿದೆ. ಚಾರ್ಜ್ ಆಗಲು ಒಂದೂವರೆಯಿಂದ ಎರಡು ಗಂಟೆ ಬೇಕು. ಒಟ್ಟಾರೆ 20 ಗಂಟೆಯವರೆಗೆ ಹಾಡು ಕೇಳಬಹುದು.

ಒಟ್ಟಾರೆಯಾಗಿ ಕಾಂಪ್ಯಾಕ್ಟ್ ವಿನ್ಯಾಸ, ಕಡಿಮೆ ತೂಕ, ಸುಲಭವಾಗಿ ಸಂಪರ್ಕ ಸಾಧಿಸಬಹುದಾದ ಹಾಗೂ ಅಧಿಕ ಸಮಯದವರೆಗೆ ಬಳಸಬಹುದಾಗಿರುವುದರಿಂದ ಮನರಂಜನೆಯ ಉದ್ದೇಶಕ್ಕಾಗಿ ಇದನ್ನು ಒಂದು ಆಯ್ಕೆಯಾಗಿ ಪರಿಗಣಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.