ಒನ್‌ಪ್ಲಸ್ ಕಂಪನಿಯು ಮೇಲ್ಮಧ್ಯಮ ಬೆಲೆಯ (₹34 ಸಾವಿರದಿಂದ ₹40 ಸಾವಿರದ ಒಳಗೆ) ಸ್ಮಾರ್ಟ್‌ಫೋನ್ ವಿಭಾಗದಲ್ಲಿ ‘ಒನ್‌ಪ್ಲಸ್ ನಾರ್ಡ್ 3’ ಬಿಡುಗಡೆ ಮಾಡಿದೆ. ಒನ್‌ಪ್ಲಸ್ ಬ್ರ್ಯಾಂಡ್‌ನ ಫೋನ್‌ಗಳು ಪ್ರೀಮಿಯಂ ಲುಕ್‌ಗೆ ಹೆಸರುವಾಸಿ. ಈ ಫೋನ್ ಸಹ ವಿನ್ಯಾಸದಲ್ಲಿ ಪ್ರೀಮಿಯಂ ಲುಕ್ ಹೊಂದಿರುವ ಜೊತೆಗೆ ಕ್ಯಾಮೆರಾ ಕ್ಲಾರಿಟಿ, ಸಾಫ್ಟ್‌ವೇರ್ ಕಾರ್ಯಾಚರಣೆಯ ನಿಟ್ಟಿನಲ್ಲಿ ಗಮನಸೆಳೆಯುತ್ತದೆ.

ಡಿಸ್‌ಪ್ಲೇ ಗುಣಮಟ್ಟ ಮತ್ತು ಕ್ಯಾಮೆರಾ ವಿಷಯದಲ್ಲಿ ಒನ್‌ಪ್ಲಸ್ 11 5ಜಿ ಫೋನ್ ವೈಶಿಷ್ಟ್ಯಗಳನ್ನೇ ಹೋಲುತ್ತದೆ. ಹೀಗಿದ್ದರೂ ಕ್ಯಾಮೆರಾ ಗುಣಮಟ್ಟವು ಒನ್‌ಪ್ಲಸ್ 11ಗಿಂತಲೂ ಉತ್ತಮವಾಗಿದೆ. 6.74 ಇಂಚು 120 ಹರ್ಟ್ಸ್ ಸೂಪರ್ ಫ್ಲ್ಯೂಯೆಡ್ ಅಮೊಎಲ್‌ಇಡಿ ಡಿಸ್‌ಪ್ಲೇ 2772X1240 ಪಿಕ್ಸಲ್ ರೆಸಲ್ಯೂಷನ್ ಹೊಂದಿದೆ. ಎಡಭಾಗದ ಸೈಡ್‌ನಲ್ಲಿ ವಾಲ್ಯುಂ ಬಟನ್‌ಗಳಿವೆ. ಬಲಭಾಗದ ಸೈಡ್‌ನಲ್ಲಿ ಪವರ್ ಆಫ್ ಬಟನ್ ಇದ್ದು ಅದರ ಮೇಲ್ಭಾಗದಲ್ಲಿ ಮೊಬೈಲ್ ಅನ್ನು ರಿಂಗ್, ವೈಬ್ರೆಟ್, ಸೈಲೆಂಟ್ ಮೋಡ್‌ಗೆ ಇಡಲು ಅನುಕೂಲ ಆಗುವಂತೆ ‘ಅಲರ್ಟ್ ಸ್ಲೈಡರ್’ ಬಟನ್ ನೀಡಲಾಗಿದೆ. ನಾರ್ಡ್‌ನ ಹಿಂದಿನ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಬಟನ್ ನೀಡಿರಲಿಲ್ಲ. ತಕ್ಷಣಕ್ಕೆ ಮೊಬೈಲ್ ಅನ್ನು ಸೈಲೆಂಟ್ ಮೋಡ್‌ಗೆ ಹಾಕಲು ಈ ಬಟನ್ ಹೆಚ್ಚು ಉಪಯುಕ್ತವಾಗಿದೆ.

ಕ್ಯಾಮೆರಾ: ಇದರಲ್ಲಿ 50ಎಂಪಿ ಸೋನಿ ಐಮ್ಯಾಕ್ಸ್ 890 ಕ್ಯಾಮೆರಾ ಜೊತೆಗೆ 8 ಎಂಪಿ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 2 ಎಂಪಿ ಮ್ಯಾಕ್ರೊ ಲೆನ್ಸ್ ಒಳಗೊಂಡಿದೆ. ಒಳಾಂಗಣಕ್ಕಿಂತ ಹೊರಾಂಗಣದ ಫೋಟೊಗಳು ಉತ್ತಮವಾಗಿ ಸೆರೆಯಾಗುತ್ತವೆ. ಫೋಟೊಗಳಲ್ಲಿನ ಬಣ್ಣವು ನೈಸರ್ಗಿಕವಾಗಿ ಕಾಣುತ್ತವೆ. 16 ಎಂಪಿ ಸೆಲ್ಫಿ ಕ್ಯಾಮೆರಾದಲ್ಲಿ ತೆಗೆದ ಫೋಟೊಗಳು ಚೆನ್ನಾಗಿವೆ. ವಿವಿಧ ಬಗೆಯ ಫಿಲ್ಟರ್‌ಗಳು ಚೆನ್ನಾಗಿವೆ. ಫೋಟೊ ಮತ್ತು ವಿಡಿಯೊ ಗುಣಮಟ್ಟ ಚೆನ್ನಾಗಿದೆ. ಆದರೆ ಮ್ಯಾಕ್ರೊ ಕ್ಯಾಮೆರಾ ಸಮಾಧಾನಕರವಾಗಿಲ್ಲ. ಫೋಕಸ್ ಮಾಡಿದ ಜಾಗವು ಇನ್ನಷ್ಟು ಸೂಕ್ಷ್ಮವಾಗಿ ಕಾಣುವಂತೆ ಮಾಡಬೇಕಿತ್ತು.

ಆಂಡ್ರಾಯ್ಡ್ 13 ಆಧಾರಿತ ಆಕ್ಸಿಜನ್ ಒಎಸ್ 13.1, ಮೀಡಿಯಾಟೆಕ್ ಡೈಮೆನ್ಸಿಟಿ 9000 ಚಿಪ್‌ಸೆಟ್ ಹೊಂದಿದ್ದು, ಕಾರ್ಯಾಚರಣೆಯು ಹಿಂದಿನ ಫೋನ್‌ಗಳಿಗಿಂತಲೂ ಸುಗಮ ಮತ್ತು ವೇಗವಾಗಿದೆ. ಹೆಚ್ಚಿನ ರೆಸಲ್ಯೂಷನ್ ಇರುವ ವಿಡಿಯೊ ನೋಡುವಾಗ ಮತ್ತು ಗೇಮ್ ಆಡುವಾಗಲು ಯಾವ ಹಂತದಲ್ಲಿಯೂ ಫೋನ್ ಹ್ಯಾಂಗ್ ಆಗುವುದಿಲ್ಲ. ಡಿಸ್‌ಪ್ಲೆ ಕೆಳಭಾಗದಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದ್ದು, ಫಿಂಗರ್ ಆ್ಯಡ್ ಮಾಡಲು ನಂತರ ಫೋನ್ ಅನ್‌ಲಾಕ್ ಮಾಡಲು ಯಾವುದೇ ಸಮಸ್ಯೆ ಆಗುವುದಿಲ್ಲ. ಫೋನ್ ತಕ್ಷಣಕ್ಕೆ ಅನ್‌ಲಾಕ್ ಆಗುತ್ತದೆ.

ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಮತ್ತು ಹೆಡ್‌ಫೋನ್ ಜಾಕ್ ಇಲ್ಲ. ಇದರಲ್ಲಿ ಜೆನ್ ಸ್ಪೇಸ್, ಕಮ್ಯುನಿಟಿ, ಒ ರಿಲ್ಯಾಕ್ಸ್, ಒನ್‌ಪ್ಲಸ್ ಸ್ಟೋರ್, ಕ್ಲೋನ್ ಫೋನ್ ಹೀಗೆ ಒನ್‌ಪ್ಲಸ್ ಮತ್ತು ಒಪ್ಪೋದ ಹಲವು ಆ್ಯಪ್‌ಗಳು ಫೋನ್ ಖರೀದಿಸುವಾಗಲೇ ಇನ್‌ಸ್ಟಾಲ್ ಆಗಿರುತ್ತವೆ. ಥರ್ಡ್ ಪಾರ್ಟಿ ಆ್ಯಪ್‌ಗಳಾದ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೊ ಮತ್ತು ಸ್ಪೋಟಿಫೈ ಸಹ ಇದರಲ್ಲಿವೆ.

ಬ್ಯಾಟರಿ: 5 ಸಾವಿರ ಎಂಎಎಚ್ ಬ್ಯಾಟರಿ 80 ವಾಟ್ ಸೂಪರ್ ವಿಒಒಸಿ ಎಜುರೇಸ್ ಎಡಿಷನ್ ಚಾರ್ಜರ್ ವ್ಯವಸ್ಥೆಯನ್ನು ಹೊಂದಿದೆ. ಶೇ 100ರಷ್ಟು ಚಾರ್ಜ್ ಆಗಲು 40 ನಿಮಿಷ ಬೇಕು. ಬಾಳಿಕೆ ತೃಪ್ತಿದಾಯಕ. ಗೇಮ್ ಮೋಡ್‌ನಲ್ಲೂ ಆರಾಮವಾಗಿ ಒಂದು ದಿನಕ್ಕೂ ಹೆಚ್ಚು ಬಾಳಿಕೆ ಬರುತ್ತದೆ. ಗೇಮ್ ಆಡುವಾಗ ಅಥವಾ ಚಾರ್ಜ್ ಮಾಡುವಾಗ ಬಿಸಿ ಆಗುವುದಿಲ್ಲ. ಗೇಮ್ ಆಡುವಾಗ ಹ್ಯಾಂಗ್ ಅಥವಾ ಸ್ಟಕ್ ಆಗುವುದಿಲ್ಲ. ಇದೇ ಮೊದಲ ಬಾರಿಗೆ ಕಂಪನಿಯು ನಾರ್ಡ್ ಸರಣಿಯ ಫೋನ್‌ಗೆ ಮೂರು ವರ್ಷಗಳ ಸಾಫ್ಟ್‌ವೇರ್ ಅಪ್‌ಗ್ರೇಡ್ ಮತ್ತು ನಾಲ್ಕು ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್ ಭರವಸೆಯನ್ನು ನೀಡಿದೆ.

ಪ್ರಮುಖ ಅಂಶಗಳು

* ಕ್ಯಾಮೆರಾ: 50ಎಂಪಿ ಸೋನಿ ಐಮ್ಯಾಕ್ಸ್ 890 ಟ್ರಿಪಲ್ ಕ್ಯಾಮೆರಾ. 16 ಎಂಪಿ ಸೆಲ್ಫಿ ಕ್ಯಾಮೆರಾ

* ಡಿಸ್‌ಪ್ಲೇ: 6.74 ಇಂಚು 120 ಹರ್ಟ್ಸ್ ಅಮೋ ಎಲ್‌ಇಡಿ

* ಆಂಡ್ರಾಯ್ಡ್13 ಆಧಾರಿತ ಆಕ್ಸಿಜನ್ ಒಎಸ್ 13.1

* ಆಂಡ್ರಾಯ್ಡ್13 ಆಧಾರಿತ ಆಕ್ಸಿಜನ್ ಒಎಸ್ 13.1.

* 5 ಸಾವಿರ ಎಂಎಎಚ್ ಬ್ಯಾಟರಿ

* ಬೆಲೆ: 8+128ಜಿಬಿಗೆ ₹33,999. 16+256ಜಿಬಿಗೆ ₹37,999.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.