ಜಕಾರ್ತಾ: ಆಸ್ಟ್ರೇಲಿಯಾದ ವಾಯುವ್ಯ ಕರಾವಳಿ ತೀರದ ಎಕ್ಸ್ಮೌತ್ ನಗರದಲ್ಲಿ ಶುಭ್ರ ಆಕಾಶದಲ್ಲಿ ಗೋಚರಿಸಿದ ಅಪರೂಪದ ಸಮ್ಮಿಶ್ರ ಸೂರ್ಯ ಗ್ರಹಣವನ್ನು ಗುರುವಾರ 20 ಸಾವಿರ ಜನ ಕಣ್ತುಂಬಿಕೊಂಡರು.

ಮೂರು ಸಾವಿರಕ್ಕೂ ಕಡಿಮೆ ನಿವಾಸಿಗಳಿರುವ ಎಕ್ಸ್ಮೌತ್ ಪಟ್ಟಣ ಈ ಸೂರ್ಯಗ್ರಹಣ ವೀಕ್ಷಣೆಗೆ ಸೂಕ್ತತಾಣವೆಂದು ದೊಡ್ಡ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.

ಎಕ್ಸ್ಮೌತ್ ಮಾತ್ರವಲ್ಲದೆ ಇಂಡೋನೇಷ್ಯಾ ಮತ್ತು ಪೂರ್ವ ಟಿಮೋರ್ ಭಾಗದ ಹಲವು ಪ್ರದೇಶಗಳಲ್ಲೂ ಸೂರ್ಯಗ್ರಹಣ ಸ್ಪಷ್ಟವಾಗಿ ಗೋಚರಿಸಿತು. ಈ ವಿಸ್ಮಯ ನೋಡಲು ಖಗೋಳಾಸಕ್ತರು ಕೆಲವು ದಿನಗಳ ಹಿಂದೆಯೇ ಶಿಬಿರಗಳನ್ನು ನಿರ್ಮಿಸಿಕೊಂಡು ಕಾದುಕುಳಿತಿದ್ದರು. ಸೂರ್ಯ ಗ್ರಹಣದ ದೃಶ್ಯಗಳನ್ನು ಸೆರೆ ಹಿಡಿದು ಸಂಭ್ರಮಿಸಿದರು.

ನಾಸಾದ ಖಗೋಳ ಶಾಸ್ತ್ರಜ್ಞ ಹೆನ್ರಿ ಥ್ರೂಪ್ ಕೂಡ ಎಕ್ಸ್ಮೌತ್ನಲ್ಲಿ ಗ್ರಹಣದ ಸೊಗಬನ್ನು ಆನಂದಿಸಿದರು. ‘ಗ್ರಹಣ ಕೇವಲ ಒಂದು ಕ್ಷಣದ ವಿಸ್ಮಯವಾದರೂ ಹೆಚ್ಚು ಕಾಲ ನೆನಪಿನಲ್ಲಿ ಉಳಿಯುತ್ತದೆ. ಇದಕ್ಕಿಂತ ಉತ್ತಮವಾದುದನ್ನು ನೋಡಲು ಸಾಧ್ಯವಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.