ಬೆಂಗಳೂರು: ‘ಡೆಂಗಿ ಹಾಗೂ ಚಿಕೂನ್‌ಗೂನ್ಯ ಸೋಂಕು ಹರಡುವ ಸೊಳ್ಳೆಗಳ ಮೊಟ್ಟೆಗಳು ತಮ್ಮ ಚಯಾಪಚಯಗಳನ್ನು ಬದಲಿಸಿಕೊಳ್ಳುವ ಮೂಲಕ ತೀವ್ರ ನಿರ್ಜಲೀಕರಣ ಪರಿಸ್ಥಿತಿಯಲ್ಲೂ ಬದುಕುಳಿಯುತ್ತವೆ’ ಎಂಬ ಅಂಶವನ್ನು ಸ್ಟೆಮ್ ಸೆಲ್ ಮತ್ತು ಪುನರುತ್ಪಾದಕ ಔಷಧ ಸಂಸ್ಥೆಯು ತನ್ನ ವರದಿಯಲ್ಲಿ ಹೇಳಿದೆ.

ಬಹಳಷ್ಟು ಜೀವಕೋಶಗಳು ನೀರಿನಿಂದಲೇ ಜೀವತಾಳುತ್ತವೆ. ಆದರೆ ನಿರ್ಜಲೀಕರಣ ಎಂಬದು ಯಾವುದೇ ಜೀವಿಗಾದರೂ ಮಾರಣಾಂತಿಕವೇ. ಬಹಳಷ್ಟು ಪ್ರೊಟೀನ್ ಹಾಗೂ ಇತರ ಅಣುಗಳ ರಚನೆಗಳು ಸಾಕಷ್ಟು ಜಲಸಂಚಯನವನ್ನೇ ಅವಲಂಬಿಸಿರುತ್ತವೆ. ಆದರೆ ಕೆಲವೇ ಕೆಲವು ಜೀವಿಗಳಲ್ಲಿರುವ ಮೈಕ್ರೋಬ್‌ಗಳು ನಿರ್ಜಲಗೊಳ್ಳುವ ಪ್ರಕ್ರಿಯೆಯಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಗುಣ ಹೊಂದಿರುತ್ತವೆ. ಅವುಗಳಲ್ಲಿ ಝೀಕಾ, ಡೆಂಗಿ, ಹಳದಿ ಜ್ವರ ಮತ್ತು ಚಿಕೂನ್‌ಗೂನ್ಯ ಸೇರಿವೆ.

ಆಫ್ರಿಕಾದಲ್ಲಿ ಮೊದಲ ಬಾರಿಗೆ ಕಂಡುಬಂದ ಈಡೀಸ್ ಈಜಿಪ್ಟೈ ಈಗ ಜಗತ್ತಿನ ಬಹುತೇಕ ಭಾಗಗಳಿಗೆ ವಿಸ್ತರಿಸಿದೆ. ತೇವಾಂಶವಿರುವ ಬೆಚ್ಚನೆ ಪ್ರದೇಶಗಳಲ್ಲಿ ಇದು ಈಗ ಆಪಾಯಕಾರಿಯಾಗಿದೆ. ಈಡೀಸ್ ಮೊಟ್ಟೆಗಳು ಲಾರ್ವಾ ಹಂತಕ್ಕೆ ಬರಲು 48ರಿಂದ 72 ಗಂಟೆಗಳು ಬೇಕು. ನಿರ್ಜಲೀಕರಣ ಸಮಸ್ಯೆಯಿಂದ ಪಾರಾಗಬೇಕೆಂದರೆ ಅವುಗಳಿಗೆ ಕನಿಷ್ಠ 15 ಗಂಟೆಗಳಷ್ಟಾದರೂ ಬೆಳೆದಿರಬೇಕು. ಈ ಅವಧಿಯೊಳಗೆ ಮೊಟ್ಟೆಗಳು ಶುಷ್ಕಗೊಂಡರೆ ಅವು ಲಾರ್ವಾ ಹಂತವನ್ನು ತಲುಪಲು ವಿಫಲವಾಗುತ್ತವೆ ಎಂದು ಸಂಶೋಧನೆ ಹೇಳಿದೆ.

‘ಇಡೀ ಜತ್ತಿನ ಅರ್ಧದಷ್ಟು ಜನರನ್ನು ಕಾಡುತ್ತಿರುವ ವೈರಾಣು ಸೋಂಕಿನ ಮೂಲಕ ಹರಡುವ ಬಹಳಷ್ಟು ಕಾಯಿಲೆಗಳಿಗೆ ಈ ಈಡೀಸ್ ಈಜಿಪ್ಟೈ ಮೂಲ ಕಾರಣ. ಜತೆಗೆ ಇಡೀ ಜಗತ್ತನ್ನೇ ಬಹಳ ವೇಗದಲ್ಲಿ ಹರಡಿರುವ ಈ ಸೊಳ್ಳೆಯ ತಳಿಯಿಂದಾಗಿಯೇ ಸೋಂಕಿನ ಪ್ರಮಾಣದಲ್ಲಿನ ಏರಿಕೆ ಕಾರಣವಾಗಿದೆ. ಚಯಾಪಚಯ ಕ್ರಿಯೆಯನ್ನೇ ಬದಲಿಸಿ ಇವುಗಳು ಬದುಕುಳಿದಿರುವುದು ಪತ್ತೆಯಾಗಿದೆ’ ಎಂದು ಸಂಸ್ಥೆಯ ವಿಜ್ಞಾನಿ ಸುನೀಲ್ ಲಕ್ಷ್ಮಣ್ ಹೇಳಿದ್ದಾರೆ.

‘ಇಂಥ ಪ್ರತಿಕೂಲ ಪರಿಸ್ಥಿತಿಯ ಹಲವು ಮೊಟ್ಟೆಗಳನ್ನು ಪರೀಕ್ಷೆಗೆ ವಿಜ್ಞಾನಿಗಳು ಒಳಪಡಿಸಿದ್ದು, ಅವುಗಳಲ್ಲಿ ಬಹುತೇಕವು ಈ ಸಮಸ್ಯೆಯನ್ನು ಮೀರಿ ನಿಂತಿರುವುದು ಪತ್ತೆಯಾಗಿದೆ. ಜತೆಗೆ ಚಯಾಪಚಯ ಕ್ರಿಯೆಯ ಮಾರ್ಗವನ್ನೇ ಬದಲಿಸಿಕೊಳ್ಳುವ ಮೂಲಕ ಶುಷ್ಕದಿಂದ ಮೊಟ್ಟೆಯನ್ನು ರಕ್ಷಿಸಿಕೊಂಡಿರುವುದು ಗೊತ್ತಾಗಿದೆ’ ಎಂದಿದ್ದಾರೆ.

‘ಇದಕ್ಕೆ ನೆರವಾಗಿರುವ ಕೊಬ್ಬು ಯುಕ್ತ ಚಯಾಪಚಯಗಳನ್ನು ಉತ್ತೇಜಿಸುವ ಕಿಣ್ವಗಳ ಮಟ್ಟದಲ್ಲಿ ಏರಿಕೆಯಾಗಿದೆ. ಕೊಬ್ಬಿನಾಮ್ಲಗಳ ಉತ್ಪಾದನೆ ಮತ್ತು ಬಳಕೆಯ ಕಡೆಗೆ ಚಯಾಪಚಯಗಳ ತಗ್ಗಿಸುವ ಪ್ರಕ್ರಿಯೆ ಪತ್ತೆಯಾಗಿದೆ’ ಎಂದಿದ್ದಾರೆ.

‘ಈ ಕೊಬ್ಬಿನಾಮ್ಲ ಪ್ರತಿಬಂಧಕವು ಪಾಲಿಯಮೈನ್ ಸಂಶ್ಲೇಷಣೆಯನ್ನು ಕಡಿಮೆ ಮಾಡುತ್ತದೆ. ಕೊಬ್ಬಿನಾಮ್ಲ ವಿಭಜನೆಯ ಹೆಚ್ಚಳದ ಒಂದು ಪಾತ್ರವು ರಕ್ಷಣಾತ್ಮಕ ಪಾಲಿಮೈನ್‌ಗಳ ಉತ್ಪಾದನೆಗೆ ಅಗತ್ಯವಾದ ಶಕ್ತಿಯನ್ನು ಪೂರೈಸುತ್ತದೆ’ ಎಂದು ಸಂಶೋಧಕರು ಹೇಳಿದ್ದಾರೆ.

‘ಈಡಿಸ್ ಸೊಳ್ಳೆ ಮೊಟ್ಟೆಗಳು ಸಂಪೂರ್ಣವಾಗಿ ಶುಷ್ಕಗೊಂಡ ನಂತರ ಅನಿರ್ದಿಷ್ಟವಾಗಿ ಬದುಕಬಲ್ಲವು ಮತ್ತು ಕಾರ್ಯಸಾಧ್ಯವಾದ ಲಾರ್ವಾಗಳಾಗಿ ಹೊರಬರುತ್ತವೆ. ಭ್ರೂಣಗಳು ಒಣಗಿದ ಮೇಲೆ ತಮ್ಮ ಚಯಾಪಚಯ ಕ್ರಿಯೆಯನ್ನು ಪುನರುಜ್ಜೀವನಗೊಳಿಸುತ್ತವೆ. ನಿರ್ಜಲೀಕರಣದ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತವೆ. ನೀರು ಮತ್ತೆ ಲಭ್ಯವಾದ ನಂತರ ಪುನರುಜ್ಜೀವನಗೊಳ್ಳುತ್ತವೆ‘ ಎಂದು ಲಕ್ಷ್ಮಣ ಅವರು ವಿವರಿಸಿದರು.
.ಮನುಷ್ಯರಲ್ಲಿ ಝಿಕಾ ಪತ್ತೆಯಾಗಿಲ್ಲ: ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ.ಝಿಕಾ ವೈರಸ್ ಪತ್ತೆ: ಶಿಡ್ಲಘಟ್ಟ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಪರೀಕ್ಷೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.