ಮರೆಯಲ್ಲಿರುವ ದೃಶ್ಯಗಳನ್ನು ಸ್ಪಷ್ಟವಾಗಿ ಊಹಿಸಿ ಅಥವಾ ವೀಕ್ಷಿಸಿ ವಿಡಿಯೊ ಅಥವಾ ಛಾಯಾಚಿತ್ರಗಳನ್ನು ನೀಡುವ ಸರಳ ತಂತ್ರಜ್ಞಾನದ ಶೋಧವಾಗಿದೆ. ಅಪಘಾತಗಳ ತಡೆ ಹಾಗೂ ರಕ್ಷಣಾಕಾರ್ಯಗಳಲ್ಲಿ ಮಹತ್ತರ ಪಾತ್ರವನ್ನು ವಹಿಸಲಿರುವ ಈ ತಂತ್ರಜ್ಞಾನವನ್ನು ಮುಂದಿನ ತಲೆಮಾರಿನ ಜೀವರಕ್ಷಕ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಅಮೆರಿಕದ ಯೂನಿವರ್ಸಿಟಿ ಆಫ್ ಸೌತ್ ಫ್ಲೋರಿಡಾದ ಸಂಶೋಧನಾ ವಿದ್ವಾಂಸರಾದ ಜಾನ್ ಮುರ್ರೇ ಬ್ರೂಸ್ ಅವರು ಸಂಶೋಧಿಸಿರುವ ಈ ಹೊಸ ಸಾಧನವು ಕಂಪ್ಯೂಟರ್ ಸೂತ್ರವೊಂದನ್ನು ಆಧರಿಸಿ ಕೆಲಸ ಮಾಡುತ್ತದೆ. ಅಂದರೆ, ಆಚೆ ಮಗ್ಗಲಿನಲ್ಲಿ ಇರುವ ದೃಶ್ಯವನ್ನು ಕುಳಿತಲ್ಲೇ ನಿಖರವಾಗಿ ನೋಡಬಹುದಾದ ವಿಧಾನವಿದು. ಕುಳಿತಲ್ಲೇ ಎದುರಿನ ಒಂದು ವಿಡಿಯೊ ಅಥವಾ ಛಾಯಾಚಿತ್ರವನ್ನು ತೆಗೆದು, ಅದನ್ನು ಈ ಸಾಧನಕ್ಕೆ ನೀಡಿದರೆ, ಆಚೆ ಮಗ್ಗಲಲ್ಲಿ ಇರುವ ದೃಶ್ಯವನ್ನು ನಿಖರವಾಗಿ ಊಹಿಸಿ, ನಿರ್ಮಿಸಿ, ಬಹುವರ್ಣ ಸಮೇತ ವಿಡಿಯೊ ಅಥವಾ ಛಾಯಾಚಿತ್ರವನ್ನು ನೀಡುವ ಸಾಮರ್ಥ್ಯ ಈ ಸಾಧನಕ್ಕಿದೆ.
ಈ ತಂತ್ರಜ್ಞಾನವನ್ನು ರಸ್ತೆ ಅಪಘಾತ ತಡೆ ಹಾಗೂ ಸೇನೆಯಲ್ಲಿ ಪರಿಣಾಮಕಾರಿಯಾಗಿ ಬಳಸಬಹುದಾಗಿದೆ. ಸಾಮಾನ್ಯವಾಗಿ ವಾಹನವನ್ನು ಚಾಲನೆ ಮಾಡುವಾಗ ಅನಿರೀಕ್ಷಿತವಾಗಿ ವಾಹನಗಳು ಎದುರಾಗುವುದುಂಟು. ಆಗ ಅಪಘಾತಗಳು ಸಂಭವಿಸುತ್ತವೆ. ವಾಹನಕ್ಕೆ ಈ ಸಾಧನವನ್ನು ಅಳವಡಿಸಿದ್ದಲ್ಲಿ, ತನ್ನಲ್ಲಿ ಇರುವ ಕ್ಯಾಮೆರಾ ಹಾಗೂ ಕಂಪ್ಯೂಟರ್‌ನ ಸಹಾಯದಿಂದ ಎದುರಾಗಬಹುದಾದ ವಾಹನಗಳನ್ನು ಊಹಿಸಿ, ಚಾಲಕನಿಗೆ ಎಚ್ಚರಿಕೆ ಸಂದೇಶವನ್ನು ಈ ಸಾಧನ ನೀಡಬಲ್ಲದು. ಅಷ್ಟೇ ಅಲ್ಲದೇ, ಸುಧಾರಿತ ಕಾರುಗಳಲ್ಲಿ ಸ್ವಯಂ ಚಾಲಿತ ವಾಹನಚಾಲನೆಗೂ ಇದು ಸಹಾಯ ಮಾಡಬಲ್ಲದು.

ಈಗಾಗಲೇ ರಸ್ತೆಯಲ್ಲಿನ ಟ್ರ್ಯಾಕ್ ಗುರುತುಗಳನ್ನು ವೀಕ್ಷಿಸಿ ಕಾರ್ ಚಾಲನೆ ಮಾಡುವ ಸ್ವಯಂ ಚಾಲಿತ ವ್ಯವಸ್ಥೆ ಜಾರಿಯಲ್ಲಿದೆ. ಟೆಸ್ಲಾ ಮಾದರಿಯ ಹಲವು ಕಂಪನಿಗಳು ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. ಈ ಬಗೆಯ ವಾಹನಗಳಿಗೆ ಈ ಸಾಧನವನ್ನು ಅಳವಡಿಸಿದರೆ ಮತ್ತಷ್ಟು ಸುರಕ್ಷಿತ ವಾಹನ ಚಾಲನೆ ಸಾಧ್ಯ ಎಂದು ಜಾನ್ ಮುರ್ರೇ ಅಭಿಪ್ರಾಯಪಟ್ಟಿದ್ದಾರೆ.

ಅಷ್ಟೇ ಅಲ್ಲದೇ, ಪೊಲೀಸ್ ಹಾಗೂ ಸೇನೆಯಲ್ಲೂ ಈ ತಂತ್ರಜ್ಞಾನ ಬಳಕೆಯಾಗಲಿದೆ ಎಂದು ಜಾನ್ ಮುರ್ರೇ ಹೇಳಿದ್ದಾರೆ. ಒತ್ತೆಯಾಳುಗಳನ್ನು ರಕ್ಷಿಸುವ ಕೆಲಸದಲ್ಲಿ ಇದರ ಪಾತ್ರ ಹೆಚ್ಚು ಎನ್ನಲಾಗಿದೆ. ಒತ್ತೆಯಾಳುಗಳನ್ನು ಗುಪ್ತ ಜಾಗವೊಂದಲ್ಲಿ ಬಚ್ಚಿಡುವುದು, ಹಿಂಸಿಸುವುದನ್ನು ಪತ್ತೆ ಹಚ್ಚುವುದು ಈಗ ಅತಿ ಕ್ಲಿಷ್ಟಕರವಾಗಿದೆ. ಥರ್ಮಲ್ ಇಮೇಜಿಂಗ್ (ದೇಹದ ಶಾಖವನ್ನು ಗುರುತಿಸುವುದು) ಬಳಸಿ ವ್ಯಕ್ತಿಗಳನ್ನು ಗುರುತಿಸುವ ತಂತ್ರಜ್ಞಾನ ಈಗಾಗಲೇ ಜಾರಿಯಲ್ಲಿದೆ. ಆದರೆ, ಅದಕ್ಕೆ ಮಿತಿಗಳು ಹಲವು. ಬಹುವರ್ಣ ಚಿತ್ರ ಸಿಗುವುದಿಲ್ಲ. ಕೇವಲ ಹಳದಿ, ಕಿತ್ತಲೆ ಹಾಗೂ ಕೆಂಪು ಬಣ್ಣದ ಚಿತ್ರಗಳು ಸಿಗುತ್ತವೆ. ಇದರಿಂದಾಗಿ ಒತ್ತೆಯಾಳು ಹಾಗೂ ಉಗ್ರರ ನಡುವೆ ವ್ಯತ್ಯಾಸ ಕಾಣಿಸುವುದಿಲ್ಲ. ಜಾನ್ ಮುರ್ರೇ ಕಂಡುಹಿಡಿದಿರುವ ಸಾಧನವು ಬಹುವರ್ಣದ ಹಾಗೂ ಸ್ವಾಭಾವಿಕವಾದ ಚಿತ್ರವನ್ನು ರಕ್ಷಣಾಕಾರ್ಯ ಮಾಡುವ ಸಿಬ್ಬಂದಿಗೆ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಕಾರ್ಯವೈಖರಿ ಹೇಗೆ?

ಈ ಸಾಧನವು ಎರಡು ಬಗೆಯ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಘಟನೆಯೊಂದು ಆಗಲೇ ಸಂಭವಿಸಿರುವಂಥದ್ದು. ಉದಾಹರಣೆಗೆ, ರಸ್ತೆ ಅಪಘಾತ. ಎರಡು ವಾಹನಗಳ ನಡುವೆ ಡಿಕ್ಕಿ ಸಂಭವಿಸಿರುವುದು. ವಾಹನಗಳು ಜಖಂ ಆಗಿರುವ ರೀತಿ, ಅವು ಡಿಕ್ಕಿಯಾಗಿರುವ ಕೋನ, ತೀವ್ರತೆಯನ್ನು ಗುರುತಿಸಿ ಘಟನೆಯ ಸಂಪೂರ್ಣ ವಿಡಿಯೊ ಅಥವಾ ಸರಣಿ ಛಾಯಾಚಿತ್ರ ವೊಂದನ್ನು ಸೃಷ್ಟಿಸುವ ಸಾಮರ್ಥ್ಯ ಈ ಸಾಧನಕ್ಕೆ ಇರುತ್ತದೆ. ಇದನ್ನು ಅನುಸರಿಸಿ ಅಪಘಾತದ ಬಹು ನಿಖರವಾದ ಚಿತ್ರಣವನ್ನು ಪಡೆಯಬಹುದಾಗಿದೆ. ಮತ್ತೊಂದು ಸಂದರ್ಭ, ಅಪಘಾತ ಸಂಭವಿಸುವುದಕ್ಕೂ ಮುನ್ನ, ವಾಹನವೊಂದು ಬರುತ್ತಿರುವುದು ಅಡೆತಡೆಗಳ ನಡುವೆಯೂ ಕಾಣುತ್ತದೆ. ಅಂದರೆ, ಎದುರು ಇರುವ ವಾಹನದ ಮರೆಯಲ್ಲಿ ಮತ್ತೊಂದು ವಾಹನ ಬರುತ್ತಿದ್ದರೆ, ಅಥವಾ ರಸ್ತೆ ವಿಭಜಕ, ಮರವೊಂದರ ಹಿಂಭಾಗದಲ್ಲಿ ವಾಹನ ಬರುತ್ತಿದ್ದರೆ ಅದನ್ನು ಈ ಸಾಧನ ಗುರುತಿಸಿ ಚಾಲಕನಿಗೆ ನೀಡುತ್ತದೆ.

ಒತ್ತೆಯಾಳುಗಳ ಸಂದರ್ಭದಲ್ಲೂ ಇದೇ ರೀತಿ ಈ ಸಾಧನ ಕಾರ್ಯನಿರ್ವಹಿಸಬಲ್ಲದು. ನಡೆದುಹೋಗಿರುವ ಪ್ರಕರಣವೊಂದರ ಲಭ್ಯ ಚಿತ್ರಗಳನ್ನು ಈ ಸಾಧನಕ್ಕೆ ನೀಡಿದರೆ, ವಿಡಿಯೊ ಅಥವಾ ಸರಣಿ ಛಾಯಾಚಿತ್ರಗಳನ್ನು ಸೃಷ್ಟಿಸಿ ಕೊಡುತ್ತದೆ. ಒತ್ತೆಯಾಳುಗಳು ಕಟ್ಟಡವೊಂದರ ಒಳಗಿದ್ದಲ್ಲಿ, ಮರೆಯಲ್ಲಿದ್ದಲ್ಲಿ ಸ್ಪಷ್ಟ ಸ್ವಭಾವಿಕ ವಿಡಿಯೊ ಅಥವಾ ಛಾಯಾಚಿತ್ರಗಳನ್ನು ನೀಡುತ್ತದೆ. ಇದರಿಂದ ಒತ್ತೆಯಾಳುಗಳನ್ನು ಪರಿಣಾಮಕಾರಿಯಾಗಿ ರಕ್ಷಿಸಬಹುದಾದ ಸಾಧ್ಯತೆ ಹೆಚ್ಚುತ್ತದೆ.

ಕಂಪ್ಯೂಟರ್ ಸೂತ್ರವನ್ನು ಬಳಸಿ, ಮರೆಯಲ್ಲಿರುವ ದೃಶ್ಯಗಳನ್ನು ಊಹಿಸುವುದು ಹಾಗೂ ಸುಧಾರಿತ ಇನ್‌ಫ್ರಾರೆಡ್ ಹಾಗೂ ಎಕ್ಸ್–ರೇ ಕಿರಣಗಳನ್ನು ಬಳಸಿ ಅಡೆತಡೆಗಳನ್ನು ಬೇಧಿಸಿ ದೃಶ್ಯವನ್ನು ಚಿತ್ರಿಸಿ ಕೊಡುವುದು ಈ ತಂತ್ರಜ್ಞಾನದ ಹಿಂದಿನ ಸರಳ ವಿವರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.