ಬೆಂಗಳೂರು: ಗೂಗಲ್ ಬೆನ್ನಲ್ಲೇ ಕನ್ನಡಿಗರ ಹೋರಾಟಕ್ಕೆ ಮಣಿದಿರುವ ಇ-ಕಾಮರ್ಸ್ ದೈತ್ಯ ಅಮೆಜಾನ್, ವಿವಾದಿತ ಕರ್ನಾಟಕದ ಬಾವುಟ ಹಾಗೂ ಲಾಂಛನವನ್ನು ಹೋಲುವ ಮಹಿಳೆಯರ ಒಳ ಉಡುಪಿನ ಚಿತ್ರವನ್ನು ಬದಲಿಸಿದೆ.

ಅಮೆಜಾನ್ ಕೆನಡಾ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಕನ್ನಡದ ಬಾವುಟದ ಬಣ್ಣ ಹಾಗೂ ಕರ್ನಾಟಕದ ರಾಜ್ಯ ಲಾಂಛನವನ್ನು ಹೊಂದಿರುವ ಹೆಣ್ಣುಮಕ್ಕಳ ಒಳ ಉಡುಪನ್ನು ಮಾರಾಟಕ್ಕಿರಿಸಿತ್ತು.

ಇದನ್ನೂ ಓದಿ:ಕನ್ನಡದ ಧ್ವಜ, ಲಾಂಛನವಿರುವ ಬಿಕಿನಿ ಮಾರಾಟಕ್ಕಿಟ್ಟ ಅಮೆಜಾನ್! ತೀವ್ರ ಆಕ್ರೋಶ

ಈ ಕುರಿತು ಕನ್ನಡ ಅಭಿಮಾನಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅಮೆಜಾನ್ ವಿವಾದಿತ ಚಿತ್ರವನ್ನು ತೆಗೆದು ಹಾಕಿದೆ.

ಈ ಪುಟದಲ್ಲೀಗ ಬಿಕಿನಿ ಚಿತ್ರವೊಂದನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೂ ಹೆಸರಿನಲ್ಲಿ ಈಗಲೂ 'Flag of Karnataka' ಎಂಬ ಪದ ಉಳಿದಿದೆ ಎಂಬುದು ಗಮನಾರ್ಹ. (ಅಮೆಜಾನ್ ಲಿಂಕ್ ಇಲ್ಲಿದೆ)

ವಿವಾದ ಬೆಳಕಿಗೆ ಬಂದಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕರ್ನಾಟಕ ಅರಣ್ಯ,ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ, ಕೆನಡಾ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಕನ್ನಡದ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ನೆಲದ ಶ್ರೇಷ್ಠತೆಯ ಅರಿವಿಲ್ಲದ ವಿದೇಶಿ ಸಂಸ್ಥೆಗಳು ಕನ್ನಡದ ಅಸ್ಮಿತೆಗೆ ಅವಮಾನ ಮಾಡುವಂತಹ ಯಾವುದೇ ಕೆಲಸ ಮಾಡಿದರೂ ಅದನ್ನು ನಾನು ಪ್ರಬಲವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಕನ್ನಡಿಗರ ಸ್ವಾಭಿಮಾನದ ಅಲೆಗೆ ಬೆದರಿದ ಗೂಗಲ್, ಕನ್ನಡ ಭಾಷೆಯ ಕುರಿತ ಅವಹೇಳನಕಾರಿ ವಿಷಯ ತೋರಿಸುತ್ತಿದ್ದ ವೆಬ್‌ಸೈಟ್‌ನ ವಿವಾದಾತ್ಮಕ ಪುಟವನ್ನು ತೆರವುಗೊಳಿಸಿತ್ತು. ಅಲ್ಲದೆ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿರುವುದಕ್ಕೆ ಕ್ಷಮೆಯಾಚಿಸಿತ್ತು.

ಇವನ್ನೂ ಓದಿ:
ಸರ್ಚ್ ಎಂಜಿನ್ನಲ್ಲಿ ಕನ್ನಡಕ್ಕೆ ಕೆಟ್ಟ ಭಾಷೆಯ ಪಟ್ಟಿ: ಕ್ಷಮೆಯಾಚಿಸಿದ ಗೂಗಲ್
ಕನ್ನಡಿಗರ ಸ್ವಾಭಿಮಾನಕ್ಕೆ ಬೆದರಿದ ಗೂಗಲ್: ಕನ್ನಡ ಈಗ ಜಗತ್ತಿನ 'ಭಾಷೆಗಳ ರಾಣಿ'
ವೆಂಕಯ್ಯನಾಯ್ಡು ಅವರ ವೈಯಕ್ತಿಕ ಖಾತೆಯ ‘ಬ್ಲೂ ಟಿಕ್‘ ತೆಗೆದ ಟ್ವಿಟರ್
ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಯ ‘ಬ್ಲೂ ಟಿಕ್‘ ಮರುಸ್ಥಾಪಿಸಿದ ಟ್ವಿಟರ್
ಈಗ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಖಾತೆ ‘ಬ್ಲೂ ಟಿಕ್‘ ತೆಗೆದ ಟ್ವಿಟರ್
ಗಣ್ಯರ ಖಾತೆಗಳ ‘ಬ್ಲೂ ಟಿಕ್’ ತೆಗೆದದ್ದಕ್ಕೆಟ್ವಿಟರ್ ನೀಡಿದ ಕಾರಣಗಳಿವು...
ಮೋಹನ್ ಭಾಗವತ್ ಖಾತೆಯ ಬ್ಲೂ ಟಿಕ್ ಪುನರ್ಸ್ಥಾಪಿಸಿದ ಟ್ವಿಟರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.