ಬೆಂಗಳೂರು: ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ಇನ್ನು ಮುಂದೆ ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳ ನೆರವಿಲ್ಲದೆಯೇ ವಾಟ್ಸ್‌ಆ್ಯಪ್ ಚಾಟ್ ಮತ್ತು ಡಾಟಾವನ್ನು ಐಫೋನ್‌ಗೆ ಸುಲಭದಲ್ಲಿ ವರ್ಗಾಯಿಸಬಹುದು.

ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು, ಐಫೋನ್ ಕೊಳ್ಳುವಾಗ ಅದರಲ್ಲಿನ ವಾಟ್ಸ್‌ಆ್ಯಪ್ ಚಾಟ್ ಮತ್ತು ಡಾಟಾವನ್ನು ವರ್ಗಾಯಿಸುವುದೇ ಸಮಸ್ಯೆಯಾಗಿ ಪರಿಣಮಿಸಿತ್ತು. ಅದಕ್ಕೆ ವಿವಿಧ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳ ನೆರವು ಬೇಕಾಗಿತ್ತು.

ಆದರೆ, ಈ ಬಾರಿ ಆ್ಯಪಲ್, ‘ಮೂವ್ ಟು ಐಓಎಸ್‘ ಅಪ್ಲಿಕೇಶನ್‌ನಲ್ಲಿಯೇ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಿಂದ ಐಫೋನ್‌ಗೆ ವಾಟ್ಸ್‌ಆ್ಯಪ್ ಚಾಟ್ ಮತ್ತು ಸಂಪೂರ್ಣ ಡಾಟಾ ಸುಲಭದಲ್ಲಿ ವರ್ಗಾಯಿಸುವ ಆಯ್ಕೆ ಒದಗಿಸಿದೆ.

ಈ ಮೊದಲು ಮೂವ್ ಟು ಐಓಎಸ್ ಆ್ಯಪ್‌ನಲ್ಲಿ ಮೆಸೇಜ್, ಕಾಂಟಾಕ್ಟ್‌ನಂತಹ ಕೆಲವೇ ಆಯ್ಕೆಗಳಿದ್ದು, ವಾಟ್ಸ್‌ಆ್ಯಪ್ ಚಾಟ್ ಅನ್ನು ವರ್ಗಾಯಿಸುವ ಆಯ್ಕೆ ಇರಲಿಲ್ಲ. ಈ ಬಾರಿ ನೂತನ ಅಪ್‌ಡೇಟ್ ಜತೆಗೆ ವಾಟ್ಸ್ಆ್ಯಪ್ ಚಾಟ್, ಡಾಟಾ ವರ್ಗಾಯಿಸುವ ಆಯ್ಕೆ ಒದಗಿಸಲಾಗಿದೆ.

ವಾಟ್ಸ್ಆ್ಯಪ್ ಸಂದೇಶ: ಬ್ಯಾಕ್ಅಪ್ ಮತ್ತು ಹೊಸ ಫೋನ್‌ಗೆ ವರ್ಗಾವಣೆ ಮಾಡುವುದು ಹೇಗೆ?

ಕಳೆದ ವರ್ಷ, ಆ್ಯಪಲ್, ಐಫೋನ್‌ನಿಂದ ವಾಟ್ಸ್ಆ್ಯಪ್ ಚಾಟ್‌ಗಳನ್ನು ಆ್ಯಂಡ್ರಾಯ್ಡ್ ಫೋನ್‌ಗೆ ವರ್ಗಾಯಿಸುವ ಆಯ್ಕೆ ನೀಡಿತ್ತು. ಈ ಬಾರಿ, ಆ್ಯಂಡ್ರಾಯ್ಡ್‌ನಿಂದ, ಐಫೋನ್‌ಗೆ ವರ್ಗಾಯಿಸುವ ಆಯ್ಕೆ ಒದಗಿಸಿದೆ.

iOS 16: ಹೊಸ ಓಎಸ್ ಪರಿಚಯಿಸಿದ ಆ್ಯಪಲ್; ಯಾವೆಲ್ಲ ಐಫೋನ್‌ಗೆ ಲಭ್ಯ?

ಆ್ಯಂಡ್ರಾಯ್ಡ್ ಫೋನ್‌ನಲ್ಲಿ, ‘ಮೂವ್ ಟು ಐಓಎಸ್‘ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ಅದರ ಮೂಲಕ, ಫೋಟೊ, ಕಾಂಟಾಕ್ಟ್, ವಿಡಿಯೊ, ಇಮೇಲ್, ಕ್ಯಾಲೆಂಡರ್ ಜತೆಗೆ ವಾಟ್ಸ್ಆ್ಯಪ್ ಚಾಟ್ ಮತ್ತು ಡಾಟಾವನ್ನು ಸುಲಭದಲ್ಲಿ ಐಫೋನ್‌ಗೆ ವರ್ಗಾಯಿಸಬಹುದಾಗಿದೆ.

ಫೇಸ್‌ಬುಕ್ ಮೆಸೆಂಜರ್ನಲ್ಲಿ ಫೋನ್ ಕಾಲ್ ಟ್ಯಾಬ್ ಅಪ್‌ಡೇಟ್

ಈವರೆಗೆ ಆ್ಯಂಡ್ರಾಯ್ಡ್ ಫೋನ್ ಬಳಸುತ್ತಿದ್ದು, ಐಫೋನ್ ಖರೀದಿಸಲು ಬಯಸುವವರಿಗೆ ಹೊಸ ಫೀಚರ್ ನೆರವಾಗಲಿದೆ.

ಹೆಚ್ಚುವರಿ ಭದ್ರತಾ ವೈಶಿಷ್ಟ್ಯ ಪರಿಚಯಿಸಲಿದೆ ವಾಟ್ಸ್ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.