ಬೆಂಗಳೂರು: ಜನಪ್ರಿಯ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ, ಯುರೋ ಕಪ್ ಫುಟ್ಬಾಲ್ ಟೂರ್ನಿಯ ಪತ್ರಿಕಾಗೋಷ್ಠಿಯಲ್ಲಿ ಕೊಕಾ ಕೋಲಾ ತಂಪುಪಾನೀಯದ ಬಾಟಲಿಗಳನ್ನು ಪಕ್ಕಕ್ಕೆ ಸರಿಸಿದ್ದು ದೊಡ್ಡ ಸುದ್ದಿಯಾಗಿದೆ.

ಕಳೆದ ಕೆಲವು ದಿನಗಳಿಂದ ಈ ವಿಚಾರವಾಗಿ ಸಾಮಾಜಿಕ ತಾಣಗಳಲ್ಲಿ ವಿವಿಧ ರೀತಿಯ ಚರ್ಚೆ ಕೂಡ ನಡೆಯುತ್ತಿದೆ.

ಅಲ್ಲದೆ, ಕ್ರಿಸ್ಟಿಯಾನೊ ರೊನಾಲ್ಡೊ, ಕೊಕಾ ಕೋಲಾ ಸಂಗತಿ ಕುರಿತು ಹಲವು ಮೀಮ್ಸ್, ಟ್ರೋಲ್ ಕೂಡ ಸೃಷ್ಟಿಯಾಗಿದೆ. ಈ ಬಗ್ಗೆ ದೇಶದಲ್ಲಿ ಚರ್ಚೆಯಾಗುತ್ತಿದ್ದಂತೆ, ವಿವಿಧ ಸಿನಿಮಾಗಳ ಸನ್ನಿವೇಶಕ್ಕೆ ಕ್ರಿಸ್ಟಿಯಾನೊ ರೊನಾಲ್ಡೊ ಹೇಳಿಕೆಯನ್ನು ಜತೆಯಾಗಿಸಿ ಮೀಮ್ಸ್ ರಚಿಸಲಾಗುತ್ತಿದೆ.

ನಟಿ ಅಮೃತಾ ರಾವ್ ಅವರ ಜಲ್ ಲೀಜಿಯೇ ಎಂಬ ಮೀಮ್ಸ್ ಈಗ ಹೆಚ್ಚು ಸದ್ದು ಮಾಡುತ್ತಿದ್ದು, ಕ್ರಿಸ್ಟಿಯಾನೊ ರೊನಾಲ್ಡೊ ಜತೆಗಿನ ಸನ್ನಿವೇಶಕ್ಕೆ ಹೋಲಿಸಲಾಗಿದೆ.

ಅಲ್ಲದೆ, ಅಮೃತಾ ರಾವ್ ಕೂಡ ಈ ಮೀಮ್ ಅನ್ನು ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಮೆಚ್ಚುಗೆ ಸೂಚಿಸಿದ್ದಾರೆ.

ನೀರು ಕುಡಿಯಿರಿ ಎಂದ ರೊನಾಲ್ಡೊ: ಕೋಕಾ ಕೋಲಾ ಕಂಪನಿಗೆ ₹29 ಸಾವಿರ ಕೋಟಿ ನಷ್ಟ!

ಮತ್ತೊಂದೆಡೆ, ಕ್ರಿಸ್ಟಿಯಾನೊ ರೊನಾಲ್ಡೊ ಹೇಳಿಕೆ ನೀಡುವುದಕ್ಕೂ ಮೊದಲೇ ಅಮೃತಾ ರಾವ್, ನೀರು ಕುಡಿಯಿರಿ ಎಂದು ಹೇಳಿದ್ದಾರೆ ಎಂದು ಜನರು ಅಮೃತಾ ರಾವ್ ಅವರನ್ನು ಹೊಗಳಿದ್ದಾರೆ.

PV Web Exclusive: ಸ್ಟಾರ್ಗಿರಿಯ ತಾಕತ್ತು ತೋರಿಸಿದ ರೊನಾಲ್ಡೊ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.