ಟೆಸ್ಲಾ ಖ್ಯಾತಿಯ ಉದ್ಯಮಿ ಎಲಾನ್ ಮಸ್ಕ್ ಅವರು ಟ್ವಿಟರ್ ಕಂಪನಿಯ ಪೂರ್ತಿ ಷೇರುಗಳನ್ನು ಖರೀದಿಸಿ ಕಂಪನಿಯನ್ನೇ ತನ್ನದಾಗಿಸಿಕೊಂಡು ಸುದ್ದಿಯಾಗಿದ್ದಾರೆ.

44 ಬಿಲಿಯನ್ ಡಾಲರ್ (₹3.36 ಲಕ್ಷ ಕೋಟಿ) ಮೊತ್ತಕ್ಕೆ ಟ್ವಿಟರ್‌ನ ಪೂರ್ತಿ ಷೇರು ಎಲಾನ್ ಮಸ್ಕ್ ಪಾಲಾಗಿದೆ. ಮುಂದೆ ಟ್ವಿಟರ್‌ನಲ್ಲಿ ಹಲವು ಬದಲಾವಣೆಗಳು ಉಂಟಾಗಲಿವೆ ಎನ್ನುವ ಚರ್ಚೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿದೆ.

ಎಲಾನ್ ಮಸ್ಕ್ ಅವರ ಟ್ವಿಟರ್ ಖರೀದಿ ಪ್ರಸ್ತಾಪಕ್ಕೆ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ.

ಅದರ ಬೆನ್ನಲ್ಲೇ, ಎಲಾನ್ ಮಸ್ಕ್ ಅವರು ಟ್ವೀಟ್ ಮಾಡಿದ್ದು, ನನ್ನನ್ನು ಅತಿಯಾಗಿ ಟೀಕಿಸುವವರೂ ಟ್ವಿಟರ್‌ನಲ್ಲಿಯೇ ಉಳಿಯಲಿದ್ದಾರೆ ಎಂದು ಭಾವಿಸಿದ್ದೇನೆ. ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ ಅದೇ ತಾನೆ.. ಎಂದು ಹೇಳಿದ್ದಾರೆ.

ಎಲಾನ್ ಮಸ್ಕ್ ತೆಕ್ಕೆಗೆ ಟ್ವಿಟರ್: ₹3.36 ಲಕ್ಷ ಕೋಟಿಗೆ ಡೀಲ್

ಹಲವು ಸಂದರ್ಭಗಳಲ್ಲಿ ಎಲಾನ್ ಮಸ್ಕ್ ಅವರ ಉದ್ಯಮ ಮತ್ತು ವ್ಯಾಪಾರ ನೀತಿಯನ್ನು ಜನರು ಟ್ವಿಟರ್‌ನಲ್ಲಿ ಟೀಕಿಸಿದ್ದರು. ಈಗ ಎಲಾನ್ ಮಸ್ಕ್ ಅವರೇ ಟ್ವಿಟರ್ ಅನ್ನು ಖರೀದಿಸಿದ್ದರಿಂದ ಟೀಕಿಸುವವರೂ ಟ್ವಿಟರ್‌ನಲ್ಲಿಯೇ ಇರಲಿ ಎಂಬರ್ಥದಲ್ಲಿ ಮಸ್ಕ್ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಹೊಸ ದಾಖಲೆ: 2 ಲಕ್ಷ ದಾಟಿದ ಟ್ವಿಟರ್ ಅನುಯಾಯಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.