ನವದೆಹಲಿ: ಫೇಸ್ಬುಕ್ ಇಂಡಿಯಾ ಕಂಪನಿಯ 2019–20ನೇ ಹಣಕಾಸು ವರ್ಷದ ಆದಾಯದಲ್ಲಿ ಶೇಕಡ 43ರಷ್ಟು ಹೆಚ್ಚಳ ಆಗಿದೆ. ಅದೇ ವರ್ಷದಲ್ಲಿ ಕಂಪನಿಯ ಲಾಭವು ಎರಡುಪಟ್ಟು ಹೆಚ್ಚಾಗಿದ್ದು, ಕಂಪನಿ ₹ 135.7 ಕೋಟಿ ಲಾಭ ಗಳಿಸಿದೆ. 2019–20ರಲ್ಲಿ ಕಂಪನಿಯ ಆದಾಯ ₹ 1,277 ಕೋಟಿ.

ಕಂಪನಿಯ ಒಟ್ಟು ಆದಾಯವು 2018–19ರಲ್ಲಿ ₹ 893 ಕೋಟಿ ಆಗಿತ್ತು ಎಂದು ವಿವಿಧ ಕಂಪನಿಗಳ ಕುರಿತ ವಿವರಗಳನ್ನು ಕಲೆಹಾಕುವ ‘ಟೊಫ್ಲರ್’ ಹೇಳಿದೆ. 2018–19ರಲ್ಲಿ ಫೇಸ್ಬುಕ್ ಇಂಡಿಯಾದ ಲಾಭವು ₹ 65.3 ಕೋಟಿ ಆಗಿತ್ತು.

‘ಭಾರತದಲ್ಲಿ ನಾವು ನಮ್ಮ ಹೂಡಿಕೆಯನ್ನು ಮುಂದುವರಿಸಲಿದ್ದೇವೆ. ಸಣ್ಣ ಮತ್ತು ದೊಡ್ಡ ಉದ್ದಿಮೆಗಳ ಜೊತೆ ನಿಂತು, ಅವುಗಳ ಆರ್ಥಿಕ ಪುನಶ್ಚೇತನಕ್ಕೆ ಸಹಾಯ ಮಾಡುತ್ತೇವೆ’ ಎಂದು ಫೇಸ್ಬುಕ್ ವಕ್ತಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.