ಅಹಮದಾಬಾದ್: ಸ್ವಯಂ ವಿವಾಹವಾಗುವುದಾಗಿ ಘೋಷಿಸಿ ದೇಶದಲ್ಲಿ ಚರ್ಚೆಗೆ ಗ್ರಾಸ ವಾಗಿದ್ದಗುಜರಾತ್ನ ವಡೋದರಾದ ‘ದ್ವಿಲಿಂಗಿ’ ಮಹಿಳೆ ಕ್ಷಮಾ ಬಿಂದು (24), ಕೆಲ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದ್ದಕ್ಕೆ ಎರಡು ದಿನಗಳು ಮುಂಚಿತವಾಗಿಯೇ
ಸ್ವವಿವಾಹವಾಗಿದ್ದಾರೆ.

ಜೂನ್ 11ರಂದು ಗುಜರಾತ್ನ ಸಾಂಪ್ರದಾಯಿಕ ವಿಧಿ ವಿಧಾನಗಳಂತೆ, ವಡೋದರಾದ ಕಲ್ಯಾಣ ಮಂಟಪದಲ್ಲಿ ಸ್ವವಿವಾಹವಾಗಿ,ಮಧುಚಂದ್ರಕ್ಕೆ ಗೋವಾಕ್ಕೆ ಹೋಗುವುದಾಗಿ ಕ್ಷಮಾ ಹೇಳಿಕೊಂಡಿದ್ದರು. ಸ್ಥಳೀಯ ರಾಜಕಾರಣಿಗಳು ಮತ್ತು ಕೆಲ ಹಿಂದೂ ಸಂಘಟನೆಗಳ ಕಾರ್ಯಕರ್ತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

‘ನಾನು ಮದುವೆಯಾಗಬೇಕಿದ್ದ ದೇವಸ್ಥಾನದಲ್ಲಿ ಕಾಯ್ದಿರಿಸಿದ್ದ ಬುಕಿಂಗ್ ಅನ್ನು ಬಿಜೆಪಿಯ ವಡೋದರಾ ಘಟಕದ ಉಪಾಧ್ಯಕ್ಷೆ ಸುನಿತಾಬೆನ್ ಅವರ ವಿರೋಧದಿಂದಾಗಿ ರದ್ದು ಪಡಿಸಿದ್ದರು.ಹೀಗಾಗಿ ವಿವಾದಕ್ಕೆ ಆಸ್ಪದ ನೀಡಬಾರದೆಂದು ಮನೆಯಲ್ಲಿಯೇ ಬುಧವಾರ ಆಯ್ದ ಕೆಲವೇ ಸ್ನೇಹಿತರ ಸಮ್ಮುಖದಲ್ಲಿ ಸ್ವವಿವಾಹವಾದೆ’ ಎಂದು ಕ್ಷಮಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.