ಬೆಂಗಳೂರು: ಚಿತ್ರಗಳು ಮತ್ತು ವಿಡಿಯೊಗಳ ಹಂಚಿಕೆಯ ಜನಪ್ರಿಯ ಜಾಲತಾಣ, ಮೆಟಾ ಪ್ಲಾಟ್ಫಾರ್ಮ್ ಒಡೆತನದ ಇನ್ಸ್ಟಾಗ್ರಾಮ್ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಕೆಲ ಸಮಯ ಸಾವಿರಾರು ಬಳಕೆದಾರರಿಗೆ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿತ್ತು.

‘ತಾಂತ್ರಿಕ ಸಮಸ್ಯೆಯಿಂದಾಗಿ ಇನ್ಸ್ಟಾಗ್ರಾಮ್ ಲಾಗಿನ್ ಆಗಲು ಕೆಲವು ಬಳಕೆದಾರರಿಗೆ ತೊಂದರೆ ಉಂಟಾಗಿತ್ತು. ಸಾಧ್ಯವಾದಷ್ಟು ಬೇಗ ಸಮಸ್ಯೆಯನ್ನು ಪರಿಹರಿಸಿದ್ದೇವೆ’ ಎಂದು ಮೆಟಾ ವಕ್ತಾರ ತಿಳಿಸಿದ್ದಾರೆ.

ತಾಂತ್ರಿಕ ದೋಷದಿಂದ ತೊಂದರೆಗೆ ಒಳಗಾದ ಬಳಕೆದಾರರ ಸಂಖ್ಯೆಯನ್ನು ಕಂಪನಿ ಬಹಿರಂಗಪಡಿಸಿಲ್ಲ. ಆದರೆ, ಸಾಮಾಜಿಕ ಮಾಧ್ಯಮಗಳ ತಾಂತ್ರಿಕ ದೋಷ ಟ್ರ್ಯಾಕ್ ಮಾಡುವ ವೆಬ್ಸೈಟ್ Downdetecter.com ಪ್ರಕಾರ, ಅಮೆರಿಕದ 1,00,000, ಕೆನಡಾದಲ್ಲಿ 24,000 ಮತ್ತು ಬ್ರಿಟನ್ನಲ್ಲಿ 56,000ಕ್ಕೂ ಹೆಚ್ಚು ಜನರಿಗೆ ಸಮಸ್ಯೆ ಎದುರಾಗಿತ್ತು.

ತಾಂತ್ರಿಕ ಸಮಸ್ಯೆಯ ಉತ್ತುಂಗದಲ್ಲಿ 1,80,000ಕ್ಕೂ ಹೆಚ್ಚು ಬಳಕೆದಾರರು instagram ಲಾಗಿನ್ ಸಮಸ್ಯೆ ಬಗ್ಗೆ ವರದಿ ಮಾಡಿದ್ದಾರೆ.

ಭಾನುವಾರ ಸಂಜೆ 5.45ರ ಸುಮಾರಿಗೆ ಕೆಲವು ಬಳಕೆದಾರರಿಗೆ ಇನ್ಸ್ಟಾಗ್ರಾಮ್ನಲ್ಲಿ ಸಮಸ್ಯೆ ಎದುರಾಗಿದ್ದು, ರಾತ್ರಿ 8.30ರ ಹೊತ್ತಿಗೆ ಅದರ ಪ್ರಮಾಣ ಕಡಿಮೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.