ಮುಂಬೈ: ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಮೋದಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಗೊತ್ತು. ಪಿಎಂ ನರೇಂದ್ರ ಮೋದಿ ಸಿನಿಮಾದ ಮೊದಲ ಪೋಸ್ಟರ್ಜನವರಿ 7 ರಂದು ಬಿಡುಗಡೆಯಾಗಿತ್ತು. ಅರಶಿನ ಬಣ್ಣದ ಕುರ್ತಾ ಧರಿಸಿ ಗಂಭೀರ ವದನನಾಗಿ ನಿಂತಿರುವ ಮೋದಿ ಪಾತ್ರಧಾರಿ ವಿವೇಕ್ ಒಬೆರಾಯ್. ಹಿಂಭಾಗದಲ್ಲಿ ತ್ರಿವರ್ಣ ಧ್ವಜ, ದೇಶಭಕ್ತಿ ಹೀ ಮೇರಿ ಶಕ್ತೀ ಹೈ (ದೇಶ ಭಕ್ತಿಯೇ ನನ್ನ ಶಕ್ತಿ) ಎಂಬ ಟ್ಯಾಗ್ ಲೈನ್‍ನೊಂದಿಗೆ ಈ ಪೋಸ್ಟರ್ ಗಮನ ಸೆಳೆದಿತ್ತು.

ಇದಾದ ನಂತರ ಮಾರ್ಚ್ 18 ಕ್ಕೆ ಚಿತ್ರದ ಎರಡನೇ ಪೋಸ್ಟರ್‌ನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮಾರ್ಚ್ 18ಕ್ಕೆ ಬಿಡುಗಡೆ ಮಾಡುವುದಾಗಿ ಹೇಳಲಾಗಿತ್ತು.ಆದರೆ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರೀಕ್ಕರ್ ಅವರ ನಿಧನದಿಂದಾಗಿ ಈ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ವಾಣಿಜ್ಯ ವಿಶ್ಲೇಷಕ ತರಣ್ ಆದರ್ಶ್ ಅವರು ಸೋಮವಾರ,ಪಿಎಂ ನರೇಂದ್ರ ಮೋದಿಸಿನಿಮಾದಲ್ಲಿ ವಿವೇಕ್ ಒಬೆರಾಯ್ ಅವರ ಲುಕ್ ಹೀಗಿದೆಎಂದು ಆರು ಫೋಟೊಗಳನ್ನು ಟ್ವೀಟಿಸಿದ್ದು, ಈ ಟ್ವೀಟ್‍ಗಳಿಗೆ ಪ್ರತಿಕ್ರಿಯಿಸಿದ ನೆಟ್ಟಿಗರು ಇದು ಮೋದಿನಾ? ಈ ಪಾತ್ರಧಾರಿ ಮೋದಿ ರೀತಿ ಕಾಣುವುದಿಲ್ಲ ಎಂದಿದ್ದಾರೆ.

ಮೋದಿ ಬಿಟ್ಟು ಬೇರೆ ಎಲ್ಲರಂತೆಯೂ ಕಾಣುತ್ತಿದ್ದಾರೆ

ಯಾವ ಕೋನದಲ್ಲಿ ನೋಡಿದರೆ ಇವರು ಮೋದಿಯಂತೆ ಕಾಣುತ್ತಾರೆ?

ಇವರು ಮೋದಿಯಂತೆ ಕಾಣುತ್ತಿಲ್ಲ. ಈ ಪಾತ್ರಕ್ಕೆ ಪರೇಶ್ ರಾವಲ್ ಸೂಕ್ತ ಎಂದು ನನ್ನ ಅನಿಸಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.