ಫೇಸ್ಬುಕ್ ಇಂಕ್ ಕಂಪನಿಯು ತನ್ನ ಜನಪ್ರಿಯ ಅಪ್ಲಿಕೇಷನ್ಗಳಾದ (ಆ್ಯಪ್) ವಾಟ್ಸ್ಆ್ಯಪ್ ಮತ್ತು ಇನ್ಸ್ಟಾಗ್ರಾಂಗೆ ಮರುನಾಮಕರಣ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಎರಡೂ ಆ್ಯಪ್ಗಳು ತನ್ನ ಮಾಲೀಕತ್ವದ್ದಾಗಿವೆ ಎನ್ನುವುದನ್ನು ಸಾರುವುದೇ ಇದರ ಮೂಲ ಉದ್ದೇಶವಾಗಿದೆ.

ಫೇಸ್ಬುಕ್ನ ದತ್ತಾಂಶದ ಖಾಸಗೀತನ ಮತ್ತು ಅದು ಯಾರೊಂದಿಗೆಲ್ಲಾ ಬಳಕೆದಾರನ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದೆ ಎನ್ನುವ ಬಗ್ಗೆ ಜಾಗತಿಕ ಮಟ್ಟದಲ್ಲಿ ನಿಯಂತ್ರಕ ಸಂಸ್ಥೆಗಳಿಂದ ಪರಿಶೀಲನೆ ಆರಂಭಿವಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿ ಈ ಬದಲಾವಣೆಗಳನ್ನು ತರಲಾರಂಭಿಸಿದೆ ಎನ್ನುವುದು ಉದ್ಯಮವಲಯದ ತಜ್ಞರು ಪ್ರತಿಕ್ರಿಯೆಯಾಗಿದೆ.

ಇನ್ಸ್ಟಾಗ್ರಾಂ ಆ್ಯಪ್ನ ಸೆಟ್ಟಿಂಗ್ಸ್ ಪುಟದ ಕೆಳಭಾಗದಲ್ಲಿ ’Instagram from Facebook’ ಎನ್ನುವ ಮಾಹಿತಿ ಸೇರಿಸಲಾಗಿದೆ. ಅದೇ ರೀತಿ ವಾಟ್ಸ್ಆ್ಯಪ್ ಹೆಸರು ’Whatsapp from Facebook’ ಎಂದಾಗಲಿದೆ. ತಕ್ಷಣಕ್ಕೆ ಈ ಬದಲಾವಣೆಗಳು ಬಳಕೆದಾರರಿಗೆ ಗೋಚರವಾಗುವುದಿಲ್ಲ ಎಂದೂ ತಿಳಿಸಿದೆ.

‘ಫೇಸ್ಬುಕ್ ನೀಡುತ್ತಿರುವ ಸೇವೆಗಳು ಮತ್ತು ಅದರ ಉತ್ಪನ್ನಗಳ ಬಗ್ಗೆ ಸ್ಪಷ್ಟಪಡಿಸಲು ಬಯಸುತ್ತೇವೆ. ಹೀಗಾಗಿ ಈ ಬದಲಾವಣೆಗಳನ್ನು ತರಲಾಗುತ್ತಿದೆ’ ಎಂದು ಕಂಪನಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.

ಮುಖ್ಯಾಂಶಗಳು

ಇನ್ಸ್ಟಾಗ್ರಾಂ

* 2012ರಲ್ಲಿ ಬಿಡುಗಡೆ.

* 100 ಕೋಟಿಗೂ ಹೆಚ್ಚುಒಂದು ತಿಂಗಳಿನಲ್ಲಿ ವಿಶ್ವದಲ್ಲಿ ವಾಟ್ಸ್ಆ್ಯಪ್ನ ಸಕ್ರಿಯ ಬಳಕೆದಾರರ ಸಂಖ್ಯೆ

* 7 ಕೋಟಿಗೂ ಹೆಚ್ಚುಒಂದು ತಿಂಗಳಿನಲ್ಲಿ ಭಾರತದಲ್ಲಿ ವಾಟ್ಸ್ಆ್ಯಪ್ನ ಸಕ್ರಿಯ ಬಳಕೆದಾರರ ಸಂಖ್ಯೆ

ವಾಟ್ಸ್ಆ್ಯಪ್:

* 2014ರಲ್ಲಿ ಬಿಡುಗಡೆ.

* 150 ಕೋಟಿಗೂ ಹೆಚ್ಚುಒಂದು ತಿಂಗಳಿನಲ್ಲಿ ವಿಶ್ವದಲ್ಲಿ ವಾಟ್ಸ್ಆ್ಯಪ್ನ ಸಕ್ರಿಯ ಬಳಕೆದಾರರ ಸಂಖ್ಯೆ

* 20 ಕೋಟಿಒಂದು ತಿಂಗಳಿನಲ್ಲಿ ಭಾರತದಲ್ಲಿ ವಾಟ್ಸ್ಆ್ಯಪ್ನ ಸಕ್ರಿಯ ಬಳಕೆದಾರರ ಸಂಖ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.