ಬೆಂಗಳೂರು: ಇಂದಿನ ದಿನಗಳಲ್ಲಿ ಜೀವನಶೈಲಿಯ ಭಾಗವೇ ಆಗಿ ಹೋಗಿರುವ ಸಾಮಾಜಿಕ ಮಾಧ್ಯಮಗಳಿಗಾಗಿಯೇ ಒಂದು ದಿನವನ್ನು ಮೀಸಲಿರಿಸಲಾಗಿದೆ. ಜೂನ್ 30 ಅನ್ನು ಪ್ರತಿವರ್ಷ 'ಸಾಮಾಜಿಕ ಮಾಧ್ಯಮ ದಿನ'ವನ್ನಾಗಿ ಆಚರಿಸಲಾಗುತ್ತದೆ.

ಆಚರಣೆಯ ಹಿನ್ನೆಲೆ ಏನು?

2010ರ ಜೂನ್ 30ರಂದು ಮಾಶೇಬಲ್ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮ ದಿನವನ್ನು ಆಚರಿಸಿತು. ಆನ್‌ಲೈನ್ ಮಾಧ್ಯಮ ಮತ್ತು ಜಾಗತಿಕ ಸಂವಹನವನ್ನು ಮತ್ತಷ್ಟು ಜನರಿಗೆ ಪರಿಚಯಿಸುವ ಹಾಗೂ ವಿಸ್ತರಿಸುವ ಉದ್ದೇಶ ಅಲ್ಲಿತ್ತು.

ಸಿಕ್ಸ್ ಡಿಗ್ರೀಸ್ ಎನ್ನುವ ಮೊದಲ ಆನ್‌ಲೈನ್ ಮಾಧ್ಯಮ 1997ರಲ್ಲಿ ಆಂಡ್ರ್ಯೂ ವೆನ್‌ರಿಚ್ ಎಂಬವರು ಆರಂಭಿಸಿದ್ದರು. 2001ರಲ್ಲಿ ಅದನ್ನು ಮುಚ್ಚಲಾಯಿತು.

ಆರಂಭದಲ್ಲಿ ಫ್ರೆಂಡ್‌ಸ್ಟರ್, ಮೈಸ್ಪೇಸ್ ಮತ್ತು ಫೇಸ್‌ಬುಕ್ ತಾಣಗಳು ಬಳಕೆದಾರರಿಗೆ ಪರಿಚಯಿಸಲ್ಪಟ್ಟವು. ನಂತರದಲ್ಲಿ ಟ್ವಿಟರ್, ಇನ್‌ಸ್ಟಾಗ್ರಾಂ, ಲಿಂಕ್ಡ್‌ಇನ್, ಸ್ನ್ಯಾಪ್‌ಚಾಟ್‌ನಂತಹ ತಾಣಗಳು, ಆ್ಯಪ್‌ಗಳು ಬಳಕೆಗೆ ಲಭ್ಯವಾದವು.

ಸಾಮಾಜಿಕ ಮಾಧ್ಯಮ ದಿನ ಯಾಕೆ?

ಜನರ ದಿನನಿತ್ಯದ ಬದುಕಿನಲ್ಲಿ ಸಾಮಾಜಿಕ ತಾಣಗಳ ಪಾತ್ರವೇನು, ಮತ್ತು ಹೇಗೆ ಅವು ಬದುಕಿನಲ್ಲಿ ಹಾಸುಹೊಕ್ಕಾಗಿವೆ ಎನ್ನುವುದನ್ನು ತಿಳಿಯುವುದು.

ಎಲ್ಲೋ ದೂರದಲ್ಲಿ ಇರುವವರನ್ನು ಕ್ಷಣದಲ್ಲೇ ಸಂಪರ್ಕಿಸಲು ಅನುವು ಮಾಡಿಕೊಡುವ ಸಾಮಾಜಿಕ ಮಾಧ್ಯಮಗಳ ಮಹತ್ವ ಅರಿಯುವುದು.

Explainer: ಏನಿದು ಟ್ವಿಟರ್ ಬ್ಲೂಟಿಕ್? ಇದಕ್ಕೆ ಯಾಕಿಷ್ಟು ಮಹತ್ವ?

ಇದಕ್ಕಾಗಿ ಜೂನ್ 30 ಅನ್ನು ಪ್ರತಿವರ್ಷ ಸಾಮಾಜಿಕ ಮಾಧ್ಯಮ ದಿನವನ್ನಾಗಿ ಆಚರಿಸಲಾಗುತ್ತದೆ.

PV Web Exclusive | ಕ್ಲಬ್ ಹೌಸ್ ತರಹದ ಹರಟೆಕಟ್ಟೆ ಫೇಸ್‌ಬುಕ್, ಟ್ವಿಟರಲ್ಲೂ ಇದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.