ಬೆಂಗಳೂರು: ವಾಟ್ಸ್ಆ್ಯಪ್ ಹೊರತುಪಡಿಸಿ, ಬೇರೆ ಯಾವುದೇ ಮೆಸೇಜಿಂಗ್ ಆ್ಯಪ್ಗಳನ್ನಾದರೂ ಬಳಸಿ ಎಂದು ಟೆಲಿಗ್ರಾಂ ಸ್ಥಾಪಕ ಪಾವೆಲ್ ಡುರೊವ್ ಹೇಳಿದ್ದಾರೆ.

ವಾಟ್ಸ್ಆ್ಯಪ್ನಲ್ಲಿ ಹಲವು ಭದ್ರತಾ ದೋಷಗಳಿವೆ. ಅವುಗಳ ಮೂಲಕ ನಿಮ್ಮ ಸ್ಮಾರ್ಟ್ಫೋನ್ಗೆ ವೈರಸ್ ಪ್ರವೇಶಿಸಿ, ಹ್ಯಾಕ್ ಆಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ. ಈ ಕುರಿತು ಪಾವೆಲ್, ತಮ್ಮಟೆಲಿಗ್ರಾಂ ಚಾನೆಲ್ಮೂಲಕಗುರುವಾರ ಹೇಳಿಕೆ ನೀಡಿದ್ದಾರೆ.

ವಾಟ್ಸ್ಆ್ಯಪ್ನಲ್ಲಿ ಕಳೆದ ವಾರ ಭದ್ರತಾ ಲೋಪವೊಂದು ಪತ್ತೆಯಾಗಿರುವುದನ್ನು ಕಂಪನಿಯೇ ಹೇಳಿತ್ತು ಎನ್ನುವುದನ್ನು ಪಾವೆಲ್ ಅವರು ಉಲ್ಲೇಖಿಸಿದ್ದಾರೆ.ಹ್ಯಾಕರ್ಸ್ ನಿಮ್ಮ ವಾಟ್ಸ್ಆ್ಯಪ್ಗೆ ವಿಡಿಯೊ ಕಳುಹಿಸುವ ಮೂಲಕ, ಸ್ಮಾರ್ಟ್ಫೋನ್ ಹ್ಯಾಕ್ ಮಾಡುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ವಾಟ್ಸ್ಆ್ಯಪ್ನಲ್ಲಿ ಪ್ರತಿವರ್ಷವೂ ಭದ್ರತಾ ದೋಷ ಕಾಣಿಸಿಕೊಳ್ಳುತ್ತಿದೆ. ಇದರಿಂದ ಬಳಕೆದಾರರಿಗೆ ಮತ್ತು ಅವರ ಡಿವೈಸ್ಗೆ ಹಾನಿಯಾಗುವ ಸಾಧ್ಯತೆಯಿದೆ. ಈ ರೀತಿಯ ಲೋಪಗಳು, ಹ್ಯಾಕರ್ಗಳಿಗೆ ಸುಲಭದಲ್ಲಿ ಫೋನ್ ಹ್ಯಾಕ್ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಪಾವೆಲ್ ತಿಳಿಸಿದ್ದಾರೆ.

ವಾಟ್ಸ್ಆ್ಯಪ್ ‘ವ್ಯೂ ಒನ್ಸ್‘ ಫೋಟೊ–ವಿಡಿಯೊ ಸ್ಕ್ರೀನ್ಶಾಟ್ಗೆ ಶೀಘ್ರ ನಿರ್ಬಂಧ

ಈ ಮೊದಲು ಕೂಡ ಪಾವೆಲ್, ವಾಟ್ಸ್ಆ್ಯಪ್ ಸುರಕ್ಷಿತವಲ್ಲ, ಅದರ ಬಳಕೆಯಿಂದ ದೂರವಿರಿ ಎಂದು ಬಳಕೆದಾರರನ್ನು ಎಚ್ಚರಿಸಿದ್ದರು.

ದೇಶದಲ್ಲಿ 23 ಲಕ್ಷಕ್ಕೂ ಅಧಿಕ ವಾಟ್ಸ್ಆ್ಯಪ್ ಖಾತೆಗಳಿಗೆ ಆಗಸ್ಟ್ನಲ್ಲಿ ನಿಷೇಧ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.