ಬೆಂಗಳೂರು: ಟೆಲಿಗ್ರಾಂ ಎನ್ನುವುದು ಉಚಿತ ಮೆಸೇಜಿಂಗ್ ಅಪ್ಲಿಕೇಶನ್ ಆಗಿದ್ದು, ವಾಟ್ಸ್ಆ್ಯಪ್‌ಗೆ ಪ್ರಬಲ ಪ್ರತಿಸ್ಪರ್ಧಿಯಾಗಿದೆ.

ವಾಟ್ಸ್ಆ್ಯಪ್ ಖಾಸಗಿತನ ನೀತಿ ಮತ್ತು ದತ್ತಾಂಶ ಹಂಚಿಕೆ ವಿವಾದ ಸಂದರ್ಭದಲ್ಲಿ ಟೆಲಿಗ್ರಾಂ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ.

ಅಲ್ಲದೆ, ವಾಟ್ಸ್ಆ್ಯಪ್‌ಗೆ ಹೋಲಿಸಿದರೆ ಟೆಲಿಗ್ರಾಂ ಹೆಚ್ಚಿನ ಖಾಸಗಿತನ ಮತ್ತು ಭದ್ರತೆಯ ಅಂಶಗಳನ್ನು ಹೊಂದಿದೆ.

ಟೆಲಿಗ್ರಾಂ ಅಪ್ಲಿಕೇಶನ್‌ನಲ್ಲಿರುವ ವಿವಿಧ ಆಕರ್ಷಕ ಫೀಚರ್‌ಗಳ ಕುರಿತು ಮಾಹಿತಿ ಇಲ್ಲಿದೆ.

ಸೈಲೆಂಟ್ ಮೆಸೇಜ್..

ಮೆಸೇಜ್ ಕಳುಹಿಸುವಾಗ, ಅದನ್ನು ಸ್ವೀಕರಿಸುವವರಿಗೆ ಯಾವುದೇ ಕಿರಿಕಿರಿಯಾಗದಂತೆ ಕಳುಹಿಸುವ ಆಯ್ಕೆಯಿದೆ. ಅಂದರೆ, ಸ್ವೀಕರಿಸಿದವರಿಗೆ, ಮೆಸೇಜ್ ಟೋನ್ ಕೇಳಿಸುವುದಿಲ್ಲ, ವೈಬ್ರೇಟ್ ಕೂಡ ಆಗುವುದಿಲ್ಲ. ಮೆಸೇಜ್ ಕಳುಹಿಸುವ ಸಂದರ್ಭದಲ್ಲಿ ಸೆಂಡ್ ಬಟನ್ ಅನ್ನು ಒತ್ತಿ ಹಿಡಿದಾಗ, ‘ಸೆಂಡ್ ವಿತೌಟ್ ಸೌಂಡ್’ ಆಯ್ಕೆ ಮಾಡಿದರಾಯಿತು.

ಕಳುಹಿಸಿದ ಮೆಸೇಜ್ ಅನ್ನು ಎಡಿಟ್ ಮಾಡಿ..

ಒಮ್ಮೆ ಕಳುಹಿಸಿದ ಮೆಸೇಜ್‌ನಲ್ಲಿ ಏನಾದರೂ ಎಡಿಟ್ ಮಾಡಬೇಕೆಂದು ಬಯಸಿದರೆ, ಅದನ್ನು ಒತ್ತಿ ಹಿಡಿದು, ಎಡಿಟ್ ಆಯ್ಕೆ ಬರುವಾಗ ಎಡಿಟ್ ಮಾಡಿ. ಅದಾದ ಬಳಿಕ ‘ಎಡಿಟೆಡ್’ ಲೇಬಲ್ ಕಾಣಿಸಿಕೊಳ್ಳುತ್ತದೆ.

ಮೀಡಿಯಾ ಅಟೊ ಡಿಲೀಟ್

ಚಾಟ್‌ನಲ್ಲಿ ಕಳುಹಿಸುವ ಫೋಟೊ-ವಿಡಿಯೊ ಸ್ವಯಂ ಆಗಿ ಡಿಲೀಟ್ ಆಗುವ ಆಯ್ಕೆಯಿದೆ. ಅಂದರೆ, ಫೋಟೊ-ವಿಡಿಯೊ ಕಳುಹಿಸುವಾಗ ಟೈಮರ್ ಆಯ್ಕೆ ಮಾಡಿದರೆ, ಪೋಟೊ-ವಿಡಿಯೊ ನಿರ್ದಿಷ್ಠ ಸಮಯದ ಬಳಿಕ ಅಳಿಸಿ ಹೋಗುತ್ತದೆ.

ಮೆಸೇಜ್ ಶೆಡ್ಯೂಲ್

ಟೆಲಿಗ್ರಾಂನಲ್ಲಿ ಮೆಸೇಜ್ ಶೆಡ್ಯೂಲ್ ಮಾಡಬಹುದು. ಮೆಸೇಜ್ ಕಳುಹಿಸುವಾಗ, ಅಲ್ಲಿ ಸೆಂಡ್ ಬಟನ್ ಒತ್ತಿ ಹಿಡಿದಾಗ, ‘ಶೆಡ್ಯೂಲ್ ಮೆಸೇಜ್’ ಆಯ್ಕೆ ಲಭ್ಯ, ಅದರ ಮೂಲಕ ಕಳುಹಿಸಿದರೆ ನೀವು ಬಯಸಿದ ಸಮಯಕ್ಕೆ ಮೆಸೇಜ್ ಡೆಲಿವರಿ ಆಗುತ್ತದೆ.

ಕಳುಹಿಸಿದವರ ಮೆಸೇಜ್ ಡಿಲೀಟ್

ನಿಮಗೆ ಮೆಸೇಜ್ ಕಳುಹಿಸಿದವರ ಚಾಟ್‌ನಿಂದಲೂ, ಅವರು ಕಳುಹಿಸಿದ ಮೆಸೇಜ್ ಅನ್ನು ಡಿಲೀಟ್ ಮಾಡಬಹುದು. ಸ್ವೀಕರಿಸಿದ ಮೆಸೇಜ್‌ನಲ್ಲಿರುವ ‘ಆಲ್ಸೋ ಡಿಲೀಟ್ ಫಾರ್ …’ ಆಯ್ಕೆ ಬಳಸಿ, ಅವರ ಚಾಟ್‌ನಿಂದಲೂ ಮೆಸೇಜ್ ಡಿಲೀಟ್ ಮಾಡಬಹುದು.

ಟೆಲಿಗ್ರಾಂ ಹೊಸ ಅಪ್ಡೇಟ್: ವಿಡಿಯೊ ಕರೆಯಲ್ಲಿ 1000 ಮಂದಿಗೆ ಅವಕಾಶ

ವಿಡಿಯೊ ಎಡಿಟ್

ವಿಡಿಯೊ ಕಳುಹಿಸುವಾಗ ಅದರಲ್ಲಿ ಎಡಿಟ್ ಮಾಡುವ ವಿವಿಧ ಆಯ್ಕೆಗಳನ್ನು ನೀಡಲಾಗಿದೆ.

ಯೂಟ್ಯೂಬ್ ಸರ್ಚ್, ಜಿಫ್ ಸರ್ಚ್, ಸೆಲೆಕ್ಟ್ ಟೆಕ್ಸ್ಟ್

ಟೆಲಿಗ್ರಾಂ ಬಳಸುತ್ತಲೇ, ಜಿಫ್ ಸರ್ಚ್ ಮಾಡಲು, ಯೂಟ್ಯೂಬ್ ಲಿಂಕ್ ಹುಡುಕಲು, ಮೆಸೇಜ್ ಒಂದರಲ್ಲಿನ ಆಯ್ದ ಭಾಗದ ಟೆಕ್ಸ್ಟ್ ಕಾಪಿ ಮಾಡಲು ಅವಕಾಶವಿದೆ.

WhatsApp: ಹೊಸ ಅಪ್ಡೇಟ್, ಫೋಟೊ-ವಿಡಿಯೊ ನೋಡಿದ ಬಳಿಕ ಮಾಯ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.