ಸ್ಯಾನ್ ಫ್ರಾನ್ಸಿಸ್ಕೊ: ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್, ಸೀಮಿತ ಸಂಖ್ಯೆಯ ಬಳಕೆದಾರರಿಗೆ ಮಾತ್ರ ಟ್ವೀಟ್ಸ್ ಕಾಣಿಸುವಂತಹ ‘ಸರ್ಕಲ್‘ ಆಯ್ಕೆಯನ್ನು ಮತ್ತಷ್ಟು ಬಳಕೆದಾರರಿಗೆ ಪರಿಚಯಿಸಿದೆ.

ಟ್ವಿಟರ್ ಬಳಕೆದಾರರು 150 ಮಂದಿಯನ್ನು ತಮ್ಮ ಸರ್ಕಲ್‌ನಲ್ಲಿ ಸೇರಿಸಿಕೊಳ್ಳಬಹುದು.

ಇನ್‌ಸ್ಟಾಗ್ರಾಮ್‌ನ ಕ್ಲೋಸ್ ಫ್ರೆಂಡ್ಸ್ ಫೀಚರ್‌ನಂತೆಯೇ ಇದು ಕಾರ್ಯನಿರ್ವಹಿಸುತ್ತದೆ.

ಟ್ವಿಟರ್ ಬಳಕೆದಾರರು, ತಮ್ಮ ಸೀಮಿತ ಸಂಖ್ಯೆಯ ಹಿಂಬಾಲಕರಿಗೆ ಮಾತ್ರ ಕಾಣಿಸುವಂತೆ, ಸರ್ಕಲ್ ಆಯ್ಕೆ ಮೂಲಕ ಟ್ವೀಟ್ ಮಾಡಬಹುದು ಎಂದು ದಿ ವರ್ಜ್ ವರದಿ ಮಾಡಿದೆ.

ಟ್ವೀಟ್ ಮಾಡುವುದಕ್ಕೂ ಮೊದಲು, ಮೇಲ್ಭಾಗದ ತುದಿಯಲ್ಲಿರುವ ಮೆನುವಿನ ಮೂಲಕ, ಸರ್ಕಲ್ ಆಯ್ಕೆ ಬಳಸಬಹುದು. ಅಲ್ಲದೆ, ಬೇಕಿರುವವರನ್ನು ಎಡಿಟ್ ಆಯ್ಕೆ ಮೂಲಕ ಸೇರಿಸಿಕೊಳ್ಳಬಹುದು. ನೀವು ಯಾರನ್ನಾದರೂ ಸರ್ಕಲ್‌ಗೆ ಸೇರಿಸಿದರೆ ಅಥವಾ ತೆಗೆದುಹಾಕಿದರೂ, ಅವರಿಗೆ ತಿಳಿಯುವುದಿಲ್ಲ.

ಇಲಾನ್ ಮಸ್ಕ್ ಟ್ವಿಟರ್ ಖರೀದಿ: ಮೂವರು ಹಿರಿಯ ಉದ್ಯೋಗಿಗಳ ರಾಜೀನಾಮೆ

ಸರ್ಕಲ್ ಮೂಲಕ ಮಾಡಿರುವ ಟ್ವೀಟ್ ಅನ್ನು ರಿಟ್ವೀಟ್ ಮಾಡಲಾಗದು. ಆದರೆ ಟ್ವೀಟ್ ಡೌನ್‌ಲೋಡ್ ಮತ್ತು ಸ್ಕ್ರೀನ್‌ಶಾಟ್ ತೆಗೆಯಬಹುದು. ಜತೆಗೆ, ಟ್ವಿಟರ್ ಮಾರ್ಗಸೂಚಿಗಳು ಇಲ್ಲಿ ಅನ್ವಯವಾಗುತ್ತವೆ.

ಟ್ವಿಟರ್ ಸ್ಪಾಮ್ ಖಾತೆ ಕುರಿತು ಸ್ಪಷ್ಟಪಡಿಸಿ: ಇಲಾನ್ ಮಸ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.