ಫೇಸ್‌ಬುಕ್ ಒಡೆತನದ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸ್‌ಆ್ಯಪ್ ಹೊಸ ವರ್ಷಾಚರಣೆ ದಿನ 140 ಕೋಟಿ ವಾಯ್ಸ್ ಮತ್ತು ವಿಡಿಯೋ ಕಾಲ್ ಮೂಲಕ ಹೊಸ ದಾಖಲೆ ಬರೆದಿದೆ. ಇದುವರೆಗೆ ಜಗತ್ತಿನಾದ್ಯಂತ ವಾಟ್ಸ್‌ಆ್ಯಪ್ ಮೂಲಕ ದಿನವೊಂದರಲ್ಲಿ ಮಾಡಲಾದ ಅತಿ ಹೆಚ್ಚು ಕರೆಗಳು ಇದಾಗಿದೆ.

2019ರ ಹೊಸ ವರ್ಷದ ಸಂಭ್ರಮಾಚರಣೆಗೆ ಹೋಲಿಸಿದರೆ ವಾಟ್ಸಾಪ್ ಕರೆ ಕೂಡ 50% ಕ್ಕಿಂತ ಹೆಚ್ಚಾಗಿದೆ. ಫೇಸ್‌ಬುಕ್ ಹೊಸ ವರ್ಷಕ್ಕೂ ಮುನ್ನ ವಾಟ್ಸ್‌ಆ್ಯಪ್‌ನಲ್ಲಿ ಹೊಸ ವೈಶಿಷ್ಟ್ಯಗಳನ್ನು ಘೋಷಿಸಿದ್ದರಿಂದ ಗಮನಾರ್ಹ ಸಾಧನೆ ಮಾಡಿದೆ. ಕಳೆದ ವರ್ಷ ಕೊರೋನಾ ವ್ಯಾಪಕವಾಗಿ ಹರಡಿದ್ದರಿಂದ ಜನರು ಡಿಜಿಟಲ್ ಸಂವಹನಕ್ಕೆ ಹೆಚ್ಚು ಒತ್ತು ನೀಡಿದ್ದು, ಧ್ವನಿ ಮತ್ತು ವಿಡಿಯೋ ಕರೆಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾದವು. ವಾಟ್ಸ್‌ಆ್ಯಪ್ ತನ್ನ ಗ್ರೂಪ್ ಕಾಲ್ ಮಿತಿಯನ್ನು ಸಹ ನಾಲ್ಕರಿಂದ ಎಂಟಕ್ಕೆ ಹೆಚ್ಚಿಸಿತ್ತು.

2020ರಲ್ಲಿ ಧ್ವನಿ ಮತ್ತು ವಿಡಿಯೊ ಕರೆ ವಾಟ್ಸ್‌ಆ್ಯಪ್‌ನ ಹೈಲೆಟ್ ಆಗಿದೆ. 2019ರ ಹೊಸ ವರ್ಷಚಾರಣೆ ಸಂದರ್ಭ ಜಗತ್ತಿನಾದ್ಯಂತ ಕಳುಹಿಸಲಾದ 2000 ಕೋಟಿ ವಾಟ್ಸ್‌ಆ್ಯಪ್ ಸಂದೇಶಗಳ ಪೈಕಿ 1200 ಕೋಟಿ ಸಂದೇಶಗಳು ಭಾರತ ಒಂದರಲ್ಲೇ ಕಳುಹಿಸಲಾಗಿದೆ. ವಾಟ್ಸ್‌ಆ್ಯಪ್ ತನ್ನ ಅತಿ ಹೆಚ್ಚು 40 ಕೋಟಿ ಬಳಕೆದಾರರನ್ನು ಭಾರತದಲ್ಲಿ ಹೊಂದಿದೆ.

ಇದರ ಜೊತೆಗೆ ಫೇಸ್‌ಬುಕ್ ಉತ್ಪನ್ನಗಳಲ್ಲಿ ಧ್ವನಿ ಮತ್ತು ವಿಡಿಯೋ ಕರೆಗಳು, ನೇರಪ್ರಸಾರದಲ್ಲೂ ಸಹ ಅಧಿಕ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 2020ರ ಹೊಸ ವರ್ಷಾಚರಣೆ ಸಂದರ್ಭ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಜಾಗತಿವಾಗಿ 5.5 ಕೋಟಿ ಲೈವ್ ಬ್ರಾಡ್‌ಕಾಸ್ಟ್ಸ್ ಮಾಡಲಾಗಿದೆ. ಹೊಸ ವರ್ಷದ ಮೊದಲ ದಿನ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಎರಡು ಪಟ್ಟು ಗ್ರೂಪ್ ಕಾಲಿಂಗ್ ಹೆಚ್ಚಳವಾಗಿದ್ದು, ವಿಡಿಯೊ ಕಾಲಿಂಗ್‌ನಲ್ಲಿ ಇದುವರೆಗಿನ ಅತಿದೊಡ್ಡ ದಿನವಾಗಿದೆ ಎಂದು ಫೇಸ್‌ಬುಕ್ ಹೇಳಿಕೊಂಡಿದೆ.

ಹೊಸ ವರ್ಷದ ಮುನ್ನಾದಿನವು ಯಾವಾಗಲೂ ತನ್ನ ಎಲ್ಲ ಉತ್ಪನ್ನಗಳಲ್ಲಿ ದಾಖಲೆ ಸಂಖ್ಯೆಯಲ್ಲಿ ಬಳಕೆದಾರರಿರುತ್ತಾರೆ ಎಂದು ಫೇಸ್‌ಬುಕ್ ಹೈಲೈಟ್ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.