ಬೆಂಗಳೂರು: ವಾಟ್ಸ್ಆ್ಯಪ್ ಬಳಕೆದಾರರ ಸುರಕ್ಷತೆ ಮತ್ತು ಖಾಸಗಿತನವನ್ನು ರಕ್ಷಿಸಲು ಮೆಟಾ ಒಡೆತನದ ಕಂಪನಿ ಹಲವು ಕ್ರಮಗಳನ್ನು ಕೈಗೊಂಡಿದೆ.

ವಾಟ್ಸ್ಆ್ಯಪ್ನಲ್ಲಿನ ಎರಡು ಹಂತದ ದೃಢೀಕರಣ ಪ್ರಕ್ರಿಯೆಯನ್ನು ಹಲವರು ಬಳಸುತ್ತಿಲ್ಲ. ಅಲ್ಲದೆ, ಭದ್ರತೆ ಸಾಕಾಗುತ್ತಿಲ್ಲ ಎಂದು ದೂರುವವರೂ ಇದ್ದಾರೆ.

ಹೀಗಾಗಿ, ಲಾಗಿನ್ ಪ್ರಕ್ರಿಯೆಯನ್ನು ಮತ್ತಷ್ಟು ಹೆಚ್ಚು ಪರಿಣಾಮಕಾರಿಯಾಗಿ ಜಾರಿಮಾಡಲು ವಾಟ್ಸ್ಆ್ಯಪ್ ಮುಂದಾಗಿದೆ.

ಹೆಚ್ಚುವರಿ ಭದ್ರತೆ ಇರುವ ಲಾಗಿನ್ ಪ್ರಕ್ರಿಯೆಯನ್ನು ವಾಟ್ಸ್ಆ್ಯಪ್ ಈಗಾಗಲೇ ಪರಿಶೀಲಿಸುತ್ತಿದೆ. ಈ ಬಗ್ಗೆ 'ವಾಬೀಟಾಇನ್ಫೋ' ವರದಿ ಮಾಡಿದ್ದು, ಪರೀಕ್ಷಾರ್ಥ ಬಳಕೆಯ ಬಳಿಕ ಎಲ್ಲರಿಗೂ ಅಪ್ಡೇಟ್ ಮೂಲಕ ನೀಡುವುದಾಗಿ ಹೇಳಿದೆ.

ಹೊಸ ವ್ಯವಸ್ಥೆಯಲ್ಲಿ ನಿಮ್ಮ ವಾಟ್ಸ್ಆ್ಯಪ್ ಸಂಖ್ಯೆಯನ್ನು ಮತ್ತೊಂದು ಡಿವೈಸ್ನಲ್ಲಿ ಬಳಸಿ, ಲಾಗಿನ್ ಆಗಲು ಯತ್ನಿಸಿದರೆ, ನಿಮಗೆ ನೋಟಿಫಿಕೇಶನ್ ಬರಲಿದೆ. ಜತೆಗೆ ವೆರಿಫೀಕೇಶನ್ ಕೋಡ್ ಬರಲಿದ್ದು, ಅದನ್ನು ಅನುಮೋದಿಸಿದ ಬಳಿಕವಷ್ಟೇ ಲಾಗಿನ್ ಆಗಲಿದೆ.

ಕಳುಹಿಸಿದ ಮೆಸೇಜ್ ಎಡಿಟ್ ಆಯ್ಕೆ ಪರಿಶೀಲಿಸುತ್ತಿರುವ ವಾಟ್ಸ್ಆ್ಯಪ್

ವಾಟ್ಸ್ಆ್ಯಪ್ ಹ್ಯಾಕ್, ಒಬ್ಬರ ಖಾತೆಯನ್ನು ಮತ್ತೊಬ್ಬರು ಬಳಸಿ ಲಾಗಿನ್ ಆಗುವುದಕ್ಕೆ ಇದರಿಂದ ಕಡಿವಾಣ ಬೀಳಲಿದೆ ಎಂದು ಕಂಪನಿ ಹೇಳಿದೆ.

ಟ್ವಿಟರ್ ‘ಸರ್ಕಲ್‘ ನೂತನ ಅಪ್ಡೇಟ್: ಮತ್ತಷ್ಟು ಬಳಕೆದಾರರಿಗೆ ಲಭ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.