ಸೆಲ್ ಫೋನ್ ಟವರ್ಗಳ ಆಧಾರದಲ್ಲಿ ಕಾರ್ಯ ನಿರ್ವಹಿಸುವ ಬದಲು, ಸ್ಯಾಟಲೈಟ್ ಫೋನ್ಗಳು ಸಂಪರ್ಕ ಸಾಧಿಸಲು ಉಪಗ್ರಹಗಳನ್ನು ಬಳಸಿಕೊಳ್ಳುತ್ತವೆ. ಸಾಮಾನ್ಯವಾಗಿ ಯಾವುದೇ ಮೊಬೈಲ್ ಫೋನ್ ಟವರ್ಗಳಿಲ್ಲದ ಪ್ರದೇಶಗಳಲ್ಲೂ ಸ್ಯಾಟಲೈಟ್ ಫೋನ್ಗಳನ್ನು ಬಳಸಿ ಸಂವಹನ ನಡೆಸಬಹುದು. ಹೆಚ್ಚಿನ ಸ್ಯಾಟಲೈಟ್ (ಅಥವಾ ಸ್ಯಾಟ್) ಫೋನ್ಗಳು ಜಗತ್ತಿನ ಬಹುತೇಕ ಪ್ರದೇಶಗಳನ್ನು ಸಂಪರ್ಕಿಸಬಲ್ಲವು.

ಪ್ರತಿಯೊಂದು ಕಂಪನಿಯೂ ತನ್ನದೇ ಆದ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತವೆ. ಅವುಗಳ ಸ್ಯಾಟಲೈಟ್ ಫೋನ್ಗಳೂ ವಿಭಿನ್ನವಾಗಿ ಕಾರ್ಯಾಚರಿಸುತ್ತವೆ. ಕೆಲವು ಸಂಸ್ಥೆಗಳು ಜಿಯೋಸಿಂಕ್ರೊನಸ್ ಕಕ್ಷೆಯಲ್ಲಿರುವ ಉಪಗ್ರಹಗಳನ್ನು ಬಳಸಿಕೊಂಡರೆ, ಇನ್ನಿತರ ಸಂಸ್ಥೆಗಳು ಲೋ ಅರ್ತ್ ಆರ್ಬಿಟ್ (ಎಲ್ಇಓ) ನಲ್ಲಿರುವ ಉಪಗ್ರಹಗಳನ್ನು ಬಳಸಿಕೊಳ್ಳುತ್ತವೆ. ಪ್ರತಿಯೊಂದು ವ್ಯವಸ್ಥೆಗೂ ಅದರದ್ದೇ ಆದ ಪ್ರಯೋಜನಗಳು, ಸಮಸ್ಯೆಗಳೂ ಇವೆ.

ಜಿಯೋಸಿಂಕ್ರೊನಸ್ ಉಪಗ್ರಹಗಳನ್ನು ಜಿಇಓ ಆರ್ಬಿಟ್ ಅಥವಾ ಹೈ ಅರ್ತ್ ಆರ್ಬಿಟ್ ಉಪಗ್ರಹಗಳು ಎಂದೂ ಕರೆಯುತ್ತಾರೆ. ಭೂಮಿ ತನ್ನ ಕಕ್ಷೆಯಲ್ಲಿ ಸುತ್ತುವಾಗಲೂ ಈ ಉಪಗ್ರಹಗಳು ಭೂಮಿಯ ಸಮಭಾಜಕ ವೃತ್ತದ ಮೇಲೆ, 35,000 ಕಿಲೋಮೀಟರ್ ಮೇಲೆ ಅವುಗಳ ಸ್ಥಾನದಲ್ಲೇ ನಿಂತಿರುತ್ತವೆ.

ಈ ಶಕ್ತಿಯುತ ಉಪಗ್ರಹಗಳಲ್ಲಿ ಒಂದೊಂದು ಉಪಗ್ರಹವೂ ಭೂಮಿಯಲ್ಲಿನ ವಿಶಾಲ ಪ್ರದೇಶವನ್ನು ಆವರಿಸುತ್ತವೆ. ಈ ಉಪಗ್ರಹಗಳು ಸಾಕಷ್ಟು ಮಾಹಿತಿಗಳನ್ನು ನಿರ್ವಹಿಸಬಲ್ಲವಾಗಿದ್ದು, ವಾಯ್ಸ್ ಕರೆಗಳು, ವೀಡಿಯೋ ಸ್ಟ್ರೀಮಿಂಗ್, ಮಾಹಿತಿ ವಿನಿಮಯ, ಸಂದೇಶ, ಟಿವಿ, ಹಾಗೂ ಇತರ ಕಾರ್ಯಗಳಲ್ಲಿ ಬಳಕೆಯಾಗುತ್ತವೆ. ಇನ್ಮಾರ್ಸ್ಯಾಟ್ ಹಾಗೂ ತುರಾಯಾಗಳು ಜಿಯೋಸಿಂಕ್ರೊನಸ್ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತವೆ.

ಗ್ಲೋಬಲ್ ಸ್ಟಾರ್ ಹಾಗೂ ಇರಿಡಿಯಂಗಳು ಎಲ್ಇಓ ಉಪಗ್ರಹಗಳನ್ನು 950 ಮೈಲಿ (1,500 ಕಿಲೋಮೀಟರ್) ಎತ್ತರದಲ್ಲಿ ಕಾರ್ಯಾಚರಿಸುತ್ತವೆ. ಒಂದು ವೇಳೆ ಜಿಯೋಸಿಂಕ್ರೊನಸ್ ಉಪಗ್ರಹಗಳು ಈ ಉದ್ಯಮದ ಗೊರಿಲ್ಲಾಗಳಾದರೆ, ಎಲ್ಇಓ ಉಪಗ್ರಹಗಳು ಸೊಳ್ಳೆಗಳಂತಿವೆ. ಇವುಗಳು ಅತ್ಯಂತ ಸಣ್ಣವೂ, ಹಗುರವೂ ಆಗಿದ್ದರೂ, ಸಾಕಷ್ಟು ಉಪಯೋಗಕ್ಕೆ ಬರುತ್ತವೆ.

60 ಎಲ್ಇಓಗಳ ಸಮೂಹ ಭೂಮಿಯ ಮೇಲೆ ಸಾಕಷ್ಟು ಪ್ರದೇಶವನ್ನು ವ್ಯಾಪಿಸಬಲ್ಲವು. ಈ ಉಪಗ್ರಹಗಳು ಭೂಮಿಯ ಸುತ್ತ ಪ್ರತಿ ಎರಡು ಗಂಟೆಗೆ ಒಂದು ಸುತ್ತು ಬರುತ್ತವೆ. ಇವುಗಳು ಗಂಟೆಗೆ 17,000 ಮೈಲಿ (27,359 ಕಿಲೋಮೀಟರ್) ವೇಗದಲ್ಲಿ ಚಲಿಸುವುದರಿಂದ ಏಕಕಾಲದಲ್ಲಿ ಎರಡು ಉಪಗ್ರಹಗಳನ್ನು ಕಾಣಲು ಸಾಧ್ಯವಿದೆ.

ಲೋ, ರಾಪಿಡ್ ಆರ್ಬಿಟ್ಗಳು ಭೂಮಿಯ ಬಹುತೇಕ ಸೇವೆಗಳನ್ನು ಒದಗಿಸುತ್ತವೆ. ಆದ್ದರಿಂದ ಅಂಟಾರ್ಕ್ಟಿಕಾದಲ್ಲಿರುವ ವಿಜ್ಞಾನಿಗಳು ಸಂವಹನಕ್ಕಾಗಿ ಎಲ್ಇಓ ಉಪಗ್ರಹಗಳನ್ನು ಬಳಸಿಕೊಳ್ಳುತ್ತಾರೆ.

ಕರೆಯ ಗುಣಮಟ್ಟ, ವಿಳಂಬ, ಹಾಗೂ ನಂಬಿಕಾರ್ಹತೆ ಎಲ್ಇಓಗಳಲ್ಲಿ ಇನ್ನೂ ಉತ್ತಮವಾಗಿರುತ್ತದೆ. ಜಿಯೋಸಿಂಕ್ರೊನಸ್ ಸಾಮರ್ಥ್ಯದ ಟರ್ಮಿನಲ್ಗಳಿಗಿಂತ ಇವು ಕಡಿಮೆ ಬ್ಯಾಟರಿ ಬಳಸಿಕೊಳ್ಳುತ್ತವೆ. ಇವುಗಳು ಪ್ರತಿ ಸೆಕೆಂಡಿಗೆ 9,600 ಬಿಟ್ಗಳಷ್ಟು ಮಾಹಿತಿ ವಿನಿಮಯ ಮಾಡುತ್ತವೆ. ಇದರ ವೇಗ ಜಿಯೋಸಿಂಕ್ರೊನಸ್ ವ್ಯವಸ್ಥೆಗಳಿಗಿಂತ ಕೊಂಚ ನಿಧಾನಗತಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಎಲ್ಇಓ ನೆಟ್ವರ್ಕ್ಗಳು ಯೂಟ್ಯೂಬ್ಗೆ ಕಾರ್ಯ ನಿರ್ವಹಿಸಲು ಅನುಮತಿಸುವುದಿಲ್ಲ.

ಎಲ್ಇಓಗಳಿಗೆ ದೊಡ್ಡ ಫೋನ್ ಆ್ಯಂಟೆನಾಗಳ ಅಗತ್ಯವಿರುವುದಿಲ್ಲ. ಅದರ ಬದಲು, ಈ ಫೋನ್ಗಳನ್ನು ಜೇಬಿನಲ್ಲೂ ಇಟ್ಟುಕೊಳ್ಳಬಹುದಾಗದ್ದು, ಸ್ಮಾರ್ಟ್ಫೋನ್ಗಳಿಂದ ಸ್ವಲ್ಪ ದೊಡ್ಡದಾಗಿವೆ.

ಆದರೆ ಉತ್ತಮ ಗುಣಮಟ್ಟದ ಸೇವೆಗಾಗಿ ಜಿಯೋಸಿಂಕ್ರೊನಸ್ ಅಥವಾ ಎಲ್ಇಓ ಫೋನ್ಗಳಿಗೆ ಉಪಗ್ರಹಗಳ ಲೈನ್ ಆಫ್ ಸೈಟ್ ನೋಟದ ಅಗತ್ಯವಿರುತ್ತದೆ. ಆದ್ದರಿಂದ ಸ್ಯಾಟಲೈಟ್ ಫೋನ್ ಬಳಸಿ ಕರೆ ಮಾಡಲು ಬಳಕೆದಾರರು ಮನೆಯಿಂದ ಹೊರಬರಬೇಕಾಗುತ್ತದೆ.

ದಟ್ಟವಾದ ಅರಣ್ಯಗಳಲ್ಲಿ ಅಥವಾ ಪರ್ವತ ಪ್ರದೇಶಗಳಲ್ಲಿ ಜಿಯೋಸಿಂಕ್ರೊನಸ್ ಉಪಗ್ರಹಗಳ ಪುಂಜ ಲೈನ್ ಆಫ್ ಸೈಟ್ ಕಷ್ಟಕರವಾಗುವಂತೆ ಮಾಡಬಹುದು. ಸಾಕಷ್ಟು ಉಪಗ್ರಹಗಳು ಆಕಾಶದಲ್ಲಿ ಇರುವುದರಿಂದ ಎಲ್ಇಓ ಉಪಗ್ರಹ ಪುಂಜ ಸಂಪರ್ಕ ಸಾಧಿಸಲು ಸಾಧ್ಯವಾಗುವಂತೆ ಮಾಡುತ್ತದೆ. ಆದರೆ ಈ ಅವಕಾಶ ಕೆಲವು ನಿಮಿಷಗಳಿಗೆ ಮಾತ್ರ ಸೀಮಿತವಾಗಬಹುದು.

ಯಾರು ಬೇಕಾದರೂ ಸ್ಯಾಟ್ ಫೋನ್ ಖರೀದಿಸಲು ಸಾಧ್ಯವೇ?

ಸೈದ್ಧಾಂತಿಕವಾಗಿ, ಯಾರು ಬೇಕಾದರೂ ಸ್ಯಾಟ್ ಫೋನ್ ಖರೀದಿಸಬಹುದು. ಆದರೆ ಅದಕ್ಕೆ ಕಾನೂನಿನ ಅನುಮತಿ ಮತ್ತು ಅಗತ್ಯ ವ್ಯವಸ್ಥೆಗಳು ಇರಬೇಕಾಗುತ್ತದೆ. ಭಾರತದಲ್ಲಿ ನೀವೇನಾದರೂ ಸ್ಯಾಟಲೈಟ್ ಫೋನ್ ಖರೀದಿಸಬೇಕಾದರೆ ಅದನ್ನು ಲೈಸೆನ್ಸ್ ಹೊಂದಿರುವ ಡೀಲರ್ ಮೂಲಕವೇ ಖರೀದಿಸಬೇಕಾಗುತ್ತದೆ.

ಆದರೆ ಸ್ಯಾಟಲೈಟ್ ಫೋನಿನ ಅಗತ್ಯವಿಲ್ಲದಿದ್ದರೆ ಅದನ್ನು ಖರೀದಿಸುವುದರಲ್ಲಿ ಯಾವುದೇ ಅರ್ಥವಿರುವುದಿಲ್ಲ. ಯಾಕೆಂದರೆ ಸ್ಯಾಟಲೈಟ್ ಫೋನ್ಗಳು ಸಾಮಾನ್ಯ ಫೋನ್ಗಳಿಂದ ಸಾಕಷ್ಟು ಹೆಚ್ಚು ಬೆಲೆಬಾಳುತ್ತವೆ. ಅದರ ಬೆಲೆ 1,000 ಡಾಲರ್ಗಿಂತಲೂ ಹೆಚ್ಚಿರುತ್ತದೆ. ಅದರ ಪ್ರತಿ ತಿಂಗಳ ದರ, ವಾರ್ಷಿಕ ದರ ನೂರಾರು ಡಾಲರ್ ಗಳಲ್ಲಿರುತ್ತದೆ. ಇಷ್ಟೊಂದು ಹಣ ತೆತ್ತು ಯೋಜನೆಗಳನ್ನು ಖರೀದಿಸಿದರೂ ಕೆಲವು ಸಮಯದ ತನಕ ಮಾತ್ರ ಮಾತನಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಹೆಚ್ಚು ಮಾತನಾಡಬೇಕಾದರೆ ಹೆಚ್ಚು ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಸಾಮಾನ್ಯವಾಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ಅದನ್ನು ಅವರು ರಜೆಯ ಅವಧಿಯಲ್ಲಿ ಅಗತ್ಯವಿದ್ದಾಗ, ದೂರ ಪ್ರದೇಶಗಳಿಗೆ ತೆರಳುವಾಗ ಸ್ಯಾಟಲೈಟ್ ಫೋನ್ಗಳನ್ನು ಬಾಡಿಗೆಗೆ ಪಡೆದುಕೊಳ್ಳುತ್ತಾರೆ.

ಸ್ಯಾಟಲೈಟ್ ಸಂಪರ್ಕವನ್ನು ಹಲವು ಜನಪ್ರಿಯ ಸಂಸ್ಥೆಗಳು ಒದಗಿಸುತ್ತವೆ. ಇರಿಡಿಯಂ, ಇನ್ಮಾರ್ಸ್ಯಾಟ್, ತುರಾಯ ಹಾಗೂ ಗ್ಲೋಬಲ್ ಸ್ಟಾರ್ ಸಂಸ್ಥೆಗಳು ಅವುಗಳಲ್ಲಿ ಪ್ರಮುಖವಾಗಿವೆ. ಪ್ರತಿಯೊಂದು ಸ್ಯಾಟಲೈಟ್ ಫೋನ್ ಸಹ ಅದರದೇ ಆದ ಪೂರೈಕದಾರ ವ್ಯವಸ್ಥೆಯೊಡನೆ ಕಾರ್ಯಾಚರಿಸುತ್ತದೆ. ಉದಾಹರಣೆಗೆ, ಒಂದು ತುರಾಯಾ ಪೋನ್ ಇರಿಡಿಯಂ ನೆಟ್ವರ್ಕ್ ನಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ.

ಭಾರತದಲ್ಲಿ ಸ್ಯಾಟಲೈಟ್ ಫೋನ್ ಒಯ್ಯುವುದರಲ್ಲಿ ಏನು ಸಮಸ್ಯೆ?

ಭಾರತದಲ್ಲಿ ಅನುಮತಿ ಪಡೆಯದೆ ಸ್ಯಾಟಲೈಟ್ ಫೋನ್ ಕೊಂಡೊಯ್ಯುವುದು ಕಾನೂನಿನ ಉಲ್ಲಂಘನೆಯಾಗುತ್ತದೆ. 2008ರ ನವೆಂಬರ್ ತಿಂಗಳಲ್ಲಿ ಪಾಕಿಸ್ತಾನದ ಉಗ್ರಗಾಮಿಗಳು ಮುಂಬೈ ಮೇಲೆ ದಾಳಿ ನಡೆಸಿದಾಗ ಅವರು ಸ್ಯಾಟಲೈಟ್ ಫೋನ್ಗಳನ್ನು ಬಳಸಿ ಪಾಕಿಸ್ತಾನದಲ್ಲಿದ್ದ ಲಷ್ಕರ್ ಎ ತಯ್ಬಾ ಉಗ್ರ ಮುಖಂಡರೊಡನೆ ಸಂಪರ್ಕದಲ್ಲಿದ್ದರು. ಅದರ ಬಳಿಕ ಭಾರತದಲ್ಲಿ ಸ್ಯಾಟಲೈಟ್ ಫೋನ್ ಹೊಂದುವುದು ಮತ್ತು ಬಳಸುವುದು ಕಷ್ಟಕರವಾಯಿತು.

ಕಾನೂನುಗಳು ಏನು ಹೇಳುತ್ತವೆ?

1993ರ ಭಾರತೀಯ ಟೆಲಿಗ್ರಫಿ ಆ್ಯಕ್ಟಿನ ಸೆಕ್ಷನ್ 6, ಭಾರತದಲ್ಲಿ ವೈರ್ ಲೆಸ್ ಟ್ರಾನ್ಸ್ಮೀಟರ್ ಹೊರತುಪಡಿಸಿ ಬೇರೆ ಯಾವುದೇ ವೈರ್ ಲೆಸ್ ಟೆಲಿಗ್ರಫಿ ಉಪಕರಣವನ್ನು ಬಳಸುವುದು ಕಾನೂನಿನ ಸೆಕ್ಷನ್ 3ರ ಉಲ್ಲಂಘನೆ ಎನ್ನುತ್ತದೆ. ಸೆಕ್ಷನ್ 3ರ ಪ್ರಕಾರ, ಸೆಕ್ಷನ್ 4ರಲ್ಲಿ ಹೊರತುಪಡಿಸಿದ್ದರ ಹೊರತಾಗಿ, ಯಾರೂ ವೈರ್ ಲೆಸ್ ಟೆಲಿಗ್ರಫಿ ಉಪಕರಣಗಳನ್ನು ಲೈಸೆನ್ಸ್ ರಹಿತವಾಗಿ ಬಳಸುವಂತಿಲ್ಲ.

ಟೆಲಿ ಕಮ್ಯುನಿಕೇಷನ್ ವಿಭಾಗದ ವೆಬ್ ಸೈಟ್ನಲ್ಲಿರುವ ನೋಟಿಸ್ ಒಂದರ ಪ್ರಕಾರ, "ಸ್ಯಾಟಲೈಟ್ ಫೋನ್ಗಳನ್ನು ಬಳಸಲು ಅನುಮತಿ ಇದೆ. ಆದರೆ ಅದಕ್ಕೆ ಭಾರತ ಸರ್ಕಾರದ ಟೆಲಿ ಕಮ್ಯುನಿಕೇಷನ್ ಡಿಪಾರ್ಟ್ಮೆಂಟ್ ನಿಂದ ನಿರ್ದಿಷ್ಟ ಅನುಮತಿ ಹಾಗೂ ಎನ್ಓಸಿ ಅಗತ್ಯವಿದೆ. ಎಂ/ಎಸ್ ಬಿಎಸ್ಎನ್ಎಲ್ ತಿಳಿಸಿರುವಂತೆ, ಈ ಕೆಳಗಿನ ಲೈಸೆನ್ಸ್ ಅನ್ನು ಬಿಎಸ್ಎನ್ಎಲ್ ಸಂಸ್ಥೆಗೆ ಸ್ಯಾಟಲೈಟ್ ಆಧಾರಿತ ಸೇವೆಗಳನ್ನು ಭಾರತದಲ್ಲಿ ಅಳವಡಿಸಿರುವ ಗೇಟ್ ವೇ ಮುಖಾಂತರ ಒದಗಿಸಲು ನೀಡಲಾಗಿದೆ" ಎನ್ನುತ್ತದೆ.

ವಿವಿಧ ದೇಶಗಳಲ್ಲಿರುವ ಭಾರತೀಯ ದೂತಾವಾಸದ ಜಾಲತಾಣಗಳಲ್ಲಿ ನೀಡಲಾದ ಮಾಹಿತಿಯ ಪ್ರಕಾರ, "ತುರಾಯ ಅಥವಾ ಇರಿಡಿಯಂ ಸ್ಯಾಟಲೈಟ್ ಫೋನ್ಗಳನ್ನು ಭಾರತದಲ್ಲಿ ಬಳಸುವುದು ಅನಧಿಕೃತ ಅಥವಾ ಅಕ್ರಮ" ಹಾಗೂ "ಯಾವ ಪ್ರಯಾಣಿಕರಾದರೂ ತಮ್ಮ ಸಾಮಾನು ಸರಂಜಾಮುಗಳಲ್ಲಿ ಸ್ಯಾಟಲೈಟ್ ಫೋನ್ಗಳನ್ನು ತೆಗೆದುಕೊಂಡು ಬಂದರೆ ಅವರು ಅದನ್ನು ಭಾರತಕ್ಕೆ ಬಂದೊಡನೆ ಕಸ್ಟಮ್ಸ್ ನಲ್ಲಿ ಹಾಜರುಪಡಿಸಿ, ಅದನ್ನು ಬಳಸಲು ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿ ಪಡೆಯತಕ್ಕದ್ದು" ಎನ್ನಲಾಗಿದೆ.

ಅದರೊಡನೆ ಈ ಹೇಳಿಕೆ ಮುಂದುವರಿದು, "ಭಾರತದಲ್ಲಿ ಯಾರಾದರೂ ಅನಧಿಕೃತ ಸ್ಯಾಟಲೈಟ್ ಫೋನ್ ಒಯ್ಯುವುದು, ಭಾರತೀಯ ಕಾನೂನಿನ ಪ್ರಕಾರ ಶಿಕ್ಷಾರ್ಹವಾಗಿರುತ್ತದೆ. ಭಾರತದ ಕಾನೂನು ಜಾರಿ ಇಲಾಖೆಗಳು ಆ ಅನಧಿಕೃತ ಉಪಕರಣಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಬಹುದಾಗಿದೆ" ಎನ್ನುತ್ತದೆ.

"ಆದ್ದರಿಂದ ಭಾರತಕ್ಕೆ ಆಗಮಿಸುವ ಪ್ರವಾಸಿಗರು ಭಾರತದ ಕಾನೂನುಗಳನ್ನು ಪಾಲಿಸಬೇಕು. ಭಾರತಕ್ಕೆ ಸ್ಯಾಟಲೈಟ್ ಫೋನ್ಗಳನ್ನು ಸರಿಯಾದ ಇಲಾಖೆಯಿಂದ ಅನುಮತಿ ಪಡೆಯದೆ ಭಾರತದಲ್ಲಿ ಬಳಸುವಂತಿಲ್ಲ" ಎಂದು ಸೂಚಿಸುತ್ತದೆ.

ಲೇಖಕರು- ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.