ನವದೆಹಲಿ: ಆ್ಯಂಡ್ರಾಯ್ಡ್ ಮತ್ತು ಐಓಎಸ್ ಆಪರೇಟಿಂಗ್ ಸಿಸ್ಟಂಗಳಂತೆಯೇ ಭಾರತಕ್ಕೆ ಶೀಘ್ರದಲ್ಲೇ ದೇಶೀಯ ಭಾರ್ಒಎಸ್ (BharOS) ಆಪರೇಟಿಂಗ್ ಸಿಸ್ಟಂ ದೊರೆಯಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಮದ್ರಾಸ್ ಐಐಟಿ ಭಾರ್ಒಎಸ್ ಅನ್ನು ಅಭಿವೃದ್ಧಿಪಡಿಸಿದೆ. ಇದರ ಪರಿಶೀಲನೆ ನಡೆಸಿ ಧರ್ಮೇಂದ್ರ ಪ್ರಧಾನ್ ಮಾತನಾಡಿದರು. ಟೆಸ್ಟಿಂಗ್ ಮಾಡಲಾಗುತ್ತಿರುವ ಭಾರ್ಒಎಸ್ ಶೀಘ್ರದಲ್ಲೇ ಬಳಕೆಗೆ ಲಭ್ಯವಾಗಲಿದೆ ಎಂದರು.

ಸರ್ಕಾರಿ ವ್ಯವಸ್ಥೆ ಮತ್ತು ಸಾರ್ವಜನಿಕರಿಗೆ ಮುಕ್ತ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಈ ಹಿಂದೆ ಅನುದಾನ ಘೋಷಣೆ ಮಾಡಿತ್ತು. ಇದರಡಿಯಲ್ಲಿ ಮದ್ರಾಸ್ ಐಐಟಿ ಭಾರ್ಒಎಸ್ ಅಭಿವೃದ್ಧಿಪಡಿಸಿದೆ. ಸ್ಮಾರ್ಟ್ಫೋನ್ಗಳಿಗೆ ವಿದೇಶಿ ಆಪರೇಟಿಂಗ್ ಸಿಸ್ಟಂ ಬಳಸುವ ಬದಲು ದೇಶಿಯವಾಗಿ ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನ ಬಳಕೆ ಮಾಡಬಹುದು ಎಂದರು.

ಏನಿದು ಭಾರ್ಒಎಸ್?

ಭಾರ್ಒಎಸ್ ದೇಶೀಯವಾಗಿ ಅಭಿವೃದ್ಧಿಪಡಿಸಿದ ಮೊಬೈಲ್ ಆಪರೇಟಿಂಗ್ ಸಿಸ್ಟಂ ಆಗಿದೆ. ಇದನ್ನು ಗೂಗಲ್, ಆ್ಯಂಡ್ರಾಯ್ಡ್ (ಗೂಗಲ್ ಒಡೆತನದ ಆ್ಯಂಡ್ರಾಯ್ಡ್) ಹಾಗೂ ಆ್ಯಪಲ್ನ ಐಓಎಸ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಖಾಸಗೀತನ ಮತ್ತು ಸುರಕ್ಷತೆಯ ಮೇಲೆ ಹೆಚ್ಚು ಒತ್ತು ನೀಡಲಾಗಿದೆ. ಇದು ಆ್ಯಂಡ್ರಾಯ್ಡ್ಗಿಂತ ಸ್ವಲ್ಪ ಭಿನ್ನವಾಗಿರಲಿದೆ ಎಂದು ಐಐಟಿ ಮದ್ರಾಸ್ ಹೇಳಿದೆ.

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಭಾರ್ಒಎಸ್ ಮೊಬೈಲ್ ಆಪರೇಟಿಂಗ್ ಸಿಸ್ಟಂ ಪರಿಶೀಲಿಸಿ ಹರ್ಷ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.