ನವದೆಹಲಿ: ಆ್ಯಂಡ್ರಾಯ್ಡ್ ಆಧಾರಿತ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ತಮ್ಮ ಸರ್ಚ್ ಎಂಜಿನ್ ಯಾವುದಾಗಿರಬೇಕು ಎಂಬುದನ್ನು ತಾವೇ ನಿರ್ಧರಿಸಲು ಅವಕಾಶ ಮಾಡಿಕೊಡುವುದಾಗಿ ಗೂಗಲ್ ಬುಧವಾರ ಹೇಳಿದೆ.

ಕೇಂದ್ರ ಸ್ಪರ್ಧಾ ಆಯೋಗವು ನೀಡಿದ ನಿರ್ದೇಶನಗಳಿಗೆ ಅನುಗುಣವಾಗಿ ಗೂಗಲ್ ಕಂಪನಿಯು ಕೆಲವು ಬದಲಾವಣೆಗಳನ್ನು ತರಲಿದೆ. ಆ್ಯಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯಲ್ಲಿ ಹೊಂದಿರುವ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಸಿಸಿಐ, ಗೂಗಲ್ ಕಂಪನಿಗೆ ₹ 1,337 ಕೋಟಿ ದಂಡ ವಿಧಿಸಿದೆ.

ಸ್ಮಾರ್ಟ್‌ಫೋನ್ ತಯಾರಕರು ತಾವು ತಯಾರಿಸುವ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್‌ನ ಯಾವ ಆ್ಯಪ್‌ಗಳು ಮಾತ್ರ ಇರಬೇಕು ಎಂಬುದನ್ನು ತೀರ್ಮಾನಿಸುವ ಅಧಿಕಾರವನ್ನೂ ತಾನು ನೀಡುವುದಾಗಿ ಕಂಪನಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.