ಗೂಗಲ್ ಮ್ಯಾಪ್ ಅನ್ನು ಪ್ರಯಾಣದ ಸಂದರ್ಭದಲ್ಲಿ ಬಳಸುವಾಗ ಹೆಚ್ಚು ಮಾಲಿನ್ಯವಿಲ್ಲದ, ಪರಿಸರಸ್ನೇಹಿ ಮಾರ್ಗಗಳ ಆಯ್ಕೆ ಬಗ್ಗೆ ಚಾಲಕರಿಗೆ ನಿರ್ದೇಶನ ನೀಡಲಿದೆ.

ಟ್ರಾಫಿಕ್ ದಟ್ಟಣೆ, ಮಾರ್ಗದ ಸ್ಥಿತಿಗತಿ ಸಹಿತ ವಿವಿಧ ಅಂಶಗಳನ್ನು ಆಧರಿಸಿ, ಗೂಗಲ್ ಈ ಹೊಸ ವ್ಯವಸ್ಥೆಯನ್ನು ಪರಿಚಯಿಸುತ್ತಿರುವುದಾಗಿ ಮಂಗಳವಾರ ಘೋಷಿಸಿದೆ.

ಆರಂಭದಲ್ಲಿ ಅಮೆರಿಕದಲ್ಲಿ ಈ ವ್ಯವಸ್ಥೆಯನ್ನು ಪರಿಚಯಿಸಲು ಗೂಗಲ್ ನಿರ್ಧರಿಸಿದೆ. ನಂತರದ ದಿನಗಳಲ್ಲಿ ಹಂತಹಂತವಾಗಿ ಇತರ ರಾಷ್ಟ್ರಗಳಿಗೂ ಹೊಸ ಆಯ್ಕೆಯನ್ನು ಗೂಗಲ್ ಮ್ಯಾಪ್ಸ್ ಆ್ಯಪ್‌ನಲ್ಲಿ ಒದಗಿಸಲಿದೆ.

ಹವಾಮಾನ ಬದಲಾವಣೆ ಮತ್ತು ಮಾಲಿನ್ಯದ ವಿರುದ್ಧ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಬಳಕೆದಾರರಿಗೆ ಹೆಚ್ಚು ಅನುಕೂಲವಾಗುವ ಮತ್ತು ಪರಿಸರಸ್ನೇಹಿ ಎನ್ನಿಸುವ ಆಯ್ಕೆಗಳನ್ನು ಗೂಗಲ್ ಪರಿಚಯಿಸುತ್ತಿದೆ ಎಂದು ಹೇಳಿದೆ.

ಮಾಲಿನ್ಯದ ಮತ್ತು ಮಾರ್ಗದ ವಿವರವನ್ನು ಸರ್ಕಾರಿ ಮೂಲಗಳಿಂದ ಗೂಗಲ್ ಸಂಗ್ರಹಿಸಿ, ಉಪಗ್ರಹ, ಸ್ಟ್ರೀಟ್ ವ್ಯೂನಂತಹ ವಿವಿಧ ಆಯ್ಕೆಗಳನ್ನು ಬಳಸಿಕೊಂಡು ಮಾಹಿತಿ ಒದಗಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.