ಕೈಯಲ್ಲಿ ಒಂದು ಸ್ಮಾರ್ಟ್ಫೋನು, ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಂನಲ್ಲಿ ಒಂದು ಅಕೌಂಟ್ ಇರುವ ಎಲ್ಲರೂ ಇಂದು ಛಾಯಾಗ್ರಾಹಕರೇ! ಮೊಬೈಲ್ ಫೋನ್ ಮೂಲಕ ಚಿತ್ರ ಕ್ಲಿಕ್ಕಿಸಿದರಾಯಿತು, ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಪ್ರಕಟಿಸಿದರಾಯಿತು! ಛಾಯಾಚಿತ್ರಗಳ ಈ ಜಗತ್ತು ಇಲ್ಲಿಯವರೆಗೆ ಬಂದಿರುವುದರ ಹಿಂದಿನ ಕಥೆ ಇಲ್ಲಿದೆ. ಏಕೆಂದರೆ ಇಂದು ವಿಶ್ವ ಛಾಯಾಗ್ರಹಣ ದಿನ.

18ನೇ ಶತಮಾನಕ್ಕೂ ಮೊದಲು ಕಲಾವಿದರು ಬಳಸುತ್ತಿದ್ದ ಕ್ಯಾಮೆರಾ ಅಬ್ಸ್ಕೂರಾ (ಈ ಲ್ಯಾಟಿನ್ ಶಬ್ದದ ಅರ್ಥ ಕತ್ತಲು ಕೋಣೆ - Dark Chamber) ಇಂದಿನ ಕ್ಯಾಮೆರಾಗಳ ಮುತ್ತಜ್ಜ ಹಾಗೂ ಛಾಯಾಗ್ರಹಣಕ್ಕೆ ನಾಂದಿ. ಅಂದು ಕಲಾವಿದರು ತಾವು ಬರೆಯಬೇಕಿದ್ದ ಚಿತ್ರಕ್ಕನುಗುಣವಾದ ದೊಡ್ಡ ಕಪ್ಪು ಪೆಟ್ಟಿಗೆಯನ್ನು ಮಾಡಿಕೊಂಡು ಅದರ ಒಂದು ಬದಿಯಲ್ಲಿ ರಂಧ್ರ ಕೊರೆದು ಅಲ್ಲಿಂದ ಬರುವ ಬೆಳಕಿನ ಕಿರಣಗಳು ಪ್ರತಿಫಲಿಸಿ, ಎದುರುಗಡೆ ಗೋಡೆ ಮೇಲೆ ಮೂಡುವ ತಲೆಕೆಳಗಾದ ಬಿಂಬದ ಮೇಲೆ ಕಾಗದ ಅಥವಾ ಕ್ಯಾನ್ವಾಸ್ ಇಟ್ಟು ಕೈಚಳಕ ತೋರುತ್ತಿದ್ದರು.

1816ರಲ್ಲಿ ಹಳೆಯ ಲಿಥೋಗ್ರಾಫಿ ಕಲಾಕೃತಿಗಳ ನಕಲು ಪ್ರತಿಗಳನ್ನು ಮಾಡಲು ಫ್ರಾನ್ಸ್ನ ಜೋಸೆಫ್ ನಿಸೋಫರ್ ನಿಯಪ್ಸ್ ಬೆಳಕಿಗೆ ಪ್ರತಿಕ್ರಿಯಿಸುವ ರಾಸಾಯನಿಕಗಳೊಂದಿಗೆ ಪ್ರಯೋಗಗಳನ್ನು ಆರಂಭಿಸಿದರು. ಈ ಪ್ರಯೋಗಗಳ ಭಾಗವಾಗಿ 1826–27ರಲ್ಲಿ ಅವರು ತಾವೇ ತಯಾರಿಸಿದ ಚಿಕ್ಕ ಕ್ಯಾಮೆರಾ ಅಬ್ಸ್ಕೂರಾ ಬಳಸಿ ತಮ್ಮ ಸ್ಟುಡಿಯೋದ ಕಿಟಕಿಯಿಂದ 8 ಗಂಟೆಗಳ ಕಾಲ ಎಕ್ಸ್ಪೋಜರ್ ನೀಡಿ ತೆಗೆದ ಚಿತ್ರ ಜಗತ್ತಿನ ಮೊದಲ ಯಶಸ್ವಿ ಛಾಯಾಚಿತ್ರ. ಇದನ್ನು ಅವರು ಅಂದು ಹೀಲಿಯಾಗ್ರಫಿ ಎಂದು ಕರೆದರು. ಈ ಚಿತ್ರ ‘ವೀವ್ ಫ್ರಮ್ ದ ವಿಂಡೊ ಅಟ್ ಲಾ ಗ್ರಾಸ್’ ಎಂದೇ ಪ್ರಸಿದ್ಧ. ಅಗಸ್ಟ್ 19, 1839 ರಂದು ಫ್ರೆಂಚ್ ಸರ್ಕಾರ, ತಂತ್ರಜ್ಞಾನದ ಪೇಟೆಂಟ್ ಖರೀದಿಸಿ ಜಗತ್ತಿಗೆ ಮುಕ್ತವಾಗಿಸಿದ ಕಾರಣ, ಈ ದಿನವನ್ನು ವಿಶ್ವ ಛಾಯಾಗ್ರಹಣ ದಿನವಾಗಿ ಆಚರಿಸಲಾಗುತ್ತದೆ.

ಈ ಕ್ಷೇತ್ರದಲ್ಲಿ ಸಂಶೋಧನೆಗಳು ಆದಂತೆ, ಮೊದಲು ಗಂಟೆಗಳಷ್ಟಿದ್ದ ಎಕ್ಸ್ಪೋಜರ್ ಅವಧಿ ನಿಮಿಷಗಳಿಗಿಳಿಯಿತು. ಕೊನೆಗೆ ಅದು ಕೆಲವು ಸೆಕೆಂಡುಗಳಿಗೆ ಇಳಿಯಿತು. ಆದರೂ ಛಾಯಾಗ್ರಾಹಕನ ಕೆಲಸ ಸುಲಭದ್ದಾಗಿರಲಿಲ್ಲ. ಪೆಟ್ಟಿಗೆ ಆಕಾರದ ಕ್ಯಾಮೆರವನ್ನು ಸ್ಟ್ಯಾಂಡ್ ಮೇಲೆ ಗಟ್ಟಿಯಾಗಿ ಕೂಡಿಸಬೇಕಿತ್ತು. ಹಿಂಭಾಗದಲ್ಲಿ ಮುಸುಕು ಹಾಕಿಕೊಂಡು ಫಿಲ್ಮ್ ಪ್ಲೇಟ್ ಹಾಕುವ ಜಾಗದಲ್ಲಿದ್ದ ಪರದೆ ಮೇಲೆ ಮೂಡುವ ಚಿತ್ರವನ್ನು ಲೆನ್ಸ್ ಹಿಂದೆ ಮುಂದೆ ಜರುಗಿಸಿ ಫೋಕಸ್ ಸರಿಮಾಡಿ, ಫಿಲ್ಮ್ಪ್ಲೇಟ್ ಕ್ಯಾಮೆರಾದಲ್ಲಿ ಸೇರಿಸಿ, ಅದರ ಮೇಲಿನ ಕಪ್ಪು ಪಟ್ಟಿ ಹೊರ ತೆಗೆದರೆ ಛಾಯಾಚಿತ್ರಕ್ಕೆ ರೆಡಿ.

ಮುಂದಿನ ಹಂತದಲ್ಲಿ, ಯಾರ ಚಿತ್ರ ತೆಗೆಯಬೇಕೋ ಅವರಿಗೆ ಸ್ವಲ್ಪವೂ ಅಲುಗಾಡದಂತೆ ಹೇಳಿ, ಅಲ್ಲಿನ ಬೆಳಕಿಗೆ ಅನುಗುಣವಾಗಿ ಲೆನ್ಸ್ ಮುಂದಿನ ಮುಚ್ಚಳ ತೆಗೆದು ಒಂದು.. ಎರಡು.. ಮೂರು.. ಎಂದು ಮನಸಿನಲ್ಲೇ ಲೆಕ್ಕಹಾಕಿ ಮುಚ್ಚಳ ಮುಚ್ಚಿದರೆ ಛಾಯಾಗ್ರಹಣ ಮುಗಿಯಿತು. ಮುಂದಿನದ್ದೆಲ್ಲ ಕತ್ತಲು ಕೋಣೆಯಲ್ಲಿ ಆ ಫಿಲ್ಮ್ನ ಡೆವಲಪಿಂಗ್ ಮತ್ತು ಪ್ರಿಂಟಿಂಗ್ ಕೆಲಸ.

ಪಿನ್ಹೋಲ್ ಕ್ಯಾಮೆರಾ

1888ರಲ್ಲಿ ಜಾರ್ಜ್ ಈಸ್ಟ್ಮನ್ ಅವರು ಈಸ್ಟ್ಮನ್ ಕೊಡ್ಯಾಕ್ ಕಂಪನಿ ಪ್ರಾರಂಭಿಸಿ ಪೇಪರ್ಫಿಲ್ಮ್ ಹಾಗೂ ಸರಳ ಬಾಕ್ಸ್ ಕ್ಯಾಮೆರಾ ಮಾರುಕಟ್ಟೆಗೆ ತಂದರು. ಈ ಕ್ಯಾಮೆರಾದಲ್ಲಿ ಒಂದು ಲೆನ್ಸ್ ಮತ್ತು ಛಾಯಾಚಿತ್ರ ಸೆರೆಡಿಯಲು ತೆಗೆಯುವ ಕಾವಾಟಿನ ಗುಂಡಿ ಮಾತ್ರ ಇತ್ತು. ಇದರಲ್ಲಿ ನೂರು ಚಿತ್ರಗಳನ್ನು ಸೆರೆಹಿಡಿಯಬಹುದಾಗಿತ್ತು. ಆದರೆ ಚಿತ್ರಗಳನ್ನು ತೆಗೆದ ನಂತರ ಚಿತ್ರಗಳನ್ನು ಪಡೆಯಲು ಇಡೀ ಕ್ಯಾಮೆರಾವನ್ನು ತಯಾರಕರಿಗೆ ಕಳುಹಿಸಬೇಕಿತ್ತು. ನಂತರದ ದಿನಗಳಲ್ಲಿ ಸುಧಾರಿತ ಪಿನ್ ಹೋಲ್ ಹಾಗೂ ಮಡಚಿಕೊಳ್ಳುವ ಕ್ಯಾಮೆರಾಗಳನ್ನು ಕೊಡ್ಯಾಕ್ ಹೊರತಂದಿತು. 1900ರಲ್ಲಿ ಕೊಡಾಕ್ನ ಒಂದು ಡಾಲರ್ನಷ್ಟು ಬೆಲೆಯ ‘ಬ್ರೌನಿ’ ಹೆಸರಿನ ಕ್ಯಾಮೆರಾ ಜನಸಾಮಾನ್ಯರು ಛಾಯಾಗ್ರಹಣದಲ್ಲಿ ಆಸಕ್ತಿ ತೋರಲು ಕಾರಣವಾಯಿತು.

ಟಿ.ಎಲ್.ಆರ್. ಕ್ಯಾಮೆರಾ

1905ರ ನಂತರ 35 ಎಂ.ಎಂ. ಕಡಿಮೆ ಭಾರದ ಚಿಕ್ಕ ಕ್ಯಾಮೆರಾಗಳು ಆಸಕ್ತರನ್ನು ತಮ್ಮತ್ತ ಸೆಳೆದವು. 1913ರಲ್ಲಿ ಆಸ್ಕರ್ ಬರ್ನಾಕ್ ಅವರ ಲೈಕಾ ಕ್ರಾಂತಿ ಮಾಡಿತು ಎಂದರೆ ತಪ್ಪಾಗಲಾರದು. ಮುಂದೆ ಕೊಡ್ಯಾಕ್ ಸೆರಿದಂತೆ ಅನೇಕ ಕಂಪನಿಗಳ 35 ಎಂ.ಎಂ. ಕ್ಯಾಮೆರಾಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವು. ಈ ಎಲ್ಲ ಕ್ಯಾಮೆರಾಗಳು ಟಿ.ಎಲ್.ಆರ್ ಅಂದರೆ ಟ್ವಿನ್ ಲೆನ್ಸ್ ರಿಫ್ಲೆಕ್ಸ್ ಕ್ಯಾಮೆರಾಗಳು. ಇದರಲ್ಲಿ ಸೆರೆಹಿಡಿಯಬೇಕಿದ್ದ ದೃಶ್ಯ ನೋಡಲು ಹಾಗೂ ಫಿಲ್ಮ್ನಲ್ಲಿ ಚಿತ್ರ ಮೂಡಿಸಲು ಎರಡು ಲೆನ್ಸ್ಗಳನ್ನು ಅಳವಡಿಸಲಾಗಿರುತ್ತದೆ. ಇದರಿಂದಾಗಿ, ಕಣ್ಣಿಗೆ ಕಾಣುವ ಹಾಗೂ ಫಿಲ್ಮ್ ಮೇಲೆ ಮೂಡಿಬರುವ ಚಿತ್ರದಲ್ಲಿ ಸ್ವಲ್ಪ ವ್ಯತ್ಯಾಸ ಇರುತ್ತಿತ್ತು. 1930ರ ವೇಳೆಗೆ ಕೊಡ್ಯಾಕ್ನ ಕಲರ್ ಫಿಲ್ಮ್ ಚಿತ್ರಗಳಲ್ಲಿ ಬಣ್ಣ ತುಂಬಿತು.

ಆದರೆ ಭಾರತದ ಮಟ್ಟಿಗೆ ಹೇಳಬೇಕೆಂದರೆ, 1960ರ ದಶಕದಲ್ಲಿ ಬಂದ 120 ಎಂ.ಎಂ. ಫಿಲ್ಮ್ರೋಲ್ನ ಅಗ್ಫಾ ಕ್ಲಿಕ್ ಕ್ಯಾಮೆರಾಗಳು ಕಡಿಮೆ ಬೆಲೆಯಿಂದಾಗಿ ಮೇಲ್ಮಧ್ಯಮ ವರ್ಗದವರೂ ಖರೀದಿಸಲು ಸಾಧ್ಯವಾಯಿತು.

ಎಸ್.ಎಲ್.ಆರ್. ಕ್ಯಾಮೆರಾ

ಟಿ.ಎಲ್.ಆರ್. ಉತ್ತರಾಧಿಕಾರಿಯಾಗಿ 1930ರ ದಶಕದಲ್ಲೇ ಎಸ್.ಎಲ್.ಆರ್. (ಸಿಂಗಲ್ ಲೆನ್ಸ್ ರಿಫ್ಲೆಕ್ಸ್, ಇದರಲ್ಲಿ ಒಂದೇ ಲೆನ್ಸ್ ಬಳಸುವುದರಿಂದ ಗುರಿ ಇಟ್ಟ ಚಿತ್ರಕ್ಕೂ ಮೂಡಿಬರುವ ಚಿತ್ರಕ್ಕೂ ವ್ಯತ್ಯಾಸ ಇರುವುದಿಲ್ಲ) ಕ್ಯಾಮೆರಾಗಳು ಮಾರುಕಟ್ಟೆಗೆ ಬಂದವು. ಆದರೆ 1950ರ ದಶಕದಲ್ಲಿ ಸುಧಾರಿತ ಆವೃತ್ತಿಗಳಾದ ಡುಫೆಕ್ಸ್, ಹೆಸಲ್ಬ್ಲೇಡ್ 1600 ಎಫ್, ನಿಕಾನ್ ಎಫ್, ಪೆಂಟೆಕ್ಸ್, ಕೆನಾನ್ ಮತ್ತಿತರ ಕ್ಯಾಮೆರಾಗಳು ಮಾರುಕಟ್ಟೆ ಪ್ರವೇಶಿಸಿದವು. ಬೇಕಾದಾಗ ಲೆನ್ಸ್ ಬದಲಾಯಿಸಲು ಇವುಗಳಲ್ಲಿ ಇದ್ದ ಅವಕಾಶ, ಛಾಯಾಗ್ರಹಣ ವೃತ್ತಿನಿರತರಿಗೆ ಹಾಗೂ ಆಸಕ್ತರಿಗೆ ವರದಾನವಾಯಿತು. ನಂತರದ ದಶಕಗಳಲ್ಲಿ ಇವುಗಳಿಗೆ ಎಲೆಕ್ಟ್ರಾನಿಕ್ ಸ್ಪರ್ಶ ನೀಡಲಾಯಿತು. ಚಿತ್ರ ತೆಗೆಯಬೇಕಾದ ಸ್ಥಳದಲ್ಲಿನ ಬೆಳಕಿಗೆ ಅನುಗುಣವಾಗಿ ಸ್ವಯಂಚಾಲಿತವಾಗಿ ಹೊಂದಿಕೊಳ್ಳುವ ಶಟರ್ ಸ್ಪೀಡ್ ಮತ್ತು ಅಪಾರ್ಚರ್ ಇದ್ದುದರಿಂದ ಛಾಯಾಚಿತ್ರ ಸೆರೆಹಿಡಿಯುವ ವೇಗ ಹೆಚ್ಚಿತು.

ಇನ್ಸ್ಟಂಟ್ ಕ್ಯಾಮೆರಾ

1948ರಲ್ಲೇ ಮಾರುಕಟ್ಟೆಗೆ ಬಂದ ಪೋಲರೈಡ್ ಕಂಪನಿಯ ಮಾಡೆಲ್–95 ಕ್ಯಾಮೆರಾದಿಂದ ಕೆಲವೇ ನಿಮಿಷಗಳಲ್ಲಿ ಸಂಸ್ಕರಿಸಿದ ಚಿತ್ರ ಕೈಗೆ ಸಿಗುವಂತಾಯಿತು. ಅದೇ ಸಮಯದಲ್ಲಿ ಇನ್ನೂ ಕೆಲವು ಕಂಪನಿಗಳ ಇನ್ಸ್ಟಂಟ್ ಕ್ಯಾಮೆರಾಗಳು ಬಂದವಾದರೂ ಹೆಚ್ಚಿನ ಬೆಲೆಯ ಕಾರಣದಿಂದ, ಚಿತ್ರದ ಪ್ರತಿಗಳನ್ನು ಮಾಡಲು ಸಾಧ್ಯವಿಲ್ಲದ್ದರಿಂದ ಅವು ಅಷ್ಟೇನೂ ಮೆಚ್ಚುಗೆ ಪಡೆಯಲಿಲ್ಲ. ಇಂದಿಗೂ ಅಲ್ಲೊಂದು ಇಲ್ಲೊಂದು ನೋಡಲು ಸಿಗುತ್ತವೆ.

ಡಿಜಿಟಲ್ ಕ್ಯಾಮೆರಾ

1970ರ ದಶಕದಲ್ಲಿ ಕೃತಕ ಉಪಗ್ರಹಗಳಲ್ಲಿ ಅಳವಡಿಸಲಾಗುತ್ತಿದ್ದ ಅತ್ಯಂತ ಸಂಕೀರ್ಣ ಡಿಜಿಟಲ್ ಕ್ಯಾಮೆರಾಗಳು ಜನರ ಕೈಗೆ ಸಿಗಲು ಐದು ವರ್ಷಗಳೇ ಹಿಡಿಯಿತು. 1975ರಲ್ಲಿ ಕೊಡ್ಯಾಕ್ ತಯಾರಿಸಿದ್ದ ಮೊದಲ 0.03 ಮೆಗಾಪಿಕ್ಸಲ್ನ ಡಿಜಿಟಲ್ ಕ್ಯಾಮೆರಾ 3.6 ಕೆ.ಜಿ. ಭಾರದ್ದಾಗಿತ್ತು. ಅದರಲ್ಲಿ ಬರೀ ಒಂದು ಚಿತ್ರ ದಾಖಲಾಗಲು 23 ಸೆಕೆಂಡು ಸಮಯ ಬೇಕಿತ್ತು. 1988ರಲ್ಲಿ ಬಂದ ಫ್ಯುಜಿ ಡಿ.ಎಸ್–1ಪಿ ಯನ್ನು ಮೊದಲ ಚಿಕ್ಕಗಾತ್ರದ ಡಿಜಿಟಲ್ ಕ್ಯಾಮೆರಾ ಎನ್ನಬಹುದು. ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ ಇನ್ನೂ ಅನೇಕ ಸೆರ್ಪಡೆಗಳಾದವು. 1990ರ ದಶಕದಲ್ಲಿ ಎಸ್.ಎಲ್.ಆರ್.ಗಳೂ ಡಿಜಿಟಲೀಕರಣಗೊಂಡವು. ಆದರೆ, 2000ನೆಯ ಇಸವಿಯ ನಂತರವೇ ಸುಧಾರಿತ ಕ್ಯಾಮೆರಾಗಳು ಛಾಯಾಗ್ರಹಣವನ್ನು ಅತ್ಯಂತ ಸುಲಭವಾಗಿಸಿದವು. ಇಂದು ಕಿಸೆಯಲ್ಲಿ ಮೊಬೈಲ್ ಹೊಂದಿರುವ ಎಲ್ಲರೂ ಛಾಯಾಗ್ರಾಹಕರೇ! ಅಗತ್ಯ ಇರಲಿ ಬಿಡಲಿ ಕಂಡದ್ದೆಲ್ಲವನ್ನೂ ತಮ್ಮ ಫೋನಿಗಿಳಿಸುವ ಹಟ ಅಥವಾ ಗೀಳು.

ಇಂದು ನಿಮಿಷಕ್ಕೆ ಹತ್ತು ಚಿತ್ರ ಸೆರೆ ಹಿಡಿಯುವ ಜನರಿಗಾಗಿ ನೂರ ತೊಂಬತ್ತು ವರ್ಷಗಳ ಹಿಂದೆ ಜೋಸೆಫ್ ನಿಸೋಫರ್ ನಿಯಪ್ಸ್ ಹತ್ತು ವರ್ಷಗಳ ಸತತ ಪರಿಶ್ರಮ ಹಾಕಿ ಒಂದು ಚಿತ್ರ ಸೆರೆಹಿಡಿದರೇನೊ?!

(ಪೂರಕ ಮಾಹಿತಿ, ಚಿತ್ರಗಳು: ವಿವಿಧ ಮೂಲಗಳಿಂದ, ವಿಕಿಪಿಡಿಯಾ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.