ಪ್ರೇಮಿಗಳ ಕಣ್ಸನ್ನೆ, ಸ್ನೇಹಿತರ ಗುದ್ದಾಟ–ತುಂಟಾಟ, ಹಿರಿಯರಿಗೆ ಗೌರವ, ಪ್ರೀತಿ,ಪ್ರೇಮ,ಅಳು, ನಗು,ಮಂದಹಾಸ,ನಾಚಿಕೆ ಇವುಗಳನ್ನೆಲ್ಲ ಬೇರೆಲ್ಲೋ ಕುಳಿತ ವ್ಯಕ್ತಿಯ ಮುಂದೆ ಹೇಗೆ ತೋರಿಸಿಕೊಳ್ಳಲು ಸಾಧ್ಯ? ನಮ್ಮ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗದೇಇರಬಹುದು. ಹೀಗಿರುವಾಗ ಹಲವಾರು ಬಾರಿ ಸಂವಹನದ ಕೊರತೆಯೂ ಉಂಟಾಗುತ್ತದೆ.

ಎಷ್ಟೋ ಸಾರಿ ನಾವು ಏನೋ ಹೇಳಬೇಕು, ಕೇಳಬೇಕು ಎಂದು ಬಯಸುತ್ತೇವೆ. ಆದರೆ ಪದಗಳನ್ನು ಹೇಗೆ ಬಳಸುವುದು ಎಂಬುವುದು ತಿಳಿದಿರುವುದಿಲ್ಲ. ಹೀಗಿರುವಾಗಎಮೋಜಿಯನ್ನು ಕಳಿಸಿ ಮನಸ್ಸಿನ ಮಾತನ್ನು ತಿಳಿಸುತ್ತೇವೆ.ಜುಲೈ 17ರಂದು ವಿಶ್ವ ಎಮೋಜಿ ದಿನವಾಗಿ ಆಚರಿಸಲ್ಪಡುತ್ತದೆ.

ಸಿಟ್ಟು, ಖುಷಿ, ನಗು, ಅಳು ಎಲ್ಲವನ್ನು ತಿಳಿಸಲು ಕೇವಲ ಒಂದು ಎಮೋಜಿ ಸಾಕಾಗುವ ಕಾಲವಿದು. ವಿಶ್ವ ಎಮೋಜಿ ದಿನದಂದೇ ಆ್ಯಪಲ್ ಹಾಗೂ ಗೂಗಲ್ಹೆಚ್ಚಿನ ಎಮೋಜಿಗಳನ್ನು ಪರಿಚಯಿಸಿದ್ದು, ಶೀಘ್ರದಲ್ಲೇಅವುನಿಮ್ಮ ಸ್ಮಾರ್ಟ್ ಫೋನ್ಗಳಿಗೆ ಬರಲಿವೆ ಎಂದು ತಿಳಿಸಿವೆ. ವಿಶ್ವ ಎಮೋಜಿ ದಿನದಂದು ಎಮೋಜಿಗಳಂತೆ ಕಾಣುವ ಬಟ್ಟೆಗಳನ್ನು ಧರಿಸಿ, ಮುಖಕ್ಕೆ ಎಮೋಜಿಗಳ ಚಿತ್ರವನ್ನು ಹಿಡಿದು ನೆಟ್ಟಿಗರು ಟ್ವಿಟರ್, ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂನಲ್ಲಿ ತಮ್ಮ ಚಿತ್ರವನ್ನು ಶೇರ್ ಮಾಡಿದ್ದಾರೆ

ಎಮೋಜಿಗಳ ಇತಿಹಾಸ:

ಎನ್ಟಿಟಿ ಡೊಕೊಮೊದಲ್ಲಿ ಕೆಲಸಮಾಡುತ್ತಿದ್ದ ಜಪಾನ್ ಮೂಲದ ಶಿಗೇಟಕಾ ಕುರಿಟಾ ಎಂಬ ಇಂಜಿನೀಯರ್ 1998ರಲ್ಲಿ ಈ ಎಮೋಜಿಗಳನ್ನು ಸಿದ್ದಪಡಿಸಿದ್ದರು.1990 ರಲ್ಲಿ ಎಮೋಜಿಗಳನ್ನು ಮಾಡಿದ್ದರೂ 2010 ರಲ್ಲಿ ಮೊಬೈಲ್ ಬಳಕೆ ಹೆಚ್ಚುತ್ತಿದ್ದಂತೆ ಎಮೋಜಿಗಳನ್ನು ಅಭಿವೃದ್ದಿ ಪಡಿಸಲಾಯಿತು.

ಅತೀ ಹೆಚ್ಚು ಉಪಯೋಗಿಸುವ ಎಮೋಜಿಗಳು
ಸಂತೋಷದ ಕಣ್ಣೀರು ಇರುವ ಎಮೋಜಿ ಸದ್ಯ ಟ್ವಿಟರ್ನಲ್ಲಿ ಅತೀ ಹೆಚ್ಚು ಬಳಕೆ ಕಂಡಿರುವ ಎಮೋಜಿ. ಫೇಸ್ಬುಕ್ನಲ್ಲಿ ಪ್ರೀತಿ, ಹೃದಯಕ್ಕೆ ಸಂಬಂಧಿಸಿದಎಮೋಜಿ ಹೆಚ್ಚು ಉಪಯೋಗಿಸಲಾಗಿದೆ. ಹಾಗೆಯೇ ಬ್ಲೋವಿಂಗ್ ಅ ಕಿಸ್ ಸಹ ಭಾರತದಲ್ಲಿ ಅತೀ ಹೆಚ್ಚು ಬಳಸಿರುವ ಎಮೋಜಿ.

ಎಮೋಜಿಗಳ ಬಳಕೆ ನಿಮಗೆ ಗೊತ್ತಿದೆಯಾ?

ಒಂದು ಸಂದೇಶದ ಜತೆಎಮೋಜಿಯನ್ನು ಕಳಿಸುವ ಮೂಲಕ ನಮ್ಮ ಭಾವನೆಗಳು ಸರಳವಾಗಿ ತಿಳಿಸಬಹುದು.ಅತಿಯಾದ ಕೋಪ ಬಂದಾಗ ಪೂರ್ಣವಾಗಿ ಕೆಂಪಾಗಿರುವ ಗೊಂಬೆಯ ಮುಖದ ಎಮೋಜಿಯನ್ನು ಬಳಸುತ್ತೇವೆ. ಅನಾರೋಗ್ಯದಿಂದ ಬಳಲುತ್ತಿದ್ದಾಗ ಬಾಯಲ್ಲಿ ಥರ್ಮಾಮೀಟರ್ಇರುವ ಎಮೋಜಿಯನ್ನು ಬಳಸುತ್ತೇವೆ. ಗಾಬರಿಯಾಗುವಂತಹ ವಿಷಯ ತಿಳಿದಾಗ ಎರಡು ಕಣ್ಣುಗಳು ದೊಡ್ಡದಾಗಿ ಗಾಬರಿಯಿಂದ ನೋಡುವ ಎಮೋಜಿಯನ್ನು ಉಪಯೋಗಿಸುತ್ತೇವೆ. ಬೇಸರವಾದಾಗ ಕಣ್ಣುಗಳನ್ನು ಕೆಳಗೆ ಮಾಡುವ ಮತ್ತು ದುಃಖವಾದಾಗ ಕಣ್ಣೀರು ಬರುವ ಎಮೋಜಿಯನ್ನು ಬಳಸುತ್ತೇವೆ. ಅಸಡ್ಡೆಯಿಂದ ವರ್ತಿಸುವುದಾದರೇ ಬಾಯಿಯನ್ನು ಸೊಟ್ಟಗೆ ಮಾಡುವ ಮತ್ತು ಹುಬ್ಬು ಹಾರಿಸುವ ಎಮೋಜಿಯನ್ನು ಕಳಿಸಿಬಿಡುತ್ತೇವೆ. ತುಂಬಾ ಮುದ್ದು ಮಾಡುವ ಮನಸ್ಸು ಬಂದಾಗ ಮುತ್ತು ನೀಡುವ ಮೋಜಿಗಳನ್ನು ಬಳಸುತ್ತೇವೆ ಹೀಗೆ ಪ್ರತಿಯೊಂದು ಭಾವನೆಯನ್ನು ನಾವು ಎಮೋಜಿಗಳ ಮೂಲಕ ವ್ಯಕ್ತಪಡಿಸಲು ಸಾಧ್ಯವಾಗುತ್ತಿದೆ.

ಯುನಿಕೋಡ್ ಒಕ್ಕೂಟವು ಪ್ರತಿವರ್ಷ ಎಮೋಜಿಗಳ ಪಟ್ಟಿಯನ್ನು ಪ್ರಕಟಿಸುವ ಅಧಿಕಾರವನ್ನು ಹೊಂದಿದೆ.ಯುನಿಕೋಡ್ನಿಂದ ಅನುಮೋದನೆಯಾದ ನಂತರವೇ ಅಂಡ್ರಾಯ್ಡ್ ಹಾಗೂ ಐಒಎಸ್ ಸ್ಮಾರ್ಟ್ ಫೋನ್ಗಳಲ್ಲಿ ಲಭ್ಯವಾಗುತ್ತವೆ. ಯೂನಿಕೋಡ್ ಒಕ್ಕೂಟವು ನೆಟ್ ಫ್ಲಿಕ್ಸ್, ಆ್ಯಪಲ್ , ಫೇಸ್ಬುಕ್, ಗೂಗಲ್, ಟ್ವಿಟರ್ ಒಳಗೊಂಡಿರುವ ಸದಸ್ಯರನ್ನು ಹೊಂದಿದೆ ಎಂದು ಪಿಟಿಸಿ ನ್ಯೂಸ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.