ಬೆಂಗಳೂರು: ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಫೇಸ್‌ಬುಕ್ ಬಳಕೆದಾರರ ಮಾಹಿತಿ ಕದಿಯುತ್ತಿವೆ ಎನ್ನಲಾದ 9 ಆ್ಯಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಲಾಗಿದೆ.

ಭವಿಷ್ಯ, ಫೋಟೊ ಎಡಿಟಿಂಗ್, ಜಂಕ್ ಫೈಲ್ ಕ್ಲೀನರ್ಸ್, ಆ್ಯಪ್ ಲಾಕರ್, ಫಿಟ್‌ನೆಸ್ ಮಾನಿಟರ್ ಮತ್ತು ಇತರ ಕೆಲವು ಸೇವೆಗಳಿಗೆ ಸಂಬಂಧಿಸಿದ ಆ್ಯಪ್‌ಗಳು ಇದರಲ್ಲಿ ಸೇರಿವೆ.

ಆ್ಯಪ್‌ಗಳು ಫೇಸ್‌ಬುಕ್ ಬಳಕೆದಾರರ ಮಾಹಿತಿ ಕದಿಯುತ್ತಿರುವ ಬಗ್ಗೆ ‘ಡಾಕ್ಟರ್ ವೆಬ್’ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಗೂಗಲ್ ಕ್ರಮ ಕೈಗೊಂಡಿದೆ.

ಓದಿ:ಫೇಸ್‌ಬುಕ್ ಬಳಕೆದಾರರ ಮಾಹಿತಿ ಕದಿಯುತ್ತಿವೆ ಆಂಡ್ರಾಯ್ಡ್ ಆ್ಯಪ್‌ಗಳು

ಬಳಕೆದಾರರ ಮಾಹಿತಿ ಕದಿಯುತ್ತಿವೆ ಎನ್ನಲಾದ ಆ್ಯಪ್‌ಗಳು ಸುಮಾರು 58.5 ಲಕ್ಷಕ್ಕೂ ಹೆಚ್ಚು ಬಾರಿ ಡೌನ್‌ಲೋಡ್ ಆಗಿದ್ದವು. ಈ ಆ್ಯಪ್‌ಗಳು ಬಳಕೆದಾರರಿಗೆ ವಿವಿಧ ರೀತಿಯ ಸೈಬರ್ ಕ್ರೈಮ್ ವಂಚನೆಗಳನ್ನು ಮಾಡುತ್ತಿವೆ ಎನ್ನಲಾಗಿತ್ತು.

‘ಪ್ರಾಸೆಸಿಂಗ್ ಫೋಟೊ’, ‘ಪಿಐಪಿ ಫೋಟೊ’, ‘ಆ್ಯಪ್ ಕೀ ಲಾಕ್’, ‘ಆ್ಯಪ್ ಲಾಕ್ ಮ್ಯಾನೇಜರ್’, ‘ಲಾಕ್‌ಇಟ್ ಮಾಸ್ಟರ್’, ‘ಹೋರೋಸ್ಕೋಪ್ ಡೈಲಿ’, ‘ಹೋರೋಸ್ಕೋಪ್ ಪೈ’, ‘ಇನ್‌ವೆಲ್ ಫಿಟ್ನೆಸ್’ ಎಂಬ ಆ್ಯಪ್‌ಗಳು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿರುವ ಫೇಸ್‌ಬುಕ್ ಬಳಕೆದಾರರ ಮಾಹಿತಿ ಕದಿಯುತ್ತಿವೆ ಎಂದು ‘ಡಾಕ್ಟರ್ ವೆಬ್’ ವರದಿ ಉಲ್ಲೇಖಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.