ಒಂದು ಕಾಲದಲ್ಲಿ ಬ್ರೌಸರ್ ಎಂಬುದಕ್ಕೇ ಪರ್ಯಾಯ ಹೆಸರಿನ ಹಾಗೆ ಇದ್ದ ‘ಇಂಟರ್ನೆಟ್ ಎಕ್ಸ್‌ಪ್ಲೋರರ್’ ಈಗ ಶಾಶ್ವತವಾಗಿ ಕಣ್ಮುಚ್ಚುತ್ತಿದೆ. 27 ವರ್ಷಗಳ ಇಂಟರ್ನೆಟ್ ಎಕ್ಸ್‌ಪ್ಲೋರರ್ ಪಯಣವನ್ನು ಮುಗಿಸುವುದಾಗ ಮೈಕ್ರೋಸಾಫ್ಟ್ ಘೋಷಿಸ ಆಗಿದೆ. ಮೈಕ್ರೋಸಾಫ್ಟ್ ತನ್ನದೇ ಇಂಟರ್ನೆಟ್ ಎಕ್ಸ್‌ಪ್ಲೋರರ್‌ಗೆ ಬೆಂಬಲವನ್ನು ನಿಲ್ಲಿಸುವುದಾಗಿ ಹೇಳಿಕೊಂಡಿದೆ. ಹೀಗೆ ಸತ್ತುಹೋದ ಒಂದು ಅಪ್ಲಿಕೇಶನ್ ಯಾರಿಗೂ ಯಾವುದೇ ತೊಂದರೆಯನ್ನೂ ಕೊಡಲಿಲ್ಲ. ಇದು ಯಾವ ಅವಲಂಬಿತರನ್ನೂ ತೊರೆಯಲಿಲ್ಲ!

ಕ್ರೋಮ್ ಹಾಗೂ ಸಫಾರಿ ಬಳಕೆ ಶುರು ಮಾಡುವುದಕ್ಕೂ ಮೊದಲಿಂದಲೇ ಇಂಟರ್ನೆಟ್ ಬಳಸುತ್ತಿದ್ದವರಿಗೆ ಮಾತ್ರ ಇಂಟರ್ನೆಟ್ ಎಕ್ಸ್‌ಪ್ಲೋರರ್ ಎಂಬ ಜೀವಿಯೊಂದಿತ್ತು ಎಂಬುದು ತಿಳಿದಿದೆ. ಕ್ರೋಮ್ ತಲೆಮಾರಿನಲ್ಲಿ ಇಂಟರ್ನೆಟ್ ಬಳಕೆ ಶುರು ಮಾಡಿದವರಿಗೆ ಹಿಂದೆ ಇಂಟರ್ನೆಟ್ ಎಕ್ಸ್‌ಪ್ಲೋರರ್ ಇತ್ತು ಎಂಬುದೂ ತಿಳಿದಿರಲಿಕ್ಕಿಲ್ಲ.

ಈ ಇಂಟರ್ನೆಟ್ ಎಕ್ಸ್‌ಪ್ಲೋರರ್ ಚಾಲ್ತಿಗೆ ಬಂದು ಉತ್ತುಂಗಕ್ಕೇರಿದಷ್ಟೇ ವೇಗದಲ್ಲಿ ಕುಸಿದಿದ್ದು ಒಂದು ವಿಶಿಷ್ಟ ಸಂಗತಿ. 1990ರ ಕಾಲದಲ್ಲಿ ‘ಇಂಟರ್ನೆಟ್’ ಎಂಬ ಕಲ್ಪನೆಗೆ ಜೀವ ಬರುತ್ತಿತ್ತು. ಆಗ ‘ಮೊಸಾಯಿಕ್ ನ್ಯಾವಿಗೇಟರ್’, ‘ಸ್ಪೈಗ್ಲಾಸ್’ ಮತ್ತು ‘ಒಪೆರಾ’ದಂತಹ ಬ್ರೌಸರ್‌ಗಳಿದ್ದವು. ಆದರೆ, ಅವೆಲ್ಲವೂ ಒಂದಲ್ಲ ಒಂದು ಸಮಸ್ಯೆಗಳಿಂದ ಬಳಲುತ್ತಿದ್ದವು. ಬಳಕೆಗೆ ಅಷ್ಟೇನೂ ಅನುಕೂಲಕರವಾಗಿರಲಿಲ್ಲ. ಈ ಮಧ್ಯೆ 1994ರಲ್ಲಿ ಜಿಮ್ ಕ್ಲಾರ್ಕ್ ಮತ್ತು ಮಾರ್ಕ್ ಆಂಡರ್ಸನ್ ಸೇರಿ ‘ನೆಟ್‌ಸ್ಕೇಪ್’ ಎಂಬ ಬ್ರೌಸರ್ ಆರಂಭಿಸಿದರು. ಅದು ಜನಪ್ರಿಯವೂ ಆಯಿತು. ಅದೇ ವೇಳೆಗೆ ಅಂದರೆ, 1995 ಆಗಸ್ಟ್‌ನಲ್ಲಿ ‘ಇಂಟರ್ನೆಟ್ ಎಕ್ಸ್‌ಪ್ಲೋರರ್’ ಆರಂಭವಾಯಿತು. ಆರಂಭವಾದ ತಕ್ಷಣವೇನೂ ಎಕ್ಸ್‌ಪ್ಲೋರರ್ ಜನಪ್ರಿಯವಾಗಲಿಲ್ಲ. ಇದರಲ್ಲಿ ಆಗ ಹಲವು ಸಮಸ್ಯೆಗಳಿದ್ದವು. 1995ರ ಹೊತ್ತಿಗೆ ವಿಂಡೋಸ್ 95 ಚಾಲ್ತಿಯಲ್ಲಿತ್ತು. ‘ವಿಂಡೋಸ್ ಎಕ್ಸ್‌ಪಿ’ ಎಂಬ ಜನಪ್ರಿಯ ವಿಂಡೋಸ್ ಆವೃತ್ತಿಯಲ್ಲಿ ಇಂಟರ್ನೆಟ್ ಎಕ್ಸ್‌ಪ್ಲೋರರ್ ಮೊದಲೇ ಇನ್‌ಸ್ಟಾಲ್ ಆಗಿಯೇ ಬರುತ್ತಿತ್ತು.

ಸಹಜವಾಗಿ ಎಲ್ಲರೂ ಇಂಟರ್ನೆಟ್‌ಗಾಗಿ ಎಕ್ಸ್‌ಪ್ಲೋರರ್ ಅನ್ನೇ ಬಳಸಲು ಆರಂಭಿಸಿದರು. ಕೆಲವೇ ವರ್ಷಗಳಲ್ಲಿ ಇಂಟರ್ನೆಟ್ ಎಕ್ಸ್‌ಪ್ಲೋರರ್ ಶೇ. 90ರಷ್ಟು ಬಳಕೆದಾರರನ್ನು ತಲುಪಿತ್ತು. ಎಕ್ಸ್‌ಪ್ಲೋರರ್ ಉಚಿತವಾಗಿ ಸಿಗುತ್ತಿದ್ದುದರಿಂದ, ದುಡ್ಡು ಕೊಟ್ಟು ಕೊಂಡುಕೊಳ್ಳಬೇಕಿದ್ದ ನೆಟ್‌ಸ್ಕೇಪ್ ಕಣ್ಮರೆಯಾಗುವ ಹಂತ ತಲುಪಿತು. ಇದೇ ಕಾರಣಕ್ಕೆ, 1998ರಲ್ಲಿ ನೆಟ್‌ಸ್ಕೇಪ್ ಅನ್ನು ಉಚಿತವಾಗಿ ಲಭ್ಯವಾಗಿಸಲಾಯಿತು. ಅಷ್ಟೇ ಅಲ್ಲ, ಮೈಕ್ರೋಸಾಫ್ಟ್ ಎಕ್ಸ್‌ಪಿ ಜೊತೆಗೆ ಎಕ್ಸ್‌ಪ್ಲೋರರ್ ಅನ್ನು ಇನ್‌ಸ್ಟಾಲ್ ಮಾಡಿಯೇ ಕೊಡುವುದರ ವಿರುದ್ಧ ನೆಟ್‌ಸ್ಕೇಪ್ ಅಮೆರಿಕದಲ್ಲಿ ದಾವೆಯನ್ನೂ ಹೂಡಿತು.

2008ರ ವರೆಗೂ ಇಂಟರ್ನೆಟ್ ಬಳಸುವುದಕ್ಕೆ ಇಂಟರ್ನೆಟ್ ಎಕ್ಸ್‌ಪ್ಲೋರರ್ ಬಿಟ್ಟರೆ ಪರ್ಯಾಯವೇ ಇರಲಿಲ್ಲ ಎಂಬಂತಹ ಸ್ಥಿತಿ ಇತ್ತು. ಆರಂಭದಲ್ಲಿ ಇಂಟರ್ನೆಟ್‌ನ ವೇಗವೂ ಕಡಿಮೆ ಇದ್ದುದರಿಂದ ಎಕ್ಸ್‌ಪ್ಲೋರರ್‌ನ ವೇಗ, ಸಮಸ್ಯೆಗಳು ಗಮನಕ್ಕೆ ಬರುತ್ತಿರಲಿಲ್ಲ. ಆದರೆ 2008 ಸೆಪ್ಟೆಂಬರ್‌ನಲ್ಲಿ ಗೂಗಲ್ ಆರಂಭಿಸಿದ ‘ಕ್ರೋಮ್’, 2005ರಲ್ಲಿ ಆರಂಭವಾದ ‘ಮೊಜಿಲ್ಲಾ ಫೈರ್‌ಫಾಕ್ಸ್’, ಇಂಟರ್ನೆಟ್ ಎಕ್ಸ್‌ಪ್ಲೋರರ್‌ನ ಹಳವಂಡಗಳನ್ನೆಲ್ಲಾ ಬಹಿರಂಗಗೊಳಿಸಿದವು. ‘ಕ್ರೋಮ್’ ಹಾಗೂ ‘ಫೈರ್‌ಫಾಕ್ಸ್’ ಅತ್ಯಂತ ವೇಗದ್ದಾಗಿದ್ದು, ಬಳಸುವುದಕ್ಕೆ ಅತ್ಯಂತ ಸುಲಭ, ಜೊತೆಗೆ ಆಧುನಿಕ ಲುಕ್ ಕೂಡ ಹೊಂದಿತ್ತು.

ಬಿಡುಗಡೆಯಾದಾಗ ಶೇ. 10ಕ್ಕಿಂತಲೂ ಕಡಿಮೆ ಇದ್ದ ಬಳಕೆದಾರರ ಸಂಖ್ಯೆ 2015ರ ಹೊತ್ತಿಗೆ ಶೇ. 25ರಷ್ಟು ಆಗಿತ್ತು. ಈಗಂತೂ ಶೇ. 65ಕ್ಕಿಂತ ಹೆಚ್ಚು ಜನರು ಇಂಟರ್ನೆಟ್‌ಗೆ ಕ್ರೋಮ್ ಅನ್ನೇ ಬಳಸುತ್ತಿದ್ದಾರೆ. ಇನ್ನೊಂದೆಡೆ, ಎಕ್ಸ್‌ಪ್ಲೋರರ್ ಬಳಕೆದಾರರ ಸಂಖ್ಯೆ ಕಳೆದ ವರ್ಷದವರೆಗೆ ಶೇ.1ರಷ್ಟಿತ್ತು! ಇನ್ನೊಂದೆಡೆ ಎಕ್ಸ್‌ಪ್ಲೋರರ್‌ಗೆ ಪರ್ಯಾಯವಾಗಿ ಆರಂಭಿಸಿದ ‘ಎಡ್ಜ್’ ಕೂಡ ಶೇ. 4ಕ್ಕಿಂತ ಹೆಚ್ಚು ಬಳಕೆದಾರರನ್ನು ಗಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಎಕ್ಸ್‌ಪ್ಲೋರರ್ ಆರಂಭವಾದಾಗ ಅದು ಹೊಂದಿದ್ದ ಏಕಸ್ವಾಮ್ಯವೇ ಬಳಕೆದಾರರನ್ನು ತನ್ನತ್ತ ಸೆಳೆಯಲು ಸಾಧ್ಯವಾಯಿತು. ಎಕ್ಸ್‌ಪಿ ಹಾಗೂ ಅದರ ನಂತರ ವಿಂಡೋಸ್‌ನಲ್ಲಿ ಮೊದಲೇ ಇನ್‌ಸ್ಟಾಲ್ ಆಗಿಯೇ ಬರುತ್ತಿತ್ತು. ಹೀಗಾಗಿ ಇಂಟರ್ನೆಟ್ ಬಳಸುವುದಕ್ಕೆ ಇನ್ನೊಂದು ಬ್ರೌಸರ್ ಇನ್‌ಸ್ಟಾಲ್ ಮಾಡುವ ಅಗತ್ಯ ಬೀಳಲಿಲ್ಲ. ಆ ಕಾಲಕ್ಕೆ ಇದೊಂದು ಮಹತ್ವದ ಅನುಕೂಲ. ಅದರ ಜೊತೆಗೆ, ಇದಕ್ಕಿಂತ ಉತ್ತಮವಾದ ಇನ್ನೊಂದು ಬ್ರೌಸರ್ ಕೂಡ ಇರಲಿಲ್ಲ. ಆಗ ಇದ್ದ ಬ್ರೌಸರ್‌ಗಳಲ್ಲೂ ಭದ್ರತೆ ಸಮಸ್ಯೆಗಳಿದ್ದವು. ಇತರ ತೊಂದರೆಗಳಿದ್ದವು.

ಭದ್ರತೆಯ ಸಮಸ್ಯೆ

ಇಂಟರ್ನೆಟ್ ಎಕ್ಸ್‌ಪ್ಲೋರರ್ ಅನ್ನು ಸ್ಥಗಿತಗೊಳಿಸುವುದಕ್ಕೆ ಮೊದಲ ಕಾರಣವೇ ಅದರಲ್ಲಿರುವ ಹಲವು ಸಮಸ್ಯೆಗಳು. ವೈರಸ್ ದಾಳಿಗೆ ಸುಲಭವಾಗಿ ತುತ್ತಾಗುವ ಸಾಧ್ಯತೆ ಮತ್ತು ಅದನ್ನು ಸರಿಪಡಿಸಲು ಮೈಕ್ರೋಸಾಫ್ಟ್ ವಿಫಲವಾದದ್ದು ಇದಕ್ಕೆ ಮುಖ್ಯ ಕಾರಣ. ಇದರ ಜೊತೆಗೆ, ಎಕ್ಸ್‌ಪ್ಲೋರರ್‌ನಲ್ಲಿ ಸೌಲಭ್ಯಗಳು ಅತ್ಯಂತ ಸೀಮಿತವಾಗಿದ್ದವು. ಬೇರೆ ಬೇರೆ ವೆಬ್ ಬ್ರೌಸರ್‌ಗಳಲ್ಲಿ ಇದ್ದ ಉತ್ತಮ ಸೌಲಭ್ಯಗಳನ್ನು ಎಕ್ಸ್‌ಪ್ಲೋರರ್ ಅಳವಡಿಸಿಕೊಳ್ಳಲು ವಿಫಲವಾಗಿತ್ತು. ಈಗಲೂ ಕ್ರೋಮ್‌ನಲ್ಲಿ ಇರುವ ಹಾಗೆ ಬೇರೆ ಬೇರೆ ಸಾಧನಗಳಲ್ಲಿ ಸಿಂಕ್ ಮಾಡುವ ಅವಕಾಶ ಎಕ್ಸ್‌ಪ್ಲೋರರ್‌ನಲ್ಲಿ ಇಲ್ಲ.

ಎಕ್ಸ್‌ಪ್ಲೋರರ್‌ನ ಭೂತ ಇನ್ನೂ ಚಾಲ್ತಿಯಲ್ಲಿದೆ!

ಎಕ್ಸ್‌ಪ್ಲೋರರ್ ಅನ್ನು ಒಂದು ಅಪ್ಲಿಕೇಶನ್ ಆಗಿ ಮೈಕ್ರೋಸಾಫ್ಟ್ ಸ್ಥಗಿತಗೊಳಿಸಿದೆ. ಆದರೆ, ಎಡ್ಜ್‌ನಲ್ಲಿ ಐಇ ಮೋಡ್ ಅನ್ನು 2019ರಲ್ಲೇ ಶುರು ಮಾಡಿದೆ. ಇದರಿಂದ, ಇಂಟರ್ನೆಟ್ ಎಕ್ಸ್‌ಪ್ಲೋರರ್ ಬಳಸಲು ಬಯಸುವವರು ಎಡ್ಜ್‌ನಲ್ಲಿ ಇಂಟರ್ನೆಟ್ ಎಕ್ಸ್‌ಪ್ಲೋರರ್ ಮೋಡ್ ಅನ್ನು ಬಳಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.