ಬೆಂಗಳೂರು: ಔಡಿ ಎ4 ಐಷಾರಾಮಿ ಕಾರಿನಲ್ಲಿ ಬಂದು ಕೇರಳದ ಯುವ ರೈತನೊಬ್ಬ ತರಕಾರಿ ಮಾರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.

ಕೇರಳದ ಸುಜಿತ್ ಎಸ್ಪಿ ಎನ್ನುವವರು ಪ್ರತಿನಿತ್ಯ ಔಡಿ ಎ4 ಕಾರಿನಲ್ಲಿ ಬಂದು ತಾವು ಬೆಳೆಯುವ ವಿವಿಧ ತರಕಾರಿಗಳನ್ನು ಸನಿಹದ ಮಾರುಕಟ್ಟೆಯಲ್ಲಿ ತಾವೇ ಮಾರಾಟ ಮಾಡಿ ಕಾರಿನಲ್ಲಿ ವಾಪಸ್ ಆಗುತ್ತಾರೆ.

ಸುಜಿತ್ ಎಸ್ಪಿ ಯಾವ ಊರಿನವರು ಎಂಬುದು ಬಹಿರಂಗವಾಗಿಲ್ಲ. ಆದರೆ, ಔಡಿ ಎ4 ಕಾರಿನಲ್ಲಿ ಬಂದು ಅವರು ಹರಿವೆ ಸೊಪ್ಪು ಮಾರುತ್ತಿರುವ ವಿಡಿಯೊ ಸಖತ್ ಸದ್ದು ಮಾಡಿದೆ.

ಸುಜಿತ್ ಎಸ್ಪಿ ಮೊದಲು ಕ್ಯಾಬ್ ಚಾಲಕರಾಗಿದ್ದರು. ಬಳಿಕ ಆಧುನಿಕ ಕೃಷಿಗೆ ಮಾರುಹೋಗಿ ಸದ್ಯ ಅವರು ಇದೀಗ ಸ್ಥಳೀಯವಾಗಿ ಉತ್ತಮ ಪ್ರಗತಿಪರ ರೈತ ಎನಿಸಿಕೊಂಡಿದ್ದಾರೆ. ಸುಜಿತ್ ಅವರ ಈ ವಿಡಿಯೊವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. 7 ಮಿಲಿಯನ್ಗೂ ಅಧಿಕ ವೀಕ್ಷಣೆ ಕಂಡಿದೆ.

ಔಡಿ ಎ4 ಕಾರಿನ ಸದ್ಯದ ಮಾರುಕಟ್ಟೆ ಬೆಲೆ ₹ 44 ಲಕ್ಷ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.