ಅಹಮದಾಬಾದ್: ಹೊರಗಿನ ಆಹಾರಗಳಲ್ಲಿ ಸತ್ತ ಪ್ರಾಣಿಗಳು ದೊರೆಯುತ್ತಿರುವ ಪ್ರಕರಣಗಳ ಸಂಖ್ಯೆ ದಿನೇ ದಿನೇ ವರದಿಯಾಗುತ್ತಿವೆ.

ಈ ಬಾರಿ ಅಹಮದಾಬಾದ್ನ ಹೋಟೆಲ್ವೊಂದರಲ್ಲಿ ನೀಡಿದ್ದ ಸಾಂಬಾರ್ನಲ್ಲಿ ಸತ್ತ ಇಲಿ ಪತ್ತೆಯಾಗಿರುವ ಬಗ್ಗೆ ಗ್ರಾಹಕರೊಬ್ಬರು ದೂರಿದ್ದಾರೆ.

‘ಅಹಮದಾಬಾದ್ನ ನಿಕೋಲ್ ಎನ್ನುವ ಪ್ರದೇಶದಲ್ಲಿರುವ ದೇವಿ ದೋಸಾ ರೆಸ್ಟೋರೆಂಟ್ನಲ್ಲಿ ನೀಡಿದ್ದ ಸಾಂಬಾರ್ನಲ್ಲಿ ಸತ್ತ ಇಲಿ ಸಿಕ್ಕಿದೆ. ಈ ಬಗ್ಗೆ ರೆಸ್ಟೋರೆಂಟ್ ಸಿಬ್ಬಂದಿ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಗ್ರಾಹಕರೊಬ್ಬರು ಸಾಮಾಜಿಕ ಜಾಲತಾಣದ ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಪೋಸ್ಟ್ ಹಂಚಿಕೊಂಡಿದ್ದಾರೆ.

ಆ ಬಳಿಕ, ಆರೋಗ್ಯ ಇಲಾಖೆಯು ಹೋಟೆಲ್ನ ಮಾಲೀಕ ಅಲ್ಪೇಶ್ ಕೆವದಿಯಾ ಎನ್ನುವವರಿಗೆ ನೋಟೀಸ್ ನೀಡಿದ್ದು, ಹೋಟೆಲ್ ಅನ್ನು ಸೀಜ್ ಮಾಡಿದೆ. ಅಲ್ಲದೆ ಇಲ್ಲಿನ ಆಹಾರ ಸುರಕ್ಷಿತವಲ್ಲ ಎಂದು ಘೋಷಿಸಿದ್ದು, ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.ಆ
.ಆನ್ಲೈನ್ನಲ್ಲಿ ಖರೀದಿಸಿದ Hershey's ಚಾಕೊಲೇಟ್ ಸಿರಪ್ನಲ್ಲಿ ಸತ್ತ ಇಲಿ ಪತ್ತೆ.ಆನ್ಲೈನ್ನಲ್ಲಿ ತರಿಸಿದ್ದ ಐಸ್ಕ್ರೀಮ್ನಲ್ಲಿ ಮಾನವನ ಬೆರಳಿನ ತುಂಡು ಪತ್ತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.