ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೂಲದ ವಿಮಾನಯಾನ ಸಂಸ್ಥೆ ಎಮಿರೇಟ್ಸ್ ಏರ್ಲೈನ್ಸ್, ಇತ್ತೀಚೆಗಷ್ಟೇ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದ ತುತ್ತ ತುದಿಯಲ್ಲಿ ಚಿತ್ರೀಕರಿಸಿದ ಜಾಹೀರಾತನ್ನು ಪ್ರಸಾರ ಮಾಡಿತ್ತು.

ಇದು ಕೆಲವೇ ಹೊತ್ತಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಂಚಲನ ಮೂಡಿಸಿತ್ತಲ್ಲದೆ ನೈಜತೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿತು.

30 ಸೆಕೆಂಡುಗಳ ಜಾಹೀರಾತಿನಲ್ಲಿ ಎಮಿರೇಟ್ಸ್ ಸಿಬ್ಬಂದಿ ಕೂಡಾ ಆಗಿರುವ ವೃತ್ತಿಪರ ಸ್ಕೈಡೈವಿಂಗ್ ಇನ್ಸ್ಟ್ರಕ್ಟರ್ ನಿಕೋಲ್ ಸ್ಮಿತ್ ಲುಡ್ವಿಕ್, ಬುರ್ಜ್ ಖಲೀಫಾದತುದಿಯಲ್ಲಿ ನಿಂತು ಎಮಿರೇಟ್ಸ್ ವಿಮಾನಯಾನದ ಜಾಹೀರಾತನ್ನು ಪ್ರದರ್ಶಿಸುತ್ತಾರೆ.

ಇದನ್ನೂ ಓದಿ:ಮಾನವೀಯತೆ ಇನ್ನೂ ಇದೆ, ಇದು ನಮ್ಮ ಹೆಮ್ಮೆಯ ಭಾರತ: ಆನಂದ್ ಮಹೀಂದ್ರಾ

ಪ್ರಸ್ತುತ ಜಾಹೀರಾತು ಅಸಲಿಯೋ ನಕಲಿಯೋ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿರುವ ಬೆನ್ನಲ್ಲೇ ಇದರ ಮೇಕಿಂಗ್ ವಿಡಿಯೊದ ಮಾಹಿತಿಯನ್ನು ಎಮಿರೇಟ್ಸ್ ಏರ್ಲೆನ್ಸ್ ಬಿಡುಗಡೆಗೊಳಿಸಿದೆ.

ಹಲವಾರು ನಾವೀನ್ಯತೆಗಳಿಂದ ಕೂಡಿರುವ ಈ ವಿಡಿಯೊ ಹೆಚ್ಚಿನ ಮನ್ನಣೆ ಗಳಿಸಿದೆ. 828 ಮೀಟರ್ಎತ್ತರದ ಕಟ್ಟಡದಲ್ಲಿ ಎಲ್ಲ ರೀತಿಯ ಸುರಕ್ಷಾ ಮಾನದಂಡಗಳನ್ನು ಅನುಸರಿಸಿ ವಿಡಿಯೊ ಚಿತ್ರೀಕರಣ ಮಾಡಲಾಗಿದೆ ಎಂಬುದನ್ನು ಸ್ಪಷ್ಟಪಡಿಸಿದೆ.

ವಿಶ್ವದ ಅತಿ ಎತ್ತರದ ಕಟ್ಟಡದಲ್ಲಿ ಚಿತ್ರೀಕರಿಸಿದ ಜಾಹೀರಾತು ಎಂಬ ಹಿರಿಮೆಗೆ ಪಾತ್ರವಾಗಿದೆ. 160ನೇ ಮಹಡಿಯ ಬಳಿಕ, ಏಣಿಯ ಸಹಾಯದಿಂದ ಒಂದು ತಾಸಿಗೂ ಅಧಿಕ ಸಮಯ ವ್ಯಯಿಸಿ ಬುರ್ಜ್ ಖಲೀಫಾದ ತುದಿಗೆ ತಲುಪಲಾಗಿದೆ. ನಿಖರ ಯೋಜನೆ ಹಾಗೂ ಸುರಕ್ಷತಾ ಮಾನದಂಡಗಳಿಂದ ಇದು ಸಾಧ್ಯವಾಗಿದೆ ಎಂದು ಎಮಿರೇಟ್ಸ್ ಹೇಳಿದೆ.

ಸೂರ್ಯೋದಯದಿಂದ ಆರಂಭವಾದ ಜಾಹೀರಾತಿನ ಚಿತ್ರೀಕರಣವು ಪೂರ್ಣಗೊಳಿಸಲು ಐದು ತಾಸಿಗೂ ಹೆಚ್ಚುಸಮಯ ತಗುಲಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.