ಒಂದು ಕೈಯಲ್ಲಿ ಗ್ಯಾಸ್ಸ್ಟೌಅನ್ನು ಹಿಡಿದು, ಮತ್ತೊಂದು ಕೈಯಲ್ಲಿ ಸಮೋಸಗಳಿರುವ ಬಕೆಟ್ ಹಿಡಿದು ವ್ಯಾಪಾರ ಮಾಡುತ್ತಿರುವ ಹುಡುಗ ಸಾಮಾಜಿಕ ಜಾಲತಾಣದ ಮನಗೆದ್ದಿದ್ದಾನೆ. ಗ್ರಾಹಕರಿಗೆ ಗರಿಗರಿಯಾದ ಸಮೋಸವನ್ನು ಕೊಡಲು ಗ್ಯಾಸ್ಸ್ಟೌಅನ್ನು ಜೊತೆಗೆ ಸಾಗಿಸುತ್ತಿದ್ದಾನೆ. ಬೀದಿಯಲ್ಲಿ ಸಿಕ್ಕಿದ ಗ್ರಾಹಕರಿಗೆ ಅಲ್ಲಿಯೇ ಕುಳಿತು ಸಮೋಸವನ್ನು ಕರಿದು ಕೊಡುತ್ತಿದ್ದಾನೆ.

ಬಾಣಲೆಯಿಟ್ಟಿರುವ ಗ್ಯಾಸ್ಸ್ಟೌಅನ್ನು ತಂತಿಗಳ ಸಹಾಯದಿಂದ ಹಿಡಿಯಂತೆ ಕಟ್ಟಿಕೊಂಡು ಎಲ್ಲೆಂದರಲ್ಲಿ ಸಾಗಿಸುತ್ತಿದ್ದಾನೆ. ಕುದಿಯುವ ಎಣ್ಣೆಯಿರುವ ಬಾಣಲೆಯನ್ನು ಎತ್ತಿಕೊಂಡೊಯ್ಯುತ್ತಿರುವುದು ವಿಡಿಯೊದಲ್ಲಿದೆ.

ಹಣ ಮಾಡಲು ನಾನಾ ಮೋಸದ ಮಾರ್ಗಗಳನ್ನು ಹಿಡಿಯುವವರೇ ಹೆಚ್ಚಿರುವ ಸಮಾಜದಲ್ಲಿ ಹೊಟ್ಟೆ ಪಾಡಿಗಾಗಿ ಬಿಸಿ ಎಣ್ಣೆಯ ಜೊತೆಗೆ ಶ್ರಮ ಪಡುತ್ತಿರುವ ಹುಡುಗ ನಿಜವಾದ ಹೀರೋ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಶ್ರಮಿಕರಿಂದ ಖರೀದಿಸಬೇಕು ಎಂದು ಕರೆ ಕೊಡುತ್ತಿದ್ದಾರೆ.

'ಮಂಗಳ'ನಲ್ಲಿ ನವರತ್ನಗಳಲ್ಲೊಂದಾದ ಗೋಮೇಧಿ ಪತ್ತೆ: ಜೀವಿಗಳ ಅಧ್ಯಯನಕ್ಕೆ ಹೊಸ ಆಯಾಮ

'ಶ್ರಮಿಕ ಹುಡುಗನಿಗೆ ದೇವರು ಒಳ್ಳೆಯದು ಮಾಡಲಿ. ತುಂಬ ಬಿಸಿಯಿರುವುದನ್ನು ಕೈಯಲ್ಲಿ ಹಿಡಿದು ಕೆಲಸ ಮಾಡುವುದನ್ನು ನೋಡಿ ಹೃದಯ ತುಂಬಿ ಬಂತು. ಎಣ್ಣೆಯೂ ಶುದ್ಧವಾಗಿರುವುದು ಕಾಣಿಸುತ್ತದೆ. ಶ್ರಮದ ನಡುವೆ ಗ್ರಾಹಕರಿಗೆ ಉತ್ತಮ ಪದಾರ್ಥವನ್ನು ನೀಡಬೇಕು ಎಂಬ ಆಶಯ ಹೊಂದಿರುವುದು ಇದರಿಂದ ತಿಳಿಯುತ್ತದೆ' ಎಂದು ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.

'ಯೂಟ್ಯಬ್ ಸ್ವಾದ್ ಅಫಿಶಿಯಲ್' (youtubeswadofficial) ಇನ್ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ₹10ಕ್ಕೆ 4 ಸಮೋಸಗಳನ್ನು ಮಾರಟ ಮಾಡುತ್ತಿರುವುದಾಗಿ ವಿಡಿಯೊದಲ್ಲಿ ಮಾಹಿತಿ ನೀಡಲಾಗಿದೆ.

ವಿಡಿಯೊ: ವಿರಾಟ್, ಬಾಬರ್ ಮತ್ತಿತರರ ಅಂದು ಮತ್ತು ಇಂದಿನ ಬ್ಯಾಟಿಂಗ್ ಶೈಲಿ ನೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.