ನಾನೀಗ ಆರು ತಿಂಗಳ ಗರ್ಭಿಣಿ. ಆಗಾಗ್ಗೆ ಕೆಳಹೊಟ್ಟೆ ಹಿಂಡಿದ ಹಾಗೆ ಆಗುತ್ತದೆ. ಒಮ್ಮೊಮ್ಮೆ ನೋವಿನ ಅನುಭವ. ಪದೇ ಪದೇ ಮೂತ್ರ ಮಾಡಬೇಕಿನಿಸುತ್ತದೆ. ವೈದ್ಯರಿಗೆ ತೋರಿಸಿದ್ದೇನೆ. ಭಯವಿಲ್ಲವೆಂದು ಹೇಳಿದ್ದಾರೆ. ಆದರೆ ಸಮಾಧಾನವಿಲ್ಲ. ಪಕ್ಕದ ಮನೆಯ ಗೆಳತಿಯೊಬ್ಬರಿಗೆ ಹೀಗೆ ಆಗಿ ಏಳು ತಿಂಗಳಿಗೆ ಹೆರಿಗೆಯಾಯಿತು. ಹಾಗಾಗಿ ಕೇಳುತ್ತಿದ್ದೇನೆ – ಸಾವಿತ್ರಿ, ತಿಪಟೂರು.

ಸಾವಿತ್ರಿ ಅವರೇ, ನಿಮ್ಮ ವೈದ್ಯರು ಹೇಳಿದ ಹಾಗೇ ನೀವು ಭಯಪಡುವ ಅಗತ್ಯವಿಲ್ಲ. ಗರ್ಭಧಾರಣೆಯಲ್ಲಿ ಗರ್ಭಕೋಶ ಆಗಾಗ್ಗೆ ಹಿಂಡಿದ ಅನುಭವ ಆಗುವುದು ಸಹಜ. ಹೀಗೆ ಕೆಲವು ಸೆಕೆಂಡುಗಳ ಕಾಲ ಇರುತ್ತದೆ. ಒಬ್ಬರಿಗೆ ಆದ ಅನುಭವ ಮತ್ತೊಬ್ಬರಿಗೆ ಆಗಬೇಕು ಅಂಥ ಏನಿಲ್ಲ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಬ್ರಾಂಕ್ಸ್ಟನ್ ಹಿಕ್ಸ್ ಸಂಕುಚನ ಎಂದು ಕರೆಯುತ್ತಾರೆ. ಇದು ಮುಂದಾಗಲಿರುವ ಹೆರಿಗೆ ನೋವಿನ ಪೂರ್ವತಯಾರಿ. ಈ ಸಂಕುಚನ ತೀವ್ರ ಸ್ವರೂಪ ಪಡೆದು ಹೆರಿಗೆ ನೋವಾಗಿ ಕಾಣಿಸಿಕೊಳ್ಳಬಹುದೆಂಬ ಅಂದಾಜಿದೆ. ಇವುಗಳಿಂದ ಯಾವ ತೊಂದರೆಯೂ ಇಲ್ಲ. ಗರ್ಭ ಧರಿಸಿದಾಗ ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ. ಸಾಕಷ್ಟು ನೀರು ಕುಡಿಯುತ್ತಿರಿ. ಮೂತ್ರವನ್ನು ತುಂಬಾ ಹೊತ್ತು ತಡೆ ಹಿಡಿಯಬೇಡಿ. 6ನೇ ತಿಂಗಳಿದ್ದಾಗ ಪದೇ ಪದೇ ಮೂತ್ರಕ್ಕೆ ಹೋಗಬೇಕು ಎನಿಸುವುದು ಅಷ್ಟು ಸಹಜವಲ್ಲ. ಆರಂಭದಲ್ಲಿ ಹಾಗೂ ಕೊನೆಯ ತಿಂಗಳಲ್ಲಿ ಗರ್ಭಕೋಶ, ಮೂತ್ರಕೋಶದ ಮೇಲೆ ಒತ್ತಿದ ಹಾಗೇ ಆಗುವುದದರಿಂದ ಪದೇ ಪದೇ ಮೂತ್ರ ವಿಸರ್ಜನೆ ಸಹಜ. ಮೂತ್ರಕೋಶದ ಸೋಂಕಿದ್ದರೆ ಒಮ್ಮೆ ಪರೀಕ್ಷಿಸಿಕೊಳ್ಳಿ. ಪ್ರತಿಶತ 3 ರಿಂದ 7 ಮಂದಿ ಗರ್ಭಿಣಿಯರಲ್ಲಿ ಮೂತ್ರಕೋಶದ ಸೋಂಕು ಕಾಣಿಸಿಕೊಳ್ಳಬಹುದು. ಮೂತ್ರಸೋಂಕಿನ ಲಕ್ಷಣಗಳಾದ ಉರಿಮೂತ್ರ ಇರಬಹುದು. ಜ್ವರದ ಲಕ್ಷಣ ಕಾಣಿಸಿಕೊಳ್ಳದೇ ಇರಬಹುದು. ಆದರೂ ಬ್ಯಾಕ್ಟೀರಿಯಾಗಳು ಮೂತ್ರದಲ್ಲಿ ಇರಬಹುದು. ಮೂತ್ರವನ್ನು ಕ್ಷಾರೀಯವಾಗಿಡಲು ದಿನಕ್ಕೆ ಕನಿಷ್ಠ 4ಲೀಟರ್ ನೀರನ್ನು ಕುಡಿಯಬೇಕು. ಪದೇ ಪದೇ ಮೂತ್ರವಿಸರ್ಜನೆ ಮಾಡುತ್ತಿರಬೇಕು. ಮೂತ್ರ ತಪಾಸಣೆ ಹಾಗೂ ಅವಶ್ಯವಿದ್ದಾಗ ಕಲರ್‌ಟೆಸ್ಟ್ ಮಾಡಿಸಿ ಚಿಕಿತ್ಸೆ ಪಡೆಯಬೇಕು. ಜ್ವರ, ಪಕ್ಕೆನೋವು ಉರಿಮೂತ್ರ ಉಂಟಾದಾಗ ನಿರ್ಲಕ್ಷಿಸದೇ ತಕ್ಷಣವೇ ವೈದ್ಯರ ಸಲಹೆಯಮೇರೆಗೆ ತಪಾಸಣೆಗೊಳಗಾಗಿ ನಿರ್ದಿಷ್ಟ ಅವಧಿಯವರೆಗೆ ಸೂಕ್ತ ಆಂಟಿಬಯಾಟಿಕ್‌ಗಳಿಂದ ಚಿಕಿತ್ಸೆಪಡೆದುಕೊಳ್ಳಿ. ಬಾರ್ಲಿನೀರು, ನಿಂಬೆಹಣ್ಣಿನ ಶರಬತ್ತು ಸೇರಿ ಸಾಕಷ್ಟು ದ್ರವಾಹಾರ ಸೇವನೆ ಮಾಡಿ. ಅವಶ್ಯವಿದ್ದಲ್ಲಿ ತಜ್ಞವೈದ್ಯರ ಸಲಹೆ ಚಿಕಿತ್ಸೆ ಪಡೆಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.