ಕೃಷ್ಣ ಸುಂದರಿ, ನೀಳಕಾಯದ ಚೆಲುವೆ ಎಂದೆಲ್ಲ ಹೆಸರಾಗಿರುವ ಬಿಪಾಶಾ ಬಸು, ಈಚೆಗೆ ಸಂದರ್ಶನವೊಂದರಲ್ಲಿ ತಮ್ಮ ಹದಿಹರೆಯದ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ.

2001ರಲ್ಲಿ ಜಿಸ್ಮ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಬಿಪಾಶಾ ಧೂಮ್ ಚಿಂತ್ರದಿಂದ ಖ್ಯಾತಿ ಪಡೆದಿದ್ದರು. ’ಹದಿಯರೆಯದಲ್ಲಿ ಪ್ರೀತಿಯೆಂದುಕೊಂಡು ನನ್ನ ಸಂಗಾತಿಗಾಗಿ ನಾನು ಮಾಂಸಾಹಾರ ತ್ಯಜಿಸುವುದಾಗಿ ಅಮ್ಮನಿಗೆ ಹೇಳಿದ್ದೆ. ಮೀನು ಮಾಂಸವಿಲ್ಲದೇ ಊಟ ಮಾಡುತ್ತಿರಲೇ ಇಲ್ಲ. ಸದಾ ಒಂದು ಶಾರ್ಟ್ಸ್ ಮತ್ತು ತೋಳು ರಹಿತ ಟಾಪ್‌ನಲ್ಲಿ ಓಡಾಡುತ್ತಿದ್ದ ನಾನು, ನನ್ನ ಹುಡುಗನಿಗಾಗಿ ಸದಾ ಸಲ್ವಾರ್ ಕಮೀಜ್ ಧರಿಸುವುದಾಗಿಯೂ ಹೇಳಿದ್ದೆ. ನನ್ನಮ್ಮ ಈ ವಿಪರೀತದ ನಿರ್ಧಾರಗಳನ್ನು ಕೇಳಿ ಮೂರ್ಛೆ ಹೋಗುವುದೊಂದೇ ಬಾಕಿ ಇತ್ತು’ ಎಂದು ನೆನಪಿಸಿಕೊಂಡಿದ್ದಾರೆ.

ನಾನೇನು ಉಣ್ಣಬೇಕು, ಉಡಬೇಕು ಎಂಬುದು ಸದಾ ನಮ್ಮದೇ ಆಯ್ಕೆಯಾಗಿರಬೇಕು. ಯಾರಿಗಾಗಿಯೂ ಬದಲಾಗಬೇಕಿಲ್ಲ. ಪ್ರೀತಿಗಾಗಿ ಬದಲಾಗಬೇಕಾದರೆ ಅದು ಪ್ರೀತಿಯೇ ಅಲ್ಲ, ಎಂದೆಲ್ಲ ಮಾತಾಡಿದ್ದಾರೆ. 2016ರಲ್ಲಿ ಕರಣ್ ಸಿಂಗ್ ಗ್ರೋವರ್ ಜೊತೆಗೆ ಮದುವೆಯಾಗಿರುವ ಬಿಪಾಶಾಗೆ ಹೆಣ್ಣುಮಗುವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.