ಪ್ರತಿತಿಂಗಳು ಋತುಚಕ್ರದ ಅವಧಿಯಲ್ಲಿ ಅವಳ ದೇಹ ನಿರಂತರವಾಗಿ ಹಾರ್ಮೋನುಗಳ ಬದಲಾವಣೆಗಳಿಗೆ ಈಡಾಗುತ್ತಲೇ ಇರುತ್ತದೆ. ಈಸ್ಟ್ರೋಜನ್ ಹಾಗೂ ಪ್ರೊಜೆಸ್ಟರಾನ್ ಹಾರ್ಮೋನುಗಳ ಸ್ರವಿಸುವಿಕೆಯಿಂದ ತೂಕದಲ್ಲಿಯೂ ಏರಿಳಿತ ಸಾಮಾನ್ಯ. ಸಂತಾನೋತ್ಪತ್ತಿಗೆ ದೇಹವನ್ನು ಸಿದ್ಧಗೊಳಿಸುವ ಪ್ರಕ್ರಿಯೆಯಲ್ಲಿ ನಿಸರ್ಗ ಹೆಣ್ಣಿನ ದೇಹದಲ್ಲಿ ಈ ರೀತಿಯ ಹಾರ್ಮೋನ್ ಏರಿಳಿತವನ್ನು ಸೃಷ್ಟಿಸುತ್ತದೆ. ಇದು ಸೃಷ್ಟಿಯ ಮುಂದುವರಿಕೆಗೆ ಅಗತ್ಯ ಕೂಡ. ಪ್ರತಿ ತಿಂಗಳು ಮುಟ್ಟಿನ ಅವಧಿಯಲ್ಲಿ ಹೆಚ್ಚುವ ಹಾಗೂ ಅನಂತರ ಮತ್ತೆ ಸಹಜ ಸ್ಥಿತಿಗೆ ಮರಳುವ ತೂಕದ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಆದರೆ ನಿರಂತರ ತೂಕ ಹೆಚ್ಚಳ ಕಂಡು ಬಂದರೆ ಮಾತ್ರ ವೈದ್ಯರನ್ನು ಕಾಣಬೇಕು.