ಪೊಂಗಲ್ ಎಂದರೆ ಸಂಕ್ರಾಂತಿ ಹಬ್ಬದ ವೇಳೆ ಅಕ್ಕಿಯಿಂದ ತಯಾರಿಸುವ ತಿನಿಸು ಎಂದೇ ಜನಪ್ರಿಯ. ಸಂಪ್ರದಾಯಬದ್ಧವಾಗಿ ಅಕ್ಕಿಯ ಪೊಂಗಲ್ ಜೊತೆಗೆ, ಪ್ರತಿಬಾರಿಯೂ ಒಂದೇ ತೆರನಾದ ಪೊಂಗಲ್ ತಯಾರಿಸಿ ಬೇಸತ್ತವರು ವಿವಿಧ ರೀತಿಯ ಪೊಂಗಲ್ ಅನ್ನೂ ಈ ಬಾರಿ ಟ್ರೈ ಮಾಡಿ.

ಸಿಹಿ ಪೊಂಗಲ್
ಸಾಮಗ್ರಿ: 2 ಕಪ್ ಸೋನಾಮಸೂರಿ ಅಕ್ಕಿ, 4 ಚಮಚ ಹೆಸರು ಬೇಳೆ, ಕಾಲು ಕೆ.ಜಿ ಬೆಲ್ಲ, ಒಂದು ಕಪ್ ನೀರು, ಒಂದು ಬಟ್ಟಲು ಗೋಡಂಬಿ, ಒಣದ್ರಾಕ್ಷಿ, 10 ಏಲಕ್ಕಿ, 2 ಲವಂಗದ ಪುಡಿ, ರುಚಿಗೆ ಉಪ್ಪು.

ವಿಧಾನ: ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಅದರಲ್ಲಿ ಹೆಸರು ಬೇಳೆಯನ್ನು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಅದು ಕೆಂಪಗಾದ ಮೇಲೆ ಅದಕ್ಕೆ ನೀರು ಹಾಕಿ ಅದರಲ್ಲಿ ತೊಳೆದಿಟ್ಟಿರುವ ಅಕ್ಕಿ ಹಾಕಿ. ಅಕ್ಕಿ ಮತ್ತು ಹೆಸರು ಬೇಳೆ ಬೇಯುವವರೆಗೆ ಬೇಯಿಸಿಕೊಳ್ಳಿ. ಅದು ಬೇಯುತ್ತಿರುವಾಗ ಇನ್ನೊಂದೆಡೆ ಬೆಲ್ಲಕ್ಕೆ ನೀರು ಹಾಕಿ ಅದು ಕರಗುವವರೆಗೆ ಕಾಯಿಸಿ. ಕಾದ ನಂತರ ಗಂಟುಗಂಟು ಇಲ್ಲದಂತೆ ಸೌಟಿನಿಂದ ತಿರುಗಿಸಿ. ಇದಕ್ಕೆ ಬೆಂದಿರುವ ಅಕ್ಕಿ, ಹೆಸರುಬೇಳೆ ಮಿಶ್ರಣ ಹಾಕಿ. ಇದಕ್ಕೆ ಉಪ್ಪು ಬೆರೆಸಿ. ನಂತರ ಏಲಕ್ಕಿ, ಲವಂಗ ಹಾಕಿ ಪುನಃ ಬೇಯಿಸಿ. ತುಪ್ಪದಲ್ಲಿ ಗೋಡಂಬಿ ಹಾಗೂ ಒಣದ್ರಾಕ್ಷಿಯನ್ನು ಹುರಿದುಕೊಳ್ಳಿ. ತಯಾರಾಗಿರುವ ಪೊಂಗಲ್ ಜೊತೆ ಸೇರಿಸಿ.

ರವೆ ಪೊಂಗಲ್
ಸಾಮಗ್ರಿ: 3 ಲೋಟ ಉಪ್ಪಿಟ್ಟು ರವೆ, ಮುಕ್ಕಾಲು ಲೋಟ ಹೆಸರುಬೇಳೆ, 10 ಲೋಟ ನೀರು, 2 ಚಮಚ ಕಾಳು ಮೆಣಸಿನ ಪುಡಿ, ಸ್ವಲ್ಪ ಗೋಡಂಬಿ, ರುಚಿಗೆ ಉಪ್ಪು, ಒಗ್ಗರಣೆಗೆ ಎಣ್ಣೆ ಅಥವಾ ತುಪ್ಪ, ಕರಿಬೇವು. ಶುಂಠಿ.

ವಿಧಾನ: ಉಪ್ಪಿಟ್ಟಿಗೆ ಮಾಡುವ ರೀತಿಯಲ್ಲಿ ರವೆ ಹುರಿದುಕೊಳ್ಳಿ ಪಕ್ಕಕ್ಕಿಡಿ. ತುಪ್ಪದಲ್ಲಿ ಗೋಡಂಬಿ ಹುರಿದಿಟ್ಟುಕೊಳ್ಳಿ. ಪ್ಯಾನ್ನಲ್ಲಿ ನಾಲ್ಕು ಲೋಟ ನೀರು ಹಾಕಿ ಬೇಯಿಸಿಕೊಳ್ಳಿ. ಇದು ಸಂಪೂರ್ಣ ಬೇಯಬಾರದು. ಮುಕ್ಕಾಲು ಪಾಲು ಬೇಯುವಂತೆ ನೋಡಿಕೊಳ್ಳಿ. ಇನ್ನೊಂದೆಡೆ ಕರಿಬೇವಿನ ಸೊಪ್ಪು, ಶುಂಠಿ, ಕಾಳು ಮೆಣಸಿನ ಪುಡಿ ಮತ್ತು ಜೀರಿಗೆಯ ಒಗ್ಗರಣೆ ಮಾಡಿ. ಈ ಒಗ್ಗರಣೆಗೆ ಬೇಯಿಸಿಟ್ಟ ಬೇಳೆ ಮತ್ತು ಹುರಿದಿಟ್ಟುಕೊಂಡಿರುವ ರವೆ ಮಿಕ್ಸ್ ಮಾಡಿ ಉಪ್ಪು ಹಾಕಿ ಚೆನ್ನಾಗಿ ಸೌಟಿನಲ್ಲಿ ತಿರುವಿ. ಇಷ್ಟು ಆಗುತ್ತಿರುವಾಗ ಇನ್ನೊಂದು ಕಡೆ ಆರೇಳು ಲೋಟ ನೀರನ್ನು ಬಿಸಿಮಾಡಿಕೊಂಡಿರಿ. ಈ ಬಿಸಿ ನೀರನ್ನು ಮೇಲಿನ ಮಿಶ್ರಣಕ್ಕೆ ಹಾಕಿ ಪ್ಯಾನ್ ಮುಚ್ಚಿ. ಆಗ್ಗಾಗ್ಗೆ ಮುಚ್ಚಳ ತೆಗೆದು ತಳಹಿಡಿಯದಂತೆ ಎಚ್ಚರಿಕೆಯಿಂದ ಸೌಟು ಹಾಕುತ್ತಿರಿ.

ಖಾರದ ಪೊಂಗಲ್
ಸಾಮಗ್ರಿ: 1 ಕಪ್ ಅಕ್ಕಿ, 1 ಕಪ್ ಹೆಸರುಬೇಳೆ, ಅರ್ಧ ಕಪ್ ಗೋಡಂಬಿ, ಕಾಲು ಬಟ್ಟಲು ಜೀರಿಗೆ, 3-4 ಚಮಚ ಹಸಿಮೆಣಸಿನ ಕಾಯಿ, 8–10 ಎಸಳು ಒಗ್ಗರಣೆ ಸೊಪ್ಪು, ಸ್ವಲ್ಪ ಕಾಯಿ ತುರಿ, ಅರ್ಧ ಚಮಚ ಅರಿಶಿಣ ಪುಡಿ, ರುಚಿಗೆ ಉಪ್ಪು, ಸ್ವಲ್ಪ ತುಪ್ಪ (ಎಣ್ಣೆಯಾದರೂ ಪರವಾಗಿಲ್ಲ), ನೀರು.

ವಿಧಾನ: ಮೊದಲು ಹೆಸರು ಬೇಳೆ ಮತ್ತು ಅಕ್ಕಿಯನ್ನು ತೊಳೆದು ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು. ಗೋಡಂಬಿಯನ್ನು ತುಪ್ಪದಲ್ಲಿ ಕೆಂಪಗಾಗುವವರೆಗೆ ಹುರಿದಿಟ್ಟುಕೊಳ್ಳಿ. ಕುಕ್ಕರ್ ಅಥವಾ ಒಂದು ಪ್ಯಾನ್ನಲ್ಲಿ ತುಪ್ಪ ಹಾಕಿ ಸವರಿ. ಇದಕ್ಕೆ ಸಾಸಿವೆ ಮತ್ತು ಜೀರಿಗೆ ಹಾಕಿ, ಸಾಸಿವೆ ಚಿಟಚಿಟ ಎಂದಾಗ ಹಸಿ ಮೆಣಸಿನ ಕಾಯಿ ಹಾಕಿ ಹುರಿಯಿರಿ. ಇದು ಚೆನ್ನಾಗಿ ಫ್ರೈ ಆದ ನಂತರ ಅದಕ್ಕೆ ಹೆಸರು ಬೇಳೆ ಹಾಕಿ ಪುನಃ ಹುರಿಯಿರಿ. ಅದಕ್ಕೆ ಅಕ್ಕಿ ಸೇರಿಸಿ ನೀರು ಬೆರೆಸಿ. ತುರಿದ ತೆಂಗಿನ ಕಾಯಿ, ಅರಿಶಿಣ, ರುಚಿಗೆ ತಕ್ಕ ಉಪ್ಪು ಹಾಕಿ ಬೇಯಿಸಿ. (ಕುಕ್ಕರ್ನಲ್ಲಿದಾದರೆ 3 ಸೀಟಿ ಬರಬೇಕು). ಬೆಂದ ನಂತರ ತುಪ್ಪದಲ್ಲಿ ಹುರಿದಿಟ್ಟುಕೊಂಡಿರುವ ಗೋಡಂಬಿ ಹಾಕಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ. ಇನ್ನಷ್ಟು ಖಾರ ಬೇಕೆಂದರೆ ಕಾಳು ಮೆಣಸಿನ ಪುಡಿ ಸೇರಿಸಬಹುದು.

ತರಕಾರಿ ಪೊಂಗಲ್
ಸಾಮಗ್ರಿ: ಒಂದು ಕಪ್ ಅಕ್ಕಿ, ಒಂದು ಕಪ್ ಹೆಸರುಬೇಳೆ, 2 ಕಪ್ ಹೆಚ್ಚಿಕೊಂಡಿರುವ ತರಕಾರಿಗಳು (ಬೀನ್ಸ್, ಗೋಬಿ, ಕ್ಯಾರೆಟ್, ಕ್ಯಾಪ್ಸಿಕಂ ಇತ್ಯಾದಿ...), 2 ದೊಡ್ಡ ಹಸಿಮೆಣಸಿನಕಾಯಿ, ಕಾಲು ಚಮಚ ಅರಿಶಿಣದ ಪುಡಿ, ಒಂದು ಕಪ್ ಹಾಲು, ಒಂದು ಈರುಳ್ಳಿ, 1 ನಿಂಬೆಹಣ್ಣು, ಕಾಲು ಬಟ್ಟಲು ಗೋಡಂಬಿ, ರುಚಿಗೆ ಉಪ್ಪು, ಅರ್ಧ ಕಪ್ ತೆಂಗಿನ ತುರಿ, ಸ್ವಲ್ಪ ಶುಂಠಿ, ಒಗ್ಗರಣೆಗೆ ಅಗತ್ಯ ಇರುವಷ್ಟು ತುಪ್ಪ, ಜೀರಿಗೆ, ಇಂಗು, ಸಾಸಿವೆ.

ವಿಧಾನ: ಮೊದಲು ಅಕ್ಕಿ ಚೆನ್ನಾಗಿ ತೊಳೆದಿಟ್ಟುಕೊಳ್ಳಿ. ಹೆಸರುಬೇಳೆಯನ್ನು ಚಿಕ್ಕ ಉರಿಯಲ್ಲಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಫ್ರೈ ಆದ ನಂತರ ಇದನ್ನು ನೀರಿನಿಂದ ತೊಳೆಯಿರಿ. ಇದಕ್ಕೆ ಅಕ್ಕಿ, ಸ್ವಲ್ಪ ತುಪ್ಪ, ಅರಿಶಿಣ, ಹೆಚ್ಚಿದ ತರಕಾರಿಗಳನ್ನು ಮಿಕ್ಸ್ ಮಾಡಿ ಅಗತ್ಯ ಇರುವಷ್ಟು ನೀರು ಸೇರಿಸಿ ಕುಕ್ಕರ್ ನಲ್ಲಿ ಬೇಯಿಸಿ (ಚೆನ್ನಾಗಿ ಬೇಯಬೇಕೆಂದರೆ ಮೂರು ಸೀಟಿ ಆಗಬೇಕು). ನಂತರ ಈ ಮಿಶ್ರಣಕ್ಕೆ ಹಾಲು, ಹಸಿಮೆಣಸು, ಶುಂಠಿ, ಉಪ್ಪು, ನಿಂಬೆರಸ, ಈರುಳ್ಳಿ, ಕರಿಬೇವು, ತೆಂಗಿನತುರಿ ಎಲ್ಲವನ್ನೂ ಸೇರಿಸಿ ಮಿಕ್ಸ್ ಮಾಡಿ. ಮಿಶ್ರಣ ದಪ್ಪಗಾಗಿದೆ ಎನಿಸಿದರೆ ನೀರು ಸೇರಿಸಬಹುದು. ಇದನ್ನು ಸೌಟಿನಿಂದ ತಿರುಗಿಸುತ್ತ ಕುದಿ ಬರುವವರೆಗೆ ಕಾಯಿಸಿ. ತುಪ್ಪ ಅಥವಾ ಎಣ್ಣೆಯಲ್ಲಿ ಗೋಡಂಬಿ, ಸಾಸಿವೆ, ಜೀರಿಗೆ, ಇಂಗಿನ ಒಗ್ಗರಣೆ ಮಾಡಿ ಸೇರಿಸಿ.

ಅವಲಕ್ಕಿ ಪೊಂಗಲ್
ಸಾಮಗ್ರಿ: ಒಂದು ಕಪ್ ಅವಲಕ್ಕಿ, ಒಂದು ಕಪ್ ಬೆಲ್ಲ, ಒಂದು ಕಪ್ ತೆಂಗಿನ ತುರಿ, ಸ್ವಲ್ಪ ಏಲಕ್ಕಿ ಪುಡಿ, ಕಾಲು ಬಟ್ಟಲು ಗೋಡಂಬಿ, ದ್ರಾಕ್ಷಿ.
ವಿಧಾನ: ಅವಲಕ್ಕಿಯನ್ನು ನೀರಿನಲ್ಲಿ ನೆನೆಸಿಡಿ. ಒಂದು ಬಾಣಲೆಗೆ ಬೆಲ್ಲವನ್ನು ಹಾಕಿ ಪಾಕ ಮಾಡಿಕೊಳ್ಳಿ. ಅದಕ್ಕೆ ಅವಲಕ್ಕಿಯನ್ನು ಮಿಕ್ಸ್ ಮಾಡಿ. ಅದಕ್ಕೆ ತೆಂಗಿನ ತುರಿ, ಏಲಕ್ಕಿ ಹಾಕಿ ಕುದಿಸಿ. ಅವಲಕ್ಕಿ ಬೆಲ್ಲ ಸ್ವಲ್ಪ ಗಟ್ಟಿಯಾದ ನಂತರ ಗೋಡಂಬಿ, ದ್ರಾಕ್ಷಿ ಹಾಕಿ.

ಮೊದಲ ಮಮ್
‘ಮಮ್ ಮಾಡ್ತೀರಿ’ ಅಂತ ಜಗತ್ತಿನ ಪ್ರೀತಿ ಎಲ್ಲ ಧ್ವನಿಯಲ್ಲಿ ತುಂಬಿ ಮಗುವಿಗೆ ಕೇಳುವ ಅಮ್ಮ, ಗುಟುಕು ಬೇಡುವ ಗುಬ್ಬಚ್ಚಿಯಂಥ ಕಂಗಳು ಹೊತ್ತ ಮಗು... ಹಸಿವು, ಪ್ರೀತಿಯದ್ದು, ಹೊಟ್ಟೆಯದ್ದು. ಎರಡನ್ನೂ ಉಣಿಸುವ ಅಮ್ಮನದ್ದು ಅಮಿತ ಕಾಳಜಿ. ಮಗುವಿನ ಹೊಟ್ಟೆಗೆ ಹಿತವಾಗಿರಬೇಕು. ಪೋಷಕಾಂಶಗಳು ದೊರೆಯಬೇಕು. ಪರಿಶುದ್ಧವಾಗಿರಬೇಕು. ಅಂಥ ಅಡುಗೆಯ ವಿವರ ನಿಮ್ಮಲ್ಲಿದ್ದರೆ ಓದುಗರೊಂದಿಗೆ ಹಂಚಿಕೊಳ್ಳಿ. ಯಾವ ಕಾಲದಲ್ಲಿ ಏನನ್ನು ಉಣ್ಣಿಸಿದರೆ ಒಳಿತು, ಯಾವ ತಿಂಗಳಿನಲ್ಲಿ ಏನನ್ನು ನೀಡಬೇಕು ಎಂಬ ಮಾಹಿತಿ ಇರಲಿ. ನಿಮ್ಮ ವಿಳಾಸ, ಚಿತ್ರ, ಫೋನ್ ನಂಬರ್ ಇತ್ಯಾದಿ ಮಾಹಿತಿ ನೀಡಲು ಮರೆಯದಿರಿ. ಬರಹ ಅಥವಾ ನುಡಿ ತಂತ್ರಾಂಶದಲ್ಲಿ ಟೈಪ್ ಮಾಡಿಯೇ ಕಳುಹಿಸಿ.
ಇ–ಮೇಲ್ ವಿಳಾಸ: bhoomika@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.