ಲಾಹೋರ್: ಆನ್ಲೈನ್ ಗೇಮ್ ‘ಪಬ್ಜಿ’ ಪ್ರಭಾವದಿಂದ 14 ವರ್ಷದ ಬಾಲಕನೊಬ್ಬ ಇಡೀ ಕುಟುಂಬದವರನ್ನು ಹತ್ಯೆ ಮಾಡಿದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿರುವುದಾಗಿ ಅಲ್ಲಿನ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

45 ವರ್ಷ ವಯಸ್ಸಿನ ಆರೋಗ್ಯ ಕಾರ್ಯಕರ್ತೆ ನಹೀದ್ ಮುಬಾರಕ್, ಅವರ 22 ವರ್ಷದ ಮಗ ತೈಮೂರ್ ಹಾಗೂ 17 ವರ್ಷದ ಇಬ್ಬರು ಹೆಣ್ಣುಮಕ್ಕಳ ಮೃತದೇಹಗಳು ಕಳೆದ ವಾರ ಲಾಹೋರ್ನ ಕನ್ಹಾ ಪ್ರದೇಶದಲ್ಲಿ ಪತ್ತೆಯಾಗಿದ್ದವು.

ನಹೀದ್ ಮುಬಾರಕ್ ಅವರ 14 ವರ್ಷದ ಪುತ್ರ ಮಾತ್ರ ಬದುಕಿದ್ದಾನೆ. ಆತನೇ ಕೊಲೆಗಾರ ಎಂದು ಪೊಲೀಸರ ಪ್ರಕಟಣೆ ತಿಳಿಸಿದೆ.

ಪಬ್ಜಿ ವ್ಯಸನಿಯಾಗಿದ್ದ ಬಾಲಕ ಆನ್ಲೈನ್ ಗೇಮ್ ಪ್ರಭಾವದಿಂದ ತಾಯಿ ಮತ್ತು ಸಹೋದರ, ಸಹೋದರಿಯರನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ದಿನದ ಹೆಚ್ಚಿನ ಸಮಯವನ್ನು ಆನ್ಲೈನ್ ಗೇಮ್ನಲ್ಲಿ ಕಳೆಯುತ್ತಿದ್ದುದರಿಂದ ಆತನಲ್ಲಿ ಮಾನಸಿಕ ಸಮಸ್ಯೆ ಉಂಟಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ನಹೀದ್ ವಿವಾಹ ವಿಚ್ಛೇದನ ಪಡೆದ ಮಹಿಳೆಯಾಗಿದ್ದು, ಕಲಿಕೆಯ ಕಡೆ ಹೆಚ್ಚಿನ ಗಮನ ನೀಡದೆ ಪಬ್ಜಿ ಆಡುತ್ತಾ ಸಮಯ ಕಳೆಯುವುದಕ್ಕಾಗಿ ಮಗನನ್ನು ಆಗಾಗ್ಗೆ ಗದರುತ್ತಿದ್ದರು. ಘಟನೆ ನಡೆದ ದಿನ ಕೂಡ ಮಗನನ್ನು ಗದರಿದ್ದರು. ಬಳಿಕ ಕವಾಟಿನಿಂದ ತಾಯಿಯ ಪಿಸ್ತೂಲ್ ಅನ್ನು ಕೈಗೆತ್ತಿಕೊಂಡಿದ್ದ ಬಾಲಕ ನಿದ್ರಿಸುತ್ತಿದ್ದ ವೇಳೆಯಲ್ಲಿ ಆಕೆಯನ್ನು ಹತ್ಯೆ ಮಾಡಿದ್ದಲ್ಲದೆ, ಸಹೋದರ–ಸಹೋದರಿಯರನ್ನೂ ಕೊಲೆ ಮಾಡಿದ್ದಾನೆ. ಮರುದಿನ ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ಬೆಳಕಿಗೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.