ತೈಪೆ: ‘ಈ ವರ್ಷ ಜಗತ್ತಿನಾದ್ಯಂತ 200 ಕೋಟಿ ಲಸಿಕೆ ಪೂರೈಸುವ ಗುರಿಯನ್ನು ಹೊಂದಿದ್ದೇವೆ’ ಎಂದು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಹೇಳಿದ್ದಾರೆ.

ಈ ಬಗ್ಗೆ ಷಿ ಜಿನ್‌ಪಿಂಗ್ ಅವರು ಕೋವಿಡ್ -19ರ ಲಸಿಕಾ ಸಹಕಾರ ಕುರಿತು ಅಂತರಾಷ್ಟ್ರೀಯ ವೇದಿಕೆಯೊಂದರಲ್ಲಿಈ ಘೋಷಣೆ ಮಾಡಿದ್ದಾರೆ ಎಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ವರ್ಚುವಲ್ ಕಾರ್ಯಕ್ರಮವನ್ನು ಚೀನಾ ಆಯೋಜಿಸಿತ್ತು.

‘ಚೀನಾವು ಕಳೆದ ವರ್ಷ ಸೆಪ್ಟೆಂಬರ್‌ನಿಂದ ಈವರೆಗೆ ಜಾಗತಿಕವಾಗಿ 77 ಕೋಟಿ ಡೋಸ್‌ಗಳನ್ನು ವಿತರಣೆ ಮಾಡಿದೆ’ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿದೆ.

‘ಕೋವ್ಯಾಕ್ಸ್’ ಜಾಗತಿಕ ಲಸಿಕೆ ಹಂಚಿಕೆ ಕಾರ್ಯಕ್ರಮದೊಂದಿಗಿನ ಒಪ್ಪಂದ ಸೇರಿದಂತೆ ಇತರೆ ದ್ವಿಪಕ್ಷೀಯ ಒಪ್ಪಂದಗಳಡಿ ಚೀನಾವು ಹೆಚ್ಚಿನ ಡೋಸ್‌ಗಳನ್ನು ರಫ್ತು ಮಾಡಿದೆ ಎಂದು ಸಚಿವಾಲಯವು ತಿಳಿಸಿದೆ.

ನ್ಯಾಯಾಧೀಶರ ಭದ್ರತೆ ಕುರಿತು ವರದಿ ನೀಡಲು ರಾಜ್ಯಸರ್ಕಾರಗಳಿಗೆ ಸುಪ್ರೀಂ ಸೂಚನೆ

‘ವಿಶ್ವಸಂಸ್ಥೆ ಬೆಂಬಲಿತ ಕೋವ್ಯಾಕ್ಸ್ ಕಾರ್ಯಕ್ರಮಕ್ಕೆ ಚೀನಾವು ದೇಶಿಯವಾಗಿ ಅಭಿವೃದ್ಧಿ ಪಡಿಸಿರುವ ಎರಡು ಲಸಿಕೆಗಳ 55 ಕೋಟಿ ಡೋಸ್‌ಗಳನ್ನು ನೀಡಲಿದೆ. ಅಲ್ಲದೆ ಈ ಕಾರ್ಯಕ್ರಮಕ್ಕೆ 100 ಕೋಟಿ ಡಾಲರ್ ನೀಡುವುದಾಗಿಯೂ ಷಿ ಜಿನ್‌ಪಿಂಗ್ ಭರವಸೆ ನೀಡಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಜಾಗತಿಕವಾಗಿ 400 ಕೋಟಿಗೂ ಹೆಚ್ಚು ಲಸಿಕೆಯ ಡೋಸ್‌ಗಳನ್ನು ನೀಡಲಾಗಿದೆ. ಆದರೆ ಇದರಲ್ಲಿ ಶೇಕಡ 75ಕ್ಕೂ ಹೆಚ್ಚು ಪ್ರಮಾಣವು ಕೇವಲ 10 ದೇಶಗಳಲ್ಲಿ ವಿತರಣೆಯಾಗಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ (ಡಬ್ಲ್ಯುಎಚ್‌ಒ) ಟೆಡ್ರೋಸ್ ಅಡಾನೊಮ್ ಗೆಬ್ರೆಯೆಸಸ್ ಅವರು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಹೇಳಿದರು.

ಖೇಲ್ ರತ್ನ ಹೆಸರು ಇನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ: ಪ್ರಧಾನಿ ಮೋದಿ ಘೋಷಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.