ನವದೆಹಲಿ: ಗಾಲ್ವಾನ್ ಕಣಿವೆಯಲ್ಲಿ ಭಾರತದೊಂದಿಗೆ 2020ರಲ್ಲಿ ನಡೆದ ಸಂಘರ್ಷದಲ್ಲಿ ಮೃತಪಟ್ಟ ಚೀನಾ ಸೈನಿಕರ ಸಂಖ್ಯೆಯು ಅಧಿಕೃತ ಸಂಖ್ಯೆಗಿಂತಲೂ ಅಧಿಕವಾಗಿರುವ ಸಾಧ್ಯತೆಗಳಿವೆ ಎಂದು ಆಸ್ಟ್ರೇಲಿಯಾದ ಪತ್ರಿಕೆಯೊಂದು ಬುಧವಾರ ವರದಿ ಮಾಡಿದೆ.

ಘರ್ಷಣೆಯಲ್ಲಿ ಮೃತಪಟ್ಟವರಿಗಿಂತಲೂ, ಗಾಲ್ವಾನ್ ನದಿಯನ್ನು ದಾಟುವ ಧಾವಂತದಲ್ಲಿ ಕೊಚ್ಚಿಹೋದವರ ಸಂಖ್ಯೆಯೇ ಅಧಿಕವಾಗಿದೆ. ಚೀನಾ ಈ ವಿಚಾರವನ್ನು ಹೊರ ಜಗತ್ತಿಗೆ ಬಹಿರಂಗಪಡಿಸಿಲ್ಲ ಎಂದು ‘ದಿ ಕ್ಲಾಕ್ಸನ್’ ವರದಿ ಮಾಡಿದೆ.

ಸಂಶೋಧಕರು ಮತ್ತು ಚೀನಾದ ಬ್ಲಾಗರ್‌ಗಳ ಸಂಶೋಧನೆಗಳನ್ನು ಉಲ್ಲೇಖಿಸಿ ‘ಕ್ಲಾಕ್ಸನ್’ ವರದಿ ಮಾಡಿದೆ. ಮಾಹಿತಿ ಒದಗಿಸಿರುವವರು ಹೆಸರುಗಳನ್ನು ಭದ್ರತೆ ಭದ್ರತೆಯ ಕಾರಣದಿಂದ ಬಹಿರಂಗಪಡಿಸಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಚೀನೀ ಸಾವು ನೋವುಗಳು ಅಧಿಕೃತ ಸಂಖ್ಯೆಗಿಂತಲೂ ಅಧಿಕ ಎಂಬ ವಾದಗಳು ಹೊಸದೇನಲ್ಲ. ಆದರೂ ಸಾಮಾಜಿಕ ಮಾಧ್ಯಮ ಸಂಶೋಧಕರ ಗುಂಪು ಒದಗಿಸಿದ ಪುರಾವೆಗಳ ಆಧಾರದ ಮೇಲೆ ಪ್ರಕಟಿಸಿರುವ ವರದಿಯು, ಮೃತಪಟ್ಟ ಸೈನಿಕರ ಸಂಖ್ಯೆ ಅಧಿಕ ಎಂಬುದನ್ನು ಬೆಂಬಲಿಸುತ್ತದೆ’ ಎಂದು ಪತ್ರಿಕೆ ಹೇಳಿಕೊಂಡಿದೆ.

2020ರ ಜೂನ್ 15 ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದಿದ್ದ ಘರ್ಷಣೆಯ ನಂತರ ಪೂರ್ವ ಲಡಾಖ್ ಗಡಿ ಉದ್ವಿಗ್ನಗೊಂಡಿತ್ತು.

ಭಾರತೀಯ ಸೇನೆಯ ಇಪ್ಪತ್ತು ಸಿಬ್ಬಂದಿ ಘರ್ಷಣೆಯಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ್ದರು. ಇದು ದಶಕಗಳಲ್ಲಿ ಎರಡು ಕಡೆಯ ನಡುವಿನ ಅತ್ಯಂತ ಗಂಭೀರವಾದ ಮಿಲಿಟರಿ ಸಂಘರ್ಷವೆಂದೇ ಗುರಿತಿಸಲ್ಪಟ್ಟಿತ್ತು.

ಏನು ಹೇಳಿತ್ತು ಚೀನಾ?

ಭಾರತೀಯ ಸೇನೆಯೊಂದಿಗಿನ ಘರ್ಷಣೆಯಲ್ಲಿ ತನ್ನ ಕಡೆ ಉಂಟಾದ ಸಾವುನೋವಿನ ಬಗ್ಗೆ ಚೀನಾ 8 ತಿಂಗಳ ಬಳಿಕೆ ಅಧಿಕೃತ ಸಂಖ್ಯೆಗಳನ್ನು ಹೇಳಿತ್ತು. ಘರ್ಷಣೆಯಲ್ಲಿ ಸೇನೆಯ ಮಿಲಿಟರಿ ಅಧಿಕಾರಿಗಳು ಮತ್ತು ಸೈನಿಕರು ಸೇರಿ ಒಟ್ಟುಐವರು ಮೃತಪಟ್ಟಿದ್ದಾರೆ ಎಂದು ಚೀನಾ 2021ರ ಫೆಬ್ರುವರಿ 19ರಂದುಒಪ್ಪಿಕೊಂಡಿತ್ತು. ಅವರಿಗೆ ಶೌರ್ಯ ಪ್ರಶಸ್ತಿ ನೀಡುವುದಾಗಿಯೂ ಘೋಷಿಸಿತ್ತು.ಆದರೂ ಸಾವಿನ ಸಂಖ್ಯೆ ಹೆಚ್ಚು ಎಂಬ ವಾದ ವ್ಯಾಪಕವಾಗಿದೆ.

ಇವುಗಳನ್ನೂ ಓದಿ

ಗಾಲ್ವಾನ್ ಸಂಘರ್ಷ: ಬಲಿಯಾದ ಚೀನಾ ಯೋಧರ ವಿವರ ಕೊನೆಗೂ ಬಹಿರಂಗ

ಗಾಲ್ವನ್ ಸಂಘರ್ಷ | 4 ಸೈನಿಕರ ಸಾವು: ಕೊನೆಗೂ ಒಪ್ಪಿಕೊಂಡ ಚೀನಾ

ಗಾಲ್ವನ್ ಕಣಿವೆ ಸಂಘರ್ಷದ ವಿಡಿಯೊ ಬಿಡುಗಡೆ ಮಾಡಿದ ಚೀನಾ

ಹಿಮದಲ್ಲೂ ಸೈನಿಕರನ್ನು ಬೆಚ್ಚಗಿಡುತ್ತೆ ಈ ಟೆಂಟ್ | ಇದರ ವಿಶೇಷತೆ ತಿಳಿಯಲು ವಿಡಿಯೊ ನೋಡಿ

ಗಾಲ್ವನ್ ಸಂಘರ್ಷದ ಬಳಿಕ ಭಾರತದ ಪವರ್ ಗ್ರಿಡ್ಗಳಿಗೆ ಚೀನಾ ಸೈಬರ್ ದಾಳಿ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.