ನವದೆಹಲಿ (ಪಿಟಿಐ): ದೇಶದಲ್ಲಿ ಕೋವಿಡ್–19 ಪ್ರಕರಣಗಳು ವ್ಯಾಪಕವಾಗುತ್ತಿರುವುದರಿಂದ ಭಾರತಕ್ಕೆ ಬರುವ ಎಲ್ಲ ವಿಮಾನಗಳ ಹಾರಾಟವನ್ನು ಹಾಂಕಾಂಗ್ ಸರ್ಕಾರವು ಮಂಗಳವಾರದಿಂದ(ಏಪ್ರಿಲ್ 20) ಮೇ 3ರ ತನಕ ನಿಷೇಧಿಸಿದೆ ಎಂದು ವಿಮಾನಯಾನ ಸಚಿವಾಲಯದ ಮೂಲಗಳು ತಿಳಿಸಿವೆ.

ಹಾಂಕಾಂಗ್ ಸರ್ಕಾರವು ಭಾರತ, ಪಾಕಿಸ್ತಾನ ಹಾಗೂ ಫಿಲಿಪ್ಪೀನ್ಸ್‌ನಿಂದ ತೆರಳುವ ಹಾಗೂ ಬರುವ ಎಲ್ಲಾ ವಿಮಾನಗಳ ಹಾರಾಟವನ್ನು ಮೇ 3ರವರೆಗೆ ರದ್ದುಗೊಳಿಸಿದೆ.

ಈಚೆಗೆ ಹಾಂಕಾಂಗ್‌ಗೆ ತೆರಳುವ ವಿಸ್ತಾರ ವಿಮಾನಗಳಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರಲ್ಲಿ ಕೋವಿಡ್–19 ದೃಢಪಟ್ಟಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ನಿಯಮಗಳ ಪ್ರಕಾರ, ಹಾಂಕಾಂಗ್‌ಗೆ ತೆರಳುವ ಎಲ್ಲಾ ಪ್ರಯಾಣಿಕರು ಪ್ರಯಾಣಕ್ಕೂ 72 ಗಂಟೆ ಮುಂಚಿತವಾಗಿ ಪರೀಕ್ಷೆ ನಡೆಸಿ, ಕೋವಿಡ್ ನೆಗೆಟೀವ್ ಆರ್‌ಟಿಪಿಸಿಆರ್ ವರದಿ ಪಡೆದು ತರಬೇಕು. ಆದರೆ ಪ್ರಯಾಣಿಕರಲ್ಲಿ ಕೋವಿಡ್–19 ದೃಢಪಟ್ಟಿದ್ದರಿಂದ ಮೇ 2ರವರೆಗೆ ಮುಂಬೈ– ಹಾಂಕಾಂಗ್ ಮಾರ್ಗದ ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ಭಾನುವಾರ ಬೆಳಿಗ್ಗೆ ತಿಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.