ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ಕೊಲಂಬೊದಲ್ಲಿನ ತಮ್ಮ ಅಧಿಕೃತ ನಿವಾಸದಿಂದ ಪಲಾಯನ ಮಾಡಿದ ಗಂಟೆಗಳ ನಂತರ ಸಾವಿರಾರು ಪ್ರತಿಭಟನಾಕಾರರು ಅವರ ನಿವಾಸಕ್ಕೆನುಗ್ಗಿದ್ದಾರೆ.

ಈ ಸಂದರ್ಭ ಕೆಲವು ಪ್ರತಿಭಟನಾಕಾರರು ಧ್ಯಕ್ಷರ ಮನೆಯ ಈಜುಕೊಳದಲ್ಲಿ ಈಜಿದ್ದಾರೆ. ಈ ವಿಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಕೆಲವು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದರೆ, ಇನ್ನು ಕೆಲವರು ವಿಡಿಯೊ ಮಾಡುತ್ತಿದ್ದಾರೆ.

ಆರ್ಥಿಕ ವಿನಾಶದಿಂದ ದೇಶವನ್ನು ರಕ್ಷಿಸುವಲ್ಲಿ ವಿಫಲವಾದ ಸರ್ಕಾರದ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದೆ. ದೇಶದ ವಿವಿಧೆಡೆಯಿಂದ ಬಸ್ಗಳು, ರೈಲುಗಳು ಮತ್ತು ಟ್ರಕ್ಗಳಲ್ಲಿ ಆಗಮಿಸಿದ್ದ ಪ್ರತಿಭಟನಾಕಾರರು ಅಧ್ಯಕ್ಷರಮನೆಗೆ ನುಗ್ಗಿದರು. ಈ ಬಗ್ಗೆ ಮೊದಲೇ ಅರಿತಿದ್ದ ಅಧ್ಯಕ್ಷ ಗೊಟಬಯ ರಾಜಪಕ್ಸ ಅಧಿಕೃತ ನಿವಾಸ ಬಿಟ್ಟು ಶುಕ್ರವಾರವೇ ಪಲಾಯನ ಮಾಡಿದ್ದಾರೆ.

ಈ ಮಧ್ಯೆ, ಪ್ರಧಾನಿ ರಾನಿಲ್ ವಿಕ್ರಮ ಸಿಂಘೆ ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದು, ಎಲ್ಲ ಪಕ್ಷಗಳ ಸರ್ಕಾರ ರಚನೆಗೆ ಅನುವು ಮಾಡಿಕೊಟ್ಟಿದ್ದಾರೆ.

ಇವನ್ನೂ ಓದಿ..

ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ರಾಜೀನಾಮೆ

ಲಂಕಾ ಅಧ್ಯಕ್ಷರ ಮನೆಗೆ ನುಗ್ಗಿದ ಪ್ರತಿಭಟನಾಕಾರರು: ಮನೆ ಬಿಟ್ಟು ಪರಾರಿಯಾದ ಗೊಟಬಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.