ಹಾರ್ಕಿವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರಿದಿದ್ದು, ಮಂಗಳವಾರ ಬೆಳಗ್ಗೆ ಹಾರ್ಕಿವ್ ನಗರದ ಪ್ರಾದೇಶಿಕ ಆಡಳಿತದ ಕಟ್ಟಡ ಫ್ರೀಡಮ್ ಸ್ಕ್ವೇರ್ ಮೇಲೆ ಕ್ಷಿಪಣಿ ಅಪ್ಪಳಿಸುವ ವಿಡಿಯೊ ಮನ ಕಲಕುವಂತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿದಾಡುತ್ತಿದ್ದು ನೆಟ್ಟಿಗರು ಆಘಾತ ವ್ಯಕ್ತಪಡಿಸಿದ್ದಾರೆ.

ಫ್ರೀಡಮ್ ಸ್ಕ್ವೇರ್ ಕಟ್ಟಡ ಮುಂದಿನ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದ ಸಂದರ್ಭದಲ್ಲೇ ಕ್ಷಿಪಣಿಯೊಂದು ಕಟ್ಟಡ ಮೇಲೆ ಅಪ್ಪಳಿಸುವ ದೃಶ್ಯ ವಿಡಿಯೊದಲ್ಲಿದೆ. ಕ್ಷಿಪಣಿ ದಾಳಿಯ ನಂತರದ ಸ್ಥಿತಿಗತಿಯನ್ನು 'ನ್ಯೂಯಾರ್ಕ್ ಟೈಮ್ಸ್ ವರ್ಲ್ಡ್' ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

'ರಷ್ಯಾ ಅನಾಗರಿಕವಾಗಿ ದಾಳಿ ನಡೆಸುತ್ತಿದೆ. ಖಂಡಿತವಾಗಿಯೂ ರಷ್ಯಾ ಸೋಲುತ್ತದೆ. ಅವರ ಬಳಿ ಬೃಹತ್ ಯುದ್ಧ ಟ್ಯಾಂಕ್ ಮತ್ತು ಶಸ್ತ್ರಾಸ್ತ್ರಗಳನ್ನು ಬಿಟ್ಟು ಬೇರೆ ವ್ಯವಸ್ಥೆಗಳು ಇಲ್ಲ' ಎಂದು ಉಕ್ರೇನ್ ಪರ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದ ಸ್ವಯಂ ಸೇವಕ ಬೊರಿಸ್ ರೆಡಿನ್ ತಿಳಿಸಿದ್ದಾರೆ.

ಹಾರ್ಕಿವ್: ಪ್ರಾದೇಶಿಕ ಆಡಳಿತದ ಕಟ್ಟಡ, ವಸತಿ ಪ್ರದೇಶಗಳಲ್ಲಿ ರಷ್ಯಾ ಕ್ಷಿಪಣಿ ದಾಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.